Contact

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನೀರಿನ ಹಾಹಾಕಾರ ದಿನೇದಿನೇ ಹೆಚ್ಚಾಗ್ತಿದೆ. ಎಷ್ಟೇ ಬೋರ್ ವೆಲ್ ಕೊರೆದರೂ ನೀರು ಸಿಗ್ತಾಯಿಲ್ಲ, ಅಡಿಕೆ ಬೆಳೆಗಳಾರರ ಕಣ್ಣೀರು ತಪ್ಪುತ್ತಿಲ್ಲ. ಉದ್ಯಮಿ ಮತ್ತು ಕೃಷಿಕರೂ ಆಗಿರುವ ಶ್ರೀಧರ್ ಅವರು ತಮ್ಮ ಬಾಯಾರಿದ ಅಡಿಕೆ ಬೆಳೆಗೆ ನೀರು ಉಣಿಸಲು 9 ತಿಂಗಳದಲ್ಲಿ 11 ಬೋರ್ ವೆಲ್ ಕೊರೆಸಿದರು. ಆದ್ರೆ ನೀರು ಮಾತ್ರ ಸಿಗಲೇ ಇಲ್ಲ. ಆಗ ನೀರಿಲ್ಲದೆ ಸೊರಗುತ್ತಿದ್ದ ಅಡಿಕೆ ಮರಗಳನ್ನ ನೋಡಿ ಮನನೊಂದ ಕೃಷಿಕ ಶ್ರೀಧರ್, ತಮ್ಮ ಐದು ಎಕರೆ ಅಡಿಕೆ ತೋಟವನ್ನ ಕತ್ತರಿಸಿ ನೆಲಸಮ ಮಾಡೇ ಬಿಟ್ರು.

ನಂತರ ತಮ್ಮ ಮತ್ತೊಂದು ಐದು ಎಕರೆ ತೋಟವನ್ನ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಕೈಗೊಂಡರು. ಮುಂದೇನಾಯಿತು ಈ ಐದು ಎಕರೆ ತೋಟ ಉಳಿಯಿತಾ? ನಾಶವಾಯಿತಾ?

 

ಸಾವಯವ ಕೃಷಿ:

 

ಕೃಷಿಕ ಶ್ರೀಧರ್ ಅವರದ್ದು ಒಟ್ಟಾರೆ 10 ಎಕರೆ ಅಡಿಕೆ ತೋಟ, ನೀರಿನ ಕೊರತೆಯಿಂದ ಐದು ಎಕರೆ ತೋಟವನ್ನ ನೆಲಸಮ ಮಾಡಿದ್ರು. ಮಿಕ್ಕ ಐದು ಎಕರೆ ಅಡಿಕೆ ತೋಟವನ್ನ ಹೆಂಗಾದ್ರು ಮಾಡಿ ಉಳಿಸಿಕೊಳ್ಳಬೇಕು ಎಂದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡ್ರು.

 

ತೋಟದ ಬದಲಾವಣೆ:

ಕಳೆದ ಒಂದು ವರ್ಷದ ಸಾವಯವ ಕೃಷಿಯಲ್ಲಿ ತಮ್ಮ ನಿರಂತರ ಪ್ರಯತ್ನದಿಂದಾಗಿ, ಮೊದಲನೆದಾಗಿ ತೇವಾಂಶ ಕಾಣದ ತೋಟದಲ್ಲಿ ತೇವಾಂಶ ಸೃಷ್ಟಿಯಾಯಿತು. ತೋಟದಲ್ಲಿ ತ್ಯಾಜ್ಯಗಳ ಸಮರ್ಪಣೆಯಿಂದಾಗಿ ಕೃಷಿ ಭೂಮಿ ಸಾವಯವ ಇಂಗಾಲದಿಂದ ಸಂಪದ್ಭರಿತಗೊಂಡು ಹೂವಿನಂತೆ ಅರಳಿತು. ತೋಟ ಬರಡು, ಬಂಜೆ ಎಂಬ ಹಣೆ ಪಟ್ಟಿಯಿಂದ ಮುಕ್ತಿ ಪಡೆದು 250 ಕ್ವಿಂಟಾಲ್ ಅಡಿಕೆ ನೀಡಲು ಶಕ್ತವಾಯಿತು.

ಕಳೆದ ಬಾರಿ 150 ಕ್ವಿಂಟಾಲ್ ಅಡಿಕೆ ಬಂದ್ರೆ ಆಶ್ಚರ್ಯ ಪಡುತ್ತಿದ್ದ ರೈತ, ಇಂದು 250 ಕ್ವಿಂಟಾಲ್ ಅಡಿಕೆ ನೋಡಿ ಸಾವಯವ ಕೃಷಿಯ ಚಮತ್ಕಾರಕ್ಕೆ ಶರಣೆಂದರು. ಒಟ್ಟಿನಲ್ಲಿ.. ಯಾವುದೇ ಉದ್ದಿಮೆ, ಯಾವುದೇ ಕ್ಷೇತ್ರದಲ್ಲಾದರು ಸರಿ, ನಿರಂತರ ಪ್ರಯತ್ನವೊಂದಿದ್ರೆ ಅವರವರ ಯಶಸ್ಸಿಗೆ ಅವರೆ ಮೆಟ್ಟಿಲು ಹಾಕಿಕೊಂಡಂತೆ. ಹಾಗಾಗಿ ಇಳುವರಿ ಬರ್ತಾಯಿಲ್ಲ ಅಂತ ಚಿಂತೆಪಡುವ ಬದಲು, ವೈಜ್ಞಾನಿಕ ಮಾಹಿತಿ ಅಳವಡಿಸಿಕೊಂಡು ಕೃಷಿಯಲ್ಲಿ ನಿರಂತರ ಪ್ರಯತ್ನ ಕೈಗೊಂಡರೆ ಯಶಸ್ಸು ಶತ:ಸಿದ್ಧ ಎಂಬುವುದಕ್ಕೆ ಈ ಕೃಷಿಕನೇ ಸಾಕ್ಷಿ.

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=TmLiC1sqRq0&t=793s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

https://www.youtube.com/watch?v=mOexufefUcQ&t=509s

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#organicfood  #organicIndia  #organic  #chemicalfree  #microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  Contact
Home    |   About Us    |   Contact    |   
microbi.tv | Powered by Ocat Web Promotion Service in India | | Promote Website with Ocat Banner Ads and Landing Pages