Contact Us
Chinna Complex, 1st Floor, BSF & Reva Circle, Kattigenahalli, Bagaluru Main Road, Yelahanka, Bangalore-560063
|
9 ತಿಂಗಳಲ್ಲಿ 11 ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ, 5 ಎಕರೆ ಅಡಿಕೆ ತೋಟ ನೆಲಸಮ..!
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನೀರಿನ ಹಾಹಾಕಾರ ದಿನೇದಿನೇ ಹೆಚ್ಚಾಗ್ತಿದೆ. ಎಷ್ಟೇ ಬೋರ್ ವೆಲ್ ಕೊರೆದರೂ ನೀರು ಸಿಗ್ತಾಯಿಲ್ಲ, ಅಡಿಕೆ ಬೆಳೆಗಳಾರರ ಕಣ್ಣೀರು ತಪ್ಪುತ್ತಿಲ್ಲ. ಉದ್ಯಮಿ ಮತ್ತು ಕೃಷಿಕರೂ ಆಗಿರುವ ಶ್ರೀಧರ್ ಅವರು ತಮ್ಮ ಬಾಯಾರಿದ ಅಡಿಕೆ ಬೆಳೆಗೆ ನೀರು ಉಣಿಸಲು 9 ತಿಂಗಳದಲ್ಲಿ 11 ಬೋರ್ ವೆಲ್ ಕೊರೆಸಿದರು. ಆದ್ರೆ ನೀರು ಮಾತ್ರ ಸಿಗಲೇ ಇಲ್ಲ. ಆಗ ನೀರಿಲ್ಲದೆ ಸೊರಗುತ್ತಿದ್ದ ಅಡಿಕೆ ಮರಗಳನ್ನ ನೋಡಿ ಮನನೊಂದ ಕೃಷಿಕ ಶ್ರೀಧರ್, ತಮ್ಮ ಐದು ಎಕರೆ ಅಡಿಕೆ ತೋಟವನ್ನ ಕತ್ತರಿಸಿ ನೆಲಸಮ ಮಾಡೇ ಬಿಟ್ರು.
|
ಸಾವಯವ ಕೃಷಿಯಿಂದ ಜೇನುಹುಳಗಳು ಬಂದವು, ಎರೆಹುಳುಗಳೂ ಪ್ರತ್ಯಕ್ಷವಾದವು..!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕೃಷಿಕ ಜೈ ಕುಮಾರ್ ಅವರು, ಕ್ಯಾಪ್ಸಿಕಮ್ ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ. ಇದರಿಂದ ಕೃಷಿ ಭೂಮಿಯಲ್ಲಿ ಎರೆಹುಳುಗಳು ಯಥೇಚ್ಛವಾಗಿ ಅಭಿವೃದ್ಧಿಯಾಗಿವೆ.
|
ಬಾಳೆಯಲ್ಲಿ ಆದಾಯ ಹೆಚ್ಚಿಲು ಈ ಪದ್ಧತಿ ಬೇಕು..!
ಆಷಾಢ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆ ಬಾಳೆ ಹಣ್ಣಿನ ಬೇಡಿಕೆ ಹೆಚ್ಚುತ್ತಾ ಹೋಗುತ್ತೆ. ಸಾಂಪ್ರದಾಯಿಕ ಸ್ಥಾನದಲ್ಲಿ ಮುಂದೆಯಿರುವ ಬಾಳೆಗೆ ಮಾರುಕಟ್ಟೆಯಲ್ಲಿಯೂ ಡಿಮ್ಯಾಂಡ್ ಹೆಚ್ಚು. ಹೀಗಿರುವ ಬಾಳೆ ಬೆಳೆಯಲ್ಲಿ ಹೆಚ್ಚಾಗಿ ಇಳುವರಿ ಪಡೆಯುವ ಮಾರ್ಗಗಳು ಎಷ್ಟೋ ರೈತರಿಗೆ ತಿಳಿದಿಲ್ಲ. ನಾವು ಸಾಮಾನ್ಯವಾಗಿ ಏಕ ಬಾಳೆ ಪದ್ಧತಿಯನ್ನೇ ಹೆಚ್ಚಾಗಿ ನೋಡಿರುತ್ತೆವೆ.ಅಜ್ಜ ಹಾಕಿದ ಆಲದ ಮರ ಎನ್ನುವ ಹಾಗೆ ಏಕ ಬಾಳೆ ಪದ್ಧತಿಯೇ ರೂಢಿಯಾಗಿ ಬಿಟ್ಟಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಗುಂಪು ಬಾಳೆಯ ಪದ್ಧತಿಯಲ್ಲಿ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ.
|
ಹೆಸರು, ಹತ್ತಿ ಬೆಳೆ ಸೊಗಸಾಗಿ ಬರಲು ಈ ರೈತ ಮಾಡಿದ ಸರಳ ಉಪಾಯ..!
ಸಾವಯವ ಪದ್ಧತಿಯಲ್ಲಿ ಬೆಳೆದ ಹತ್ತಿ ಬೆಳೆಗೂ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗೂ ವ್ಯತ್ಯಾಸ ನೋಡಿದ್ದೀರಾ? ಪದವೀಧರರಾದ ಇವರು ಕೃಷಿಯನ್ನೇ ಬದುಕಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಈಗ ರೈತನಾಗಿ ಸಾವಯವ ಕೃಷಿ ಮಾಡುತ್ತಿದ್ದಾರೆ.
|