ಗುಂಪುಬಾಳೆ ಎಂದರೇನು? ಬೆಳೆಯುವುದು ಹೇಗೆ?
ಬಾಳೆ ಒಂದು ಪ್ರಮುಖ ವಾಣಿಜ್ಯ ಬೆಳೆ. ಸರಿಯಾದ ನಿರ್ವಹಣೆ ಮಾಡಿದರೆ ಒಳ್ಳೆ ಲಾಭ ಮಾಡಬಹುದು. ಆದರೆ ರೈತರು ಇದರಲ್ಲಿ ಎಡವುತ್ತಿದ್ದಾರೆ. ಎಲ್ಲಾರು ಮಾಡುವಂತೆ ಕೃಷಿ ಮಾಡುತ್ತಾ ಇತರ ಪದ್ಧತಿಗಳ ಕಡೆ ಗಮನ ಕೊಡದೇ ನಷ್ಟವಾದರೂ ಹಳೇ ಪದ್ಧತಿ ಮುಂದುವರೆಸುತ್ತಿದ್ದಾರೆ. ಬಾಳೆ ಕೃಷಿಯಿಂದ ಉತ್ತಮ ಇಳುವರಿ ಮತ್ತು ಲಾಭಗಳಿಸಲು ಇರುವ ಒಂದು ಮಾರ್ಗ ಗುಂಪು ಬಾಳೆ.
|
ನಿಮ್ಮ ಜಮೀನಿನಲ್ಲಿ ಗ್ಲಿರಿಸಿಡಿಯಾ(ಗೊಬ್ಬರದ ಗಿಡ) ಇದ್ದರೆ..?
ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಜತೆ ನೈಸರ್ಗಿಕವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ಪೋಷಕಾಂಶ ಪೂರೈಕೆ ಮಾಡಲಾಗುತ್ತದೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆಯಾಗುತ್ತದೆ, ಇಳುವರಿ ಹೆಚ್ಚಾಗುತ್ತದೆ ಎಂದು ಎಷ್ಟೋ ಸಲ ಕೇಳಿದ್ದೇವೆ. ಅದರಲ್ಲಿ ಮುಖ್ಯವಾದ ಒಂದು ಸಸ್ಯ ಗ್ಲಿರಿಸಿಡಿಯಾ ಅಥವಾ ಗೊಬ್ಬರದ ಗಿಡ. ಇದರಿಂದ ಉಚಿತ ಪೋಷಕಾಂಶ ಹೇಗೆ ಸಿಗುತ್ತದೆ? ಉತ್ತಮ ಇಳುವರಿ ಪಡೆಯಲು ಗೊಬ್ಬರದ ಗಿಡದ ಪ್ರಯೋಜನ ಏನು? ಇವೆಲ್ಲವನ್ನು ಈ ಬ್ಲಾಗ್ ನಲ್ಲಿ ನೋಡೋಣ.
|
ಸಾವಯವ ಅರಿಶಿನ ಮತ್ತು ರಾಸಾಯನಿಕ ಅರಿಶಿನ-ದಂಗು ಬಡಿಸುತ್ತೆ ವ್ಯತ್ಯಾಸ..!
ಸಾಮಾನ್ಯವಾಗಿ ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು 2-3 ವರ್ಷ ಬೇಕಾಗುತ್ತದೆ ಎಂಬುದು ಬಹುತೇಕ ಕೃಷಿಕರ ತಪ್ಪು ಕಲ್ಪನೆ. ಇಲ್ಲೊಬ್ಬ ರೈತರು ಮೊದಲನೇ ವರ್ಷದಲ್ಲೇ ಹೆಚ್ಚು ಇಳುವರಿ ಪಡೆದು, ಸತ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.
|
ರಾಸಾಯನಿಕ ಕೃಷಿಗೆ ವಿದಾಯ ಹೇಳಿದ ಬಾಳೆ ಬೆಳೆಗಾರ ಮಾಡಿದ್ದೇನು?
ನೇಂದ್ರ ಬಾಳೆ ಕೇರಳದ ಒಂದು ಬಾಳೆ ತಳಿ. ದೊಡ್ಡ ಬಾಳೆಹಣ್ಣನ್ನು ಬಿಡುವ ಈ ತಳಿ, ಹೆಚ್ಚು ವಾಣಿಜ್ಯ ಬೆಲೆಯನ್ನು ಹೊಂದಿದೆ. ಈ ಬೆಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವುದರಿಂದ ಮಣ್ಣಿನ ಫಲವತ್ತತೆ ತುಂಬಾ ಮೂಖ್ಯ. ಮೈಸೂರಿನ ರೈತರೊಬ್ಬರು ಯಶಸ್ವಿಯಾಗಿ ನೇಂದ್ರ ಬಾಳೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡು ಬಾಳೆ ಬೆಳೆಯುತ್ತಿರುವ ಇವರು ನಿರ್ವಹಣೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
|
ಸಾವಯವ ಕೃಷಿ ಬಗೆಗಿನ ಅನುಮಾನಗಳಿಗೆ ಇಲ್ಲಿದೆ ಉತ್ತರ
ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಕೃಷಿಯೇ ಇಲ್ಲ ಎನ್ನುವಂತಿರುವ ಇಂದಿನ ಎಷ್ಟೋ ರೈತರಿಗೆ ಸಾವಯವ ಕೃಷಿಯ ಬಗ್ಗೆ ತಿಳಿದೇ ಇಲ್ಲ. ಗೊತ್ತಿದ್ದವರಿಗೆ ಇದರಿಂದ ಇಳುವರಿ ಕಡಿಮೆ ಬರುತ್ತದೆ ಎಂಬ ಅಪನಂಬಿಕೆ. ಇನ್ನು ಕೆಲವರಿಗೆ ಸಾವಯವ ಕೃಷಿಗೆ ಬರಲು ಭಯ, ಭೂಮಿ ಒಗ್ಗಿಕೊಳ್ಳುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಎಂದು. ಬಳ್ಳಾರಿಯ ಈ ರೈತರು ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಜೋಳ ಬೆಳೆದಿದ್ದಾರೆ. ಈ ಕೃಷಿಕರ ಅನುಭವ ಹಲವಾರು ಕೃಷಿಕರ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
|
ಬೆಣ್ಣೆಹಣ್ಣು(Butter fruit) ಬೆಳೆಯುವುದರಿಂದ ರೈತರಿಗೆ ಏನು ಲಾಭ? ಸಂಪೂರ್ಣ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಕಾರಣ ಕೆಲವು ಹಣ್ಣು-ತರಕಾರಿಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲಿ ಪ್ರಮುಖವಾದ ಒಂದು ಹಣ್ಣು ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್. ನಮ್ಮ ದೇಶದ ಹಣ್ಣಲ್ಲವಾದರೂ ಇತ್ತೀಚೆಗೆ ಹೆಚ್ಚು ರೈತರು ಬೆಣ್ಣೆಹಣ್ಣು ಕೃಷಿಗೆ ಒಲವು ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೇಡಿಕೆ ಮತ್ತು ಅದರಿಂದ ಬರುವ ಆದಾಯ. ನೀವು ಕೂಡ ಇದರ ಉಪಯೋಗ ಪಡೆಯಬಹುದು. ಇದರ ಮಾರುಕಟ್ಟೆ ಮತ್ತು ಇದರಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
|
ಪ್ರತಿಯೊಬ್ಬ ರೈತರೂ ಈ ವೀಡಿಯೋ ನೋಡಲೇಬೇಕು..!
ಸಾವಯವ ಕೃಷಿ ಮಾಡಲು ಹಿಂಜರಿಯುವ ರೈತರಿಗೆ ಮಾದರಿ ಈ ಆಧುನಿಕ ರೈತ. ಉದ್ಯೋಗದಲ್ಲಿದ್ದರೂ ಕೃಷಿಯನ್ನೂ ಬಿಡದೆ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ 2.5 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಮೊದಲು ಅವಶ್ಯಕತೆ ಬಿದ್ದಾಗ ಸ್ವಲ್ಪ ರಾಸಾಯನಿಕ ಗೊಬ್ಬರ ಬಳಸಿದರು. ಈಗ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
|
IBMನಲ್ಲಿ ಲಕ್ಷ ರೂ. ಸಂಬಳದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದು ಅಡಿಕೆ ಕೃಷಿ ಮಾಡುತ್ತಿರುವ ಯುವಕ
ಲಾಕ್ ಡೌನ್ ಜನರಿಗೆ ಬದುಕು ಬದಲಿಸಿತು. ಕೊರೋನಾದಿಂದ ತುಂಬಾ ಜನರು ನಗರ ಪ್ರದೇಶಗಳಿಂದ ಹಳ್ಳಿಯೆಡೆ ಬಂದರು. ಎಲ್ಲೋ ಹೋಗಿ ದುಡಿಯುವುದಕ್ಕಿಂತ ಹಳ್ಳಿಯಲ್ಲೇ ಇದ್ದು ದುಡಿಯುವುದು ಮೇಲು ಎಂದು ವಾಪಸ್ಸಾದವರು ಬಹಳ. ನಗರದ ಬ್ಯುಸಿ ಜೀವನಕ್ಕಿಂತ ಹಳ್ಳಿಯ ನಿಸರ್ಗದ ಜೊತೆಯ ಜೀವನ ಎಷ್ಟೋ ಮೇಲು ಎಂದು ಕೆಲವರು ಹಳ್ಳಿಯಲ್ಲೇ ಉಳಿದರು. ಹೀಗೆ ಹಳ್ಳಿ ಜೀವನವೇ ಮೇಲು ಎನ್ನುವ IBM ನಲ್ಲಿ ಕೆಲಸ ಮಾಡುತ್ತಿದ್ದ ಯುವಕ 4-5 ವರ್ಷಗಳ ಹಿಂದೆಯೇ ತಂದೆ ಸತ್ತ ಮೇಲೆ ಲಕ್ಷ ರೂ. ಸಂಬಳ ಬಿಟ್ಟು ಸ್ವಂತ ಊರಿನಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಅಡಿಕೆ ಬೆಳೆಯುತ್ತಿರುವ ಇವರ ಅನುಭವ ತಿಳಿಯೋಣ ಬನ್ನಿ.
|
ಮಣ್ಣು ಫಲವತ್ತಾದರೆ 100 ಟನ್ ಕಬ್ಬು ಪಡೆಯಲು ಸಾಧ್ಯವೇ?
ಯಾವುದೇ ಬೆಳೆಯಾಗಲಿ ಮಣ್ಣು ಫಲವತ್ತಾಗಿದ್ದರೆ ಬೆಳೆಯೂ ಉತ್ತಮ ಮತ್ತು ಪೌಷ್ಟಿಕವಾಗಿರುತ್ತದೆ. ಕೃಷಿಯ ಮೂಲವೇ ಮಣ್ಣು. ಮಣ್ಣು ಸಕಲ ಜೀವಿಗಳಿಗೂ ಆಗರ. ಇಂತಹ ಮಣ್ಣನ್ನು ಕಾಪಾಡುವುದು ಮತ್ತು ಫಲವತ್ತಾಗಿಡುವುದು ಎಲ್ಲರ ಜವಾಬ್ದಾರಿ. ಅದರಲ್ಲೂ ಕೃಷಿಮಣ್ಣು ಫಲವತ್ತತೆ ಕಳೆದುಕೊಂಡರೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ, ಆಹಾರಕ್ಕಾಗಿ ಯುದ್ಧಗಳೂ ನಡೆಯುತ್ತವೆ.
|
ಕೂಳೆ ಕಬ್ಬಿನಲ್ಲಿಯೂ ಅಧಿಕ ಇಳುವರಿ ಪಡೆಯಲು ಸೂಪರ್ ಐಡಿಯಾ
ನಾವು ಯಾವುದೇ ಬೆಳೆಯನ್ನು ಬೆಳೆಯುತ್ತಿದ್ದೇವೆ ಎಂದರೆ, ಆ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯುತ್ತೇವೆ ಎಂಬ ಭರವಸೆ ಇರಬೇಕು. ಆ ಭರವಸೆಯ ಕನಸು ನನಸಾಗಬೇಕೆಂದರೆ, ರೈತನ ಕೃಷಿ ಪದ್ಧತಿ ಸರಿಯಾಗಿರಬೇಕಾಗುತ್ತದೆ.
|