ಕಲ್ಲುಗಾಡಿನಂತಿರುವ ಪ್ರದೇಶದಲ್ಲಿ ಯಶಸ್ವಿ ಅಡಿಕೆ ತೋಟ

       ಸಾಮಾನ್ಯ ಜಮೀನಿನಲ್ಲೇ ಕೃಷಿ ಮಾಡಲು ಒದ್ದಾಡುವ ಈಗಿನ ರೈತರ ಮಧ್ಯೆ ಇಲ್ಲೊಬ್ಬ ರೈತರು ಕಲ್ಲುಗಾಡಿನಂತಿರುವ ಬೆಟ್ಟದ ಪ್ರದೇಶದಲ್ಲಿ ಅಡಿಕೆ, ಕಾಫಿ ಬೆಳೆದು ಕೃಷಿ ಮಾಡುತ್ತಿದ್ದಾರೆ. ರೋಗಗಳಿಂದ ಕಾಡಿದರೂ ಸಾವಯವ ಕೃಷಿ ಪದ್ಧತಿಯಿಂದ ತೋಟ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತ ಅನುಭವ ಏನು? ಇವರು ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಬನ್ನಿ ನೋಡೋಣ.

ಕೆ.ಜಿಗೆ 750-850 ರೂ. ಬೆಲೆ ಇರುವ ಲವಂಗ ಬೆಳೆಯುವುದು ಹೇಗೆ?

       ಲವಂಗವು ವಿಶ್ವದಾದ್ಯಂತ ಒಂದು ಪ್ರಖ್ಯಾತ ಮಸಾಲೆ ಪದಾರ್ಥವಾಗಿದ್ದು, ಶತಶತಮಾನಗಳಿಂದಲೂ ಅಡುಗೆ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬೆಳೆ ಇಂಡೋನೇಷ್ಯಾದ ಮೊಲುಕ್ಕಾಸ್ ಅಥವಾ ಸ್ಪೈಸ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಆದರೆ ಈಗ ಭಾರತ, ಶ್ರೀಲಂಕಾ, ಮಡಗಾಸ್ಕರ್ ಮತ್ತು ಜಾಂಜಿಬಾರ್ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಬೆಳೆಯಲಾಗುತ್ತದೆ. ಅಧಿಕ ಪರಿಮಳ ಮತ್ತು ರುಚಿಯಲ್ಲಿ ಗಾಢತೆಯನ್ನು ಹೊಂದಿರುವ ಲವಂಗವನ್ನು ಅನೇಕ ಆಹಾರಗಳಲ್ಲಿ, ವಿಶೇಷವಾಗಿ ಮಾಂಸ ಮತ್ತು ಬೇಕರಿ ಉತ್ಪನ್ನಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗ ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹಾಗಾದರೆ ಇದನ್ನು ಬೆಳೆಯುವ ರೀತಿ ಹೇಗೆ? ವಾತಾವರಣ ಹೇಗಿರಬೇಕು?

ಕೃಷಿ ಭೂಮಿಯ ವೈಜ್ಞಾನಿಕ, ನೈಸರ್ಗಿಕ ಸಿದ್ಧತೆ ಹೇಗೆ?

       ಯಾವುದೇ ಬೆಳೆ ಬೆಳೆಯಲು ಭೂಮಿ ಸಿದ್ಧತೆ ತುಂಬಾ ಮುಖ್ಯ. ಕೃಷಿಯಲ್ಲಿ ಬೆಳೆಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮತ್ತು ಇಳುವರಿಯನ್ನು ಹೆಚ್ಚಿಸಲು ಭೂಮಿಯನ್ನು ಸಿದ್ಧಪಡಿಸುವುದು ಒಂದು ಅತ್ಯಗತ್ಯ ಹಂತ. ಆದರೆ ಕೇವಲ ಉಳುಮೆ ಮಾಡಿ ಭೂಮಿ ಸಿದ್ಧತೆ ಎನ್ನುವುದು ತಪ್ಪು. ಭೂಮಿ ಸಿದ್ಧತೆ ಅಂದರೇನು? ಅದರ ಮಹತ್ವ ಏನು? ಭೂಮಿ ಸಿದ್ಧತೆ ಮಾಡುವ ರೀತಿ ಹೇಗೆ? ಭೂಮಿ ಸಿದ್ಧತೆ ಮಾಡುವುದರ ಬಗ್ಗೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ ಆರ್ ಹುಲ್ಲುನಾಚೇಗೌಡರು ಏನು ಹೇಳುತ್ತಾರೆ? ನೋಡೋಣ ಬನ್ನಿ.

ರೈತನ ಶತ್ರು ಗೊಣ್ಣೆ ಹುಳು(ಬೇರು ಹುಳು) ನಿಯಂತ್ರಣ ಹೀಗೆ ಮಾಡಿ?

       ಗೊಣ್ಣೆ ಹುಳು/ಬೇರು ಹುಳು ಮಣ್ಣಿನಲ್ಲಿ ಜೀವಿಸುವ ಒಂದು ಕೀಟ. ಇದೊಂದು ಲಾರ್ವಾ ಆಗಿದೆ. ಬೆಳೆಗಳ ಬೇರನ್ನು ತಿಂದು ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ಎಲ್ಲಾ ಬೆಳೆಗಳನ್ನು ಆಕ್ರಮಿಸುವುದರಿಂದ ರೈತರಿಗೆ ಇನ್ನಿಲ್ಲದಂತೆ ಬಾಧಿಸಿ, ನಷ್ಟ ತರುವ ಕೀಟವಾಗಿದೆ. ಹಾಗಾದರೆ ಗೊಣ್ಣೆ ಹುಳುವನ್ನು ನಿಯಂತ್ರಣ ಮಾಡುವುದು ಹೇಗೆ? ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ನಿಯಂತ್ರಣ ಹೇಗೆ?

ರೈತರು ಉತ್ತಮ ಆದಾಯಗಳಿಸುವ ಮಾರ್ಗ ಈ ಫಾರ್ಮುಲಾ

       ಇಂದು ಕೃಷಿಯೆಂದರೆ ಲಾಸು, ರೈತ ಎಂದರೆ ಬಡವ ಅನ್ನುವಂತಾಗಿದೆ. ಇದಕ್ಕೆ ಕಾರಣ ಖರ್ಚು ಅಧಿಕ, ಆದಾಯ ಕಡಿಮೆಯಾಗಿರುವುದು. ಎಷ್ಟೇ ದುಡಿದರೂ ನಷ್ಟದಲ್ಲೇ ಬದುಕುವಂತಾಗಿದೆ. ಹಾಗಾದರೆ ರೈತರು ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?. ಸಾಲ, ನಷ್ಟದ ಸುಳಿಯಿಂದ ಹೊರಬರುವುದು ಹೇಗೆ? ಕೃಷಿ ಭೂಮಿಯನ್ನು ಕೃಷಿಕರು ಹೇಗೆ ಬಳಸಿಕೊಳ್ಳಬೇಕು? ಇದಕ್ಕೆ ಒಂದು ಸೂತ್ರ ಕೂಡ ಇದೆ. 33+33+33+1 ಕೃಷಿ ಸೂತ್ರ.

ಕೇವಲ 700 ರೂಪಾಯಿಗೆ 1 ಎಕರೆಗೆ ಗೊಬ್ಬರ. ಹೀಗೆ ಮಾಡಿದರೆ ಹೆಚ್ಚು ಇಳುವರಿ

       ರಾಸಾಯನಿಕ ಕೃಷಿಯ ಆಪತ್ತು, ಅದರಿಂದ ರೈತರು ಮತ್ತು ಜಗತ್ತು ಅನುಭವಿಸುತ್ತಿರುವ ದುಷ್ಪರಿಣಾಮಗಳು ಇಂದು ಎಲ್ಲರಿಗೂ ಅರಿವಾಗುತ್ತಾ ಸಾಗಿದೆ. ಹಾಗಾಗಿ ಎಷ್ಟೋ ರೈತರು ಸಾವಯವ ಕೃಷಿಯ ಕಡೆ ವಾಲಿದ್ದಾರೆ. ಸಾವಯವ ಕೃಷಿ ಉತ್ತಮ ಪರ್ಯಾಯವಾದರೂ ಸರಿಯಾದ ನಿರ್ವಹಣೆ ಕ್ರಮಗಳು ಮತ್ತು ಗೊಬ್ಬರ ಪೂರೈಕೆಯಲ್ಲಿ ಎಡವುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದ ಮೇಲೆ ಅತಿ ಹೆಚ್ಚು ಅವಲಂಬಿತರಾಗಿರುವುದು ಕೂಡ ಒಂದು. ಮೊದಲನೆಯದಾಗಿ ಕೊಟ್ಟಿಗೆ ಗೊಬ್ಬರ ಹೊರಗಿನಿಂದ ತರುವುದು ದುಬಾರಿ. ತಂದರೂ ಅದರ ಗುಣಮಟ್ಟ ಹೇಳುವುದು ಕಷ್ಟ. ಇದರಲ್ಲೂ ಕಲಬೆರಕೆಯಾಗುವುದರಿಂದ ಗುಣಮಟ್ಟದ ಗೊಬ್ಬರ ಒದಗಿಸುವುದು ಸಾವಯವ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕೊಟ್ಟಿಗೆ ಗೊಬ್ಬರ ಕೊಡಲೇಬೇಕು ಆದರೆ ಇದರ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಅಂತೀರಾ..? ಇಲ್ಲಿದೆ ಉತ್ತರ.

ಸಾವಯವದಲ್ಲಿ ಮೆಣಸಿನಕಾಯಿ ಕೃಷಿ: ಎಷ್ಟು ಲಾಭ..?

       ಇಂದು ನಮ್ಮ ದೇಶದ ಪ್ರಮುಖ ಮಸಾಲೆ ಬೆಳೆಯಾಗಿರುವ ಮೆಣಸಿನಕಾಯಿ ಪೋರ್ಚುಗೀಸ್ ವ್ಯಾಪಾರಿಗಳ ಮೂಲಕ 1498ರಲ್ಲಿ ಭಾರತಕ್ಕೆ ಪರಿಚಯವಾಯಿತು. ಇದರ ಮಸಾಲೆಯುಕ್ತ ರುಚಿ, ಆಕರ್ಷಕವಾದ ಬಣ್ಣ ಮತ್ತು ಸುವಾಸನೆಯಿಂದಾಗಿ ಪ್ರತಿ ಭಾರತೀಯ ಪಾಕಪದ್ಧತಿಯಲ್ಲಿ ಮೆಣಸಿನಕಾಯಿ ಅನಿವಾರ್ಯ ಸ್ಥಾನ ಪಡೆದಿದೆ. ಮೆಣಸಿನಕಾಯಿಯು ಭಾರತದಲ್ಲಿ ಬೆಳೆಯುವ ಅತ್ಯಮೂಲ್ಯ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಬೆಳೆಯುವ ಅತ್ಯಂತ ಸಾಮಾನ್ಯವಾದ ಮಸಾಲೆಯಾಗಿದೆ. ಇಂದು ಮೆಣಸಿನಕಾಯಿ ಭಾರತದ ಸಾರ್ವತ್ರಿಕ ಮಸಾಲೆಯಾಗಿದೆ. ಇದನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಉತ್ಪಾದನೆಗೆ ಭಾರತವು ಸುಮಾರು 36% ಕೊಡುಗೆ ನೀಡುತ್ತದೆ.

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ S.S.ಗಣೇಶ್ ಅವರ ತೋಟದಲ್ಲಿ ಡಾ.ಸಾಯಿಲ್ ಕಮಾಲ್

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ರಾಜ್ಯದ ಜನರಿಗೆ ಚಿರಪರಿಚಿತ. ಇವರ ಮಗ ಖ್ಯಾತ ಉದ್ಯಮಿ S.S ಗಣೇಶ್ ಅವರು ಉದ್ಯಮ ಜಗತ್ತಿನಲ್ಲಿ ಸಾಧನೆ ಮಾಡಿದವರು. ಇವರು ತಮ್ಮ 120 ಎಕರೆ ತೋಟದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಉತ್ತಮ ಆದಾಯ ಕೊಡುವ ಸಾವಯವ ಎಲೆಕೋಸು

       ಎಲೆಕೋಸು ಒಂದು ಬಹುಮುಖ್ಯ ಬೆಳೆಯಾಗಿದ್ದು, ಅನೇಕ ಭಾಗಗಳಲ್ಲಿ ಪ್ರಧಾನವಾದ ಬೆಳೆಯಾಗಿದೆ. ಎಲೆಕೋಸು ಒಂದು ತಂಪಾದ ಋತುವಿನ ಬೆಳೆಯಾಗಿದ್ದು ಬೆಳೆಯಲು ಸುಲಭ ಮತ್ತು ನೆಟ್ಟ 90 ರಿಂದ 120 ದಿನಗಳಲ್ಲಿ ಕೊಯ್ಲು ಮಾಡಬಹುದು. ಎಲೆಕೋಸು ಯಾವಾಗಲು ಬೇಡಿಕೆಯಲ್ಲಿರುವ ಒಂದು ಬೆಳೆಯಾಗಿದೆ. ಹಾಗಾಗಿ ಮಾರುಕಟ್ಟೆ ಇರುವ ಕಡೆ ಬೆಳೆದರೆ ಉತ್ತಮ ಲಾಭ ಗಳಿಸಬಹದು. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ರೈತ ತಮ್ಮ ಜಮೀನಿನಲ್ಲಿ ಹಲವು ಲಾಭಗಳನ್ನು ಪಡೆದಿದ್ದಾರೆ.

ಕ್ಯಾಪ್ಸಿಕಂ ಬೆಳೆಗಾರನ ಸಂಕಷ್ಟ ಮಾಯ

       ಕ್ಯಾಪ್ಸಿಕಂ ಅಥವಾ ದಪ್ಪ ಮೆಣಸಿನಕಾಯಿ ಒಂದು ಜನಪ್ರಿಯ ಬೆಳೆಯಾಗಿದೆ. ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಬರುವ ಈ ದೊಡ್ಡ ಮೆಣಸಿನಕಾಯಿಯನ್ನು ಪ್ರಪಂಚದಾದ್ಯಂತದ ಅನೇಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಸಲಾಡ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಿಂದ ಹಿಡಿದು ಸೂಪ್‌ಗಳು ಮತ್ತು ಬಜ್ಜಿ, ಹೀಗೆ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ವಿಟಮಿನ್ ಸಿ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇಂತಹ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಇಲ್ಲೊಬ್ಬ ರೈತರು ಅದ್ಭುತವಾಗಿ ಬೆಳೆದಿದ್ದಾರೆ.

|< ... 6 7 8 9 10 11 ...>|
Home    |   About Us    |   Contact    |   
microbi.tv | Powered by Ocat Business Promotion Service in India