ಇಂದು ಕೃಷಿಯೆಂದರೆ ಲಾಸು, ರೈತ ಎಂದರೆ ಬಡವ ಅನ್ನುವಂತಾಗಿದೆ. ಇದಕ್ಕೆ ಕಾರಣ ಖರ್ಚು ಅಧಿಕ, ಆದಾಯ ಕಡಿಮೆಯಾಗಿರುವುದು. ಎಷ್ಟೇ ದುಡಿದರೂ ನಷ್ಟದಲ್ಲೇ ಬದುಕುವಂತಾಗಿದೆ. ಹಾಗಾದರೆ ರೈತರು ಆದಾಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?. ಸಾಲ, ನಷ್ಟದ ಸುಳಿಯಿಂದ ಹೊರಬರುವುದು ಹೇಗೆ? ಕೃಷಿ ಭೂಮಿಯನ್ನು ಕೃಷಿಕರು ಹೇಗೆ ಬಳಸಿಕೊಳ್ಳಬೇಕು? ಇದಕ್ಕೆ ಒಂದು ಸೂತ್ರ ಕೂಡ ಇದೆ. 33+33+33+1 ಕೃಷಿ ಸೂತ್ರ.
ಏಕಬೆಳೆ ಪದ್ಧತಿ
ಏಕಬೆಳೆ ಪದ್ಧತಿಯಿಂದ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಬೆಲೆ ಸಿಕ್ಕರೆ ಲಾಭ, ಇಲ್ಲವಾದರೆ ನಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಏಕಬೆಳೆ ಪದ್ಧತಿಯಲ್ಲಿ ಒಂದು ನಿರ್ದಿಷ್ಟ ಕ್ಷೇತ್ರ ಅಥವಾ ಪ್ರದೇಶದಲ್ಲಿ ದೀರ್ಘಾವಧಿಯಲ್ಲಿ ಒಂದೇ ಬೆಳೆ ಬೆಳೆಯಲಾಗುತ್ತದೆ. ಈ ವಿಧಾನದಿಂದ ಮಣ್ಣಿನ ಸವಕಳಿ, ಕೀಟಗಳು ಮತ್ತು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಾವಧಿಯಲ್ಲಿ ಇದು ಮಣ್ಣಿನ ಫಲವತ್ತತೆ ಕಡಿಮೆ ಮಾಡಿ, ಬೆಳೆಗಳ ಇಳುವರಿ ಕುಂಠಿತವಾಗುವಂತೆ ಮಾಡುತ್ತದೆ.
ರೈತ ಕೃಷಿ ಭೂಮಿಯನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದರ ಮೇಲೆ ಆದಾಯ ನಿರ್ಧಾರವಾಗುತ್ತದೆ. ಬೆಲೆಗಳನ್ನು ನಿರ್ಧರಿಸಲು ರೈತರಿಗೆ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಕೃಷಿಭೂಮಿಯಲ್ಲಿ 4 ವಿಧದ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು. 33% ಆಹಾರ ಬೆಳೆಗಳು, 33% ತೋಟಗಾರಿಕೆ ಬೆಳೆಗಳು, 33% ಅರಣ್ಯ ಕೃಷಿ ಮತ್ತು 1% ಮೇವಿನ ಬೆಳೆ. ಇದು ರೈತರು ಅನುಸರಿಸಬೇಕಾಗಿರುವ ಫಾರ್ಮುಲಾ.
ಕೃಷಿಭೂಮಿಯ ಶೇ.33 ರಲ್ಲಿ ಆಹಾರ ಬೆಳೆಗಳಾದ ಏಕದಳ ಮತ್ತು ದ್ವಿದಳ ಧಾನ್ಯಗಳು ಇತ್ಯಾದಿಗಳನ್ನು ಬೆಳೆಯಬೇಕು. ಶೇ.33 ರಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಮಾವು, ಹಲಸು ಇತ್ಯಾದಿ ಮರಗಳನ್ನು ಬೆಳೆಯಬೇಕು. ಶೇ.33 ರಲ್ಲಿ ಅರಣ್ಯ ಕೃಷಿ ಮಾಡಬೇಕು. ಇದರಲ್ಲಿ ತೇಗ, ಶ್ರೀಗಂಧ, ಮಹಾಘನಿ, ಹೆಬ್ಬೇವು ಇತ್ಯಾದಿ ಮರಗಳನ್ನು ಬೆಳೆಸಬೇಕು. ಶೇ.1 ರಲ್ಲಿ ಮೇವಿನ ಬೆಳೆಗಳನ್ನು ಬೆಳೆಯಬೇಕು. ಹೀಗೆ ಮಾಡಿದರೆ ರೈತ ನಿರಂತರವಾಗಿ ಆದಾಯ ಪಡೆಯಬಹುದಾಗಿದೆ. ನೀರಾವರಿ ಕಡಿಮೆ ಇರುವ ಕಡೆ ಅರಣ್ಯ ಕೃಷಿಯನ್ನಾದರೂ ಮಾಡಬಹುದು. ಇದು ಧೀರ್ಘಕಾಲದಲ್ಲಿ ಹೆಚ್ಚಿನ ಆದಾಯ ಕೊಡಲಿದೆ.
ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆ ರಾಜ್ಯದಾದ್ಯಂತ ರೈತರಿಗೆ ಉಚಿತ ಕೃಷಿ ಶಿಕ್ಷಣ ನೀಡುತ್ತಿದೆ. ರಾಜ್ಯದಾದ್ಯಂತ ಉಚಿತವಾಗಿ ಕೃಷಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ರೈತರ ಜಮೀನು, ತೋಟಗಳಲ್ಲಿ ನಡೆಸಿ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತಿದೆ.
ತೇಗ ಕೃಷಿಯಿಂದ ಬರುವ ಆದಾಯ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.
https://www.youtube.com/watch?v=NSd4oC9w6Rc&t=301s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್