ಸಾವಯವ ಪದ್ಧತಿಯಲ್ಲಿ ಬೆಳೆದ ಹತ್ತಿ ಬೆಳೆಗೂ ರಾಸಾಯನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗೂ ವ್ಯತ್ಯಾಸ ನೋಡಿದ್ದೀರಾ? ಪದವೀಧರರಾದ ಇವರು ಕೃಷಿಯನ್ನೇ ಬದುಕಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಈಗ ರೈತನಾಗಿ ಸಾವಯವ ಕೃಷಿ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ರೈತ ನಾಗರಾಜ್ ಪೂಜಾರಿ, ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಹತ್ತಿ ಮತ್ತು ಹೆಸರುಕಾಳು ಬೆಳೆದಿದ್ದಾರೆ. ಸಾವಯವ ಪದ್ಧತಿಯಿಂದ ಮಣ್ಣು ಉತ್ತಮವಾಗುತ್ತದೆ ಮತ್ತು ರಾಸಾಯನಿಕದಿಂದ ಭೂಮಿ ನಾಶವಾಗುತ್ತದೆ ಎಂದು ನಾಗರಾಜ್ ಹೇಳುತ್ತಾರೆ. ರಾಸಾಯನಿಕ ಬಳಸಿ ಮಾಡಿದ ಹತ್ತಿಗಿಂತ ಈ ರೈತನ ಭೂಮಿಯ ಹತ್ತಿ ಬೆಳೆಯಲ್ಲಿ ಎಲೆಗಳು ದಪ್ಪವಾಗಿ ಆರೋಗ್ಯವಾಗಿ ಬಂದಿವೆ. ಇದರಿಂದ ಗಿಡಗಳಿಗೆ ರೋಗ-ಕೀಟಬಾಧೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ.
ಮತ್ತೊಬ್ಬ ರೈತರೂ ಕೂಡ 2 ವರ್ಷದಿಂದ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ. ರಾಸಾಯನಿಕ ಪದ್ಧತಿಯಲ್ಲಿ ಇದೇ 2 ತಿಂಗಳ ಬೆಳೆಗೆ 6 ಸಾವಿರ ಖರ್ಚು ಬರುತ್ತದೆ. ಆದರೆ ಸಾಯಯವದಲ್ಲಿ ಅರ್ಧ ಖರ್ಚು ಇಳಿಕೆಯಾಗಿದೆ ಎನ್ನುತ್ತಾರೆ ಈ ರೈತ. ಸಾವಯವದಿಂದ ಖರ್ಚು ಕಡಿಮೆಯಾಗುವುದಲ್ಲದೇ ರೋಗಗಳು ಕಡಿಮೆಯಾಗುತ್ತವೆ.
ರಾಸಾಯನಿಕ ಕೃಷಿಯಿಂದಾಗಿ ಈಗಾಗಲೇ ಬಹುತೇಕ ಕೃಷಿ ಭೂಮಿ ಫಲವತ್ತತೆ ಕಳೆದುಕೊಂಡಿದೆ ಎಂದು ಮೈಕ್ರೋಬಿ ಸಂಸ್ಥೆಯ ಪ್ರಭುರವರು ತಿಳಿಸಿದರು. ಮೈಕ್ರೋಬಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರತಿನಿಧಿಗಳು ರಾಜ್ಯದಾದ್ಯಂತ ರೈತರಿಗೆ ಸಾವಯವ ಕೃಷಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ರೈತರು ಆಯಾ ತಾಲ್ಲೂಕಿನ ಪ್ರತಿನಿಧಿಗಳನ್ನು ಸಂಪರ್ಕಿಸಿ ಸಾವಯವ ಕೃಷಿಯ ಮಾರ್ಗದರ್ಶನ ಪಡೆಯಬಹುದು. ಸಂಪರ್ಕಿಸಿ: 9099262233
ಪೂರ್ತಿ ವಿಡೀಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ….
https://www.youtube.com/watch?v=l-FL4REfGLI
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #integratedfarming #organicfarming #sustainablefarming #highyield #healthycrop #soilhealth #fertileland #soilfertility #biofertilizers #lowinvestment #cotton #howtogrowcotton
Contact