Contact

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕೃಷಿಕ ಜೈ ಕುಮಾರ್ ಅವರು, ಕ್ಯಾಪ್ಸಿಕಮ್ ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ. ಇದರಿಂದ ಕೃಷಿ ಭೂಮಿಯಲ್ಲಿ ಎರೆಹುಳುಗಳು ಯಥೇಚ್ಛವಾಗಿ ಅಭಿವೃದ್ಧಿಯಾಗಿವೆ.

 

ಸಾವಯವ ಕೃಷಿಯಲ್ಲಿ ಕ್ಯಾಪ್ಸಿಕಮ್ ನಿರ್ವಹಣೆ:

ಕೃಷಿಕ ಜೈ ಕುಮಾರ್, ಅವರು ತಮ್ಮ ಕ್ಯಾಪ್ಸಿಕಮ್ ಬೆಳೆಗೆ, ನಾಟಿ ಮಾಡುವ ಪೂರ್ವದಲ್ಲಿ ತೋಟಕ್ಕೆ ಕೊಟ್ಟಿಗೆ ಗೊಬ್ಬರ ನೀಡಿ, ಸಸಿಗಳಿಗೆ ಬೀಜೋಪಚಾರ ಮಾಡಿದ್ದಾರೆ. ನಂತರ ಡಾ.ಸಾಯಿಲ್ ಫರ್ಟಿಲಿಟಿ ಬೂಸ್ಟರ್ ಬಳಸಿ, ನಿಯಮಿವಾಗಿ ಬೆಳೆಯ ಬೇಡಿಕೆಯಂತೆ ನೀರು ಣಿಸಿದ್ದಾರೆ.

 

ಕ್ಯಾಪ್ಸಿಕಮ್ ಬೆಳೆ ಎಲೆಗಳು ದಪ್ಪವಾದವು, ತೋಟದಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಮಣ್ಣು ಮೃದುವಾಯಿತು. ಬಿಳಿ ಬೇರುಗಳ ಅಭಿವೃದ್ಧಿ ಹೆಚ್ಚಾಯಿತು. ಈ ಎಲ್ಲಾ ಬದಲಾವಣೆಯಿಂದ ತೋಟದಲ್ಲಿ ತ್ರಿಪ್ಸ್, ಮೈಟ್ಸ್ ಸಮಸ್ಯೆ ಎದುರಾಗಲಿಲ್ಲ. ಹೀಗಾಗಿ ಕೃಷಿಕನಿಗೆ ಸ್ಪ್ರೇಗಳ ಖರ್ಚು ಉಳಿಯಿತು.

 

ಹೀರೆಕಾಯಿ ತೋಟದಲ್ಲಿ ಜೇನುಹುಳಗಳ ಆಗಮನ:

ಹೀರೆಕಾಯಿ ಬೆಳೆಗೂ ಸಹಿತ ಸಾವಯವ ಕೃಷಿ ಮಾಡಿದ್ದರಿಂದ ತೋಟದಲ್ಲಿ ಜೇನುಹುಳುಗಳು ಆಗಮಿಸಿ, ಪರಾಗಸ್ಪರ್ಶ ಕ್ರಿಯೆ  ಚೆನ್ನಾಗಿ ನಡೆದಿದೆ. ಇದರಿಂದ ಕೃಷಿಕನಿಗೆ ಹೀರೇಕಾಯಿ ಇಳುವರಿ ಹೆಚ್ಚಾಯಿತು.

ಒಟ್ಟಿನಲ್ಲಿ ಕೃಷಿಕರು ರಾಸಾಯನಿಕ ಕೃಷಿ ಬಿಟ್ಟು, ಸಾವಯವ ಕೃಷಿ ಅಳವಡಿಸಿದ್ದರಿಂದ ತೋಟದಲ್ಲಿ ಕೃಷಿ ಸೈನಿಕರಾದ ಎರೆಹುಳುಗಳು ಮತ್ತು ಜೇನು ಹುಳುಗಳು ಶುಭ ಮುನ್ನುಡಿ ಬರೆದಿವೆ.

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ನಿಮ್ಮ ಜಮೀನಿನ ಮಣ್ಣನ್ನು ಸ್ಥಳದಲ್ಲೇ ಸುಲಭವಾಗಿ ಪರೀಕ್ಷಿಸಿ? Simple techniques to test your soil on spot

https://www.youtube.com/watch?v=mOexufefUcQ&t=381s

 




Contact




Home    |   About Us    |   Contact    |   
microbi.tv | Powered by Ocat Business Promotion Service in India