ಅಪೂರ್ವ ಸಹೋದರರ ಅಪೂರ್ವ ಕೃಷಿ ಸಾಧನೆಗೆ ಜನ ಫಿದಾ..!
ಮಂಡ್ಯ ತಾಲೂಕಿನ ಕೃಷಿಕರಾದ ನವೀನ್ ಹಾಗೂ ಕಿರಣ್ ಸಹೋದರರ ಕೃಷಿ ಜನ ಮೆಚ್ಚುವ ಹಾಗೆ ಇದೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಇವರ ಛಲಕ್ಕೆ ಇಂದು ಸಾರ್ಥಕತೆ ಲಭಿಸಿದೆ. ಕಬ್ಬು ಬೆಳೆ ಈ ರೈತರ ಕನಸನ್ನು ನನಸು ಮಾಡಿದೆ.
|
ಕೂಳೆ ಕಬ್ಬು 9 ತಿಂಗಳಿಗೆ 23 ಗಣಿಕೆ
ರಬಕವಿ ಬನಹಟ್ಟಿ : ಬೆಳೆಯಲ್ಲಿ ಲಾಭ ಪಡೆಯಬೇಕೆಂದರೆ ಮೊದಲು ರೈತ ತಾನು ಯಾವ ಕೃಷಿ ಪದ್ಧತಿಯ ಮೇಲೆ ಅವಲಂಬಿತನಾಗಬೇಕೆಂಬುದನ್ನು ತಿಳಿಯಬೇಕು, ರೈತನ ಕೃಷಿ ಪದ್ಧತಿಯ ಮೇಲೆ ಲಾಭ ನಿರ್ಧಾರವಾಗಿರುತ್ತೆ, ವೈಜ್ಞಾನಿಕ ಕೃಷಿ ಪದ್ಧತಿ ಜತೆಯಲ್ಲಿ, ಸಾವಯವ ಕೃಷಿಯೊಂದಿಗೆ ಮುಂದುವರೆದಾಗ ನಿರೀಕ್ಷೆಗೂ ಮೀರಿ ಲಾಭ ಪಡೆಯಲು ಸಾಧ್ಯ.
|
ಕೃಷಿ ಭೂಮಿಗೆ ರಜೆ ಯಾವಾಗ..?
ನಾವು ದಿನಂಪ್ರತಿ ಕೆಲಸ ಮಾಡಿದಾಗ ನಮಗೆ ದೈಹಿಕವಾಗಿ, ಮಾನಸಿಕವಾಗಿ ವಿಶ್ರಾಮ ಬೇಕೆನಿಸುತ್ತದೆ. ಅದೇ ರೀತಿಯಾಗಿ ಒಂದು ದಿನವೂ ರಜೆ ಇಲ್ಲದೆ ಹಗಲು-ರಾತ್ರಿ ಕೆಲಸ ಮಾಡುವ ನಮ್ಮ ಭೂಮಿ ತಾಯಿಗೂ ರಜೆ ಎನ್ನುವುದು ಬೇಕಲ್ಲವೇ? ಹಾಗಿದ್ರೆ ನಮ್ಮ ಕೃಷಿ ಭೂಮಿಗೆ ರಜೆ ಹೇಗೆ ಕೊಡುವುದು? ರಜೆ ಕೊಟ್ರೆ ಏನು ಲಾಭ?
|
ಮುತ್ತು(Pearl) ಕೃಷಿ ಸಾಮಾನ್ಯ ರೈತರು ಮಾಡಬಹುದೇ? ಸರ್ಕಾರದಿಂದ ಸಿಗುವ ಸಹಾಯಧನವೆಷ್ಟು?
ಹಿಂದಿನ ಕಾಲದಲ್ಲಿ ರಾಜ-ರಾಣಿಯರು, ರಾಜಮನೆತನದವರು ಧರಿಸುತ್ತಿದ್ದ ಅತ್ಯಮೂಲ್ಯ ಆಭರಣಗಳಲ್ಲಿ ಮುತ್ತು ಕೂಡ ಒಂದು. ಶತಶತಮಾನಗಳಿಂದಲೂ ಮುತ್ತುಗಳು ಸಂಪತ್ತು, ರಾಜತ್ವ, ಶುದ್ಧತೆ, ಬುದ್ಧಿವಂತಿಕೆ, ತಾಳ್ಮೆ ಮತ್ತು ಶಾಂತಿಯೊಂದಿಗೆ ಸಂಬಂಧಿಸಿವೆ. ಕೇವಲ ಆಗರ್ಭ ಶ್ರೀಮಂತರು ಮಾತ್ರ ಧರಿಸುತ್ತಿದ್ದ ಮುತ್ತು ಇಂದು ಬಹಳ ಜನರಿಗೆ ಸಿಗುವಂತಾಗಿದೆ. ಇದಕ್ಕೆ ಕಾರಣ ಕೃತಕವಾಗಿ ಮುತ್ತು ಕೃಷಿ ಮಾಡುತ್ತಿರುವುದು.
|
ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಲಿಲ್ಲ, ಅಡಿಕೆ ಮರಗಳ ಸಾವು ಹೆಚ್ಚಾಯಿತು. ಕಾರಣ?
ಹೆಚ್ಚು ಇಳುವರಿ ಪಡೆಯಬೇಕು ಎಂಬುದು ಎಲ್ಲಾ ರೈತರ ಆಶಯ. ಇದು ಸಾಮಾನ್ಯ ಬಯಕೆ ಮತ್ತು ಖಂಡಿತಾ ತಪ್ಪಲ್ಲ. ಆದರೆ, ಇದನ್ನು ಲಾಭವಾಗಿ ಬಳಸಿಕೊಂಡಿದ್ದು ಮಾತ್ರ ರಾಸಾಯನಿಕ ಗೊಬ್ಬರ ಕಂಪನಿಗಳು. ರೈತರಿಗೆ ಹೆಚ್ಚು ಇಳುವರಿ ಆಸೆ ತೋರಿಸಿ, ರಾಸಾಯನಿಕ ಕೃಷಿ ಪದ್ಧತಿಗೆ ಬರುವಂತೆ ಮಾಡಿದವು. ಮಣ್ಣಿನ ಮಹತ್ವ ತಿಳಿಯದೇ ಯಥೇಚ್ಛ ರಾಸಾಯನಿಕಗಳ ಬಳಕೆಯಿಂದ ಕೃಷಿ ಸುಲಭವಾಯಿತು ಎಂದುಕೊಂಡ ರೈತರಿಗೆ ರಾಸಾಯನಿಕಗಳ ಅಪಾಯ ಈಗ ತಿಳಿಯುತ್ತಿದೆ.
|
ಸಾವಯವದಲ್ಲಿ ಅಡಿಕೆ ಬೆಳೆಯುತ್ತಿರುವ ಈ ರೈತರ ಆದಾಯ 13 ಲಕ್ಷ..!
ತುಮಕೂರಿನ ಈ ರೈತರು ಯಾವುದೇ ರಾಸಾಯನಿಕ ಬಳಸದೇ, ಕಳೆಗಳನ್ನು ಕೀಳದೇ, ಉಳುಮೆ ಮಾಡದೇ, ಕಾರ್ಮಿಕರ ಸಹಾಯವಿಲ್ಲದೇ ವ್ಯವಸಾಯ ಮಾಡುತ್ತಿದ್ದಾರೆ. ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹೇಗೆ? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಸೆಡ್ಡು ಹೊಡೆದಿರುವ ಇವರ ಕೃಷಿಯಲ್ಲಿ ಲಾಭ ಹೆಚ್ಚು.
|
ಮೆಂತೆ ಸೊಪ್ಪು ಬೆಳೆಯಲು 1500 ರೂ. ಖರ್ಚು, ಆದಾಯ 60 ಸಾವಿರ..!
ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ. ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು.
|
ಅಡಿಕೆ ಸಿಪ್ಪೆಗೆ ಬೆಂಕಿ ಹಚ್ಚುತ್ತಿದ್ದೀರಾ? ಬೆಂಕಿ ಹಚ್ಚಿದ್ದು ಸಿಪ್ಪೆಗಲ್ಲ..!
ಕೃಷಿಯಲ್ಲಿ ಲಾಭ ಕಡಿಮೆಯಾಗುವುದಕ್ಕೆ ಒಂದು ಪ್ರಮುಖ ಕಾರಣ ಖರ್ಚು ಹೆಚ್ಚಾಗಿರುವುದು. ಉತ್ತಮ ಇಳುವರಿಗಾಗಿ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾರಾಗುವುದಕ್ಕೆ ರೈತರು ಸಾವಯವ ಮಾರ್ಗವನ್ನು ಅನುಸರಿಸುವ ಅಗತ್ಯತೆ ಹೆಚ್ಚಾಗಿದೆ. ಉಚಿತವಾಗಿ ಪೋಷಕಾಂಶಗಳನ್ನು ಒದಗಿಸಲು ಕೃಷಿ ತ್ಯಾಜ್ಯಗಳಾದ ಕಟಾವಿನ ನಂತರ ಮಿಕ್ಕ ಗಿಡಗಳು, ಸಿಪ್ಪೆಗಳನ್ನು ಕಳೆಸಿ ಮಣ್ಣಿಗೆ ನೀಡಬಹುದು. ಆದರೆ ನಮ್ಮ ರೈತರು ಇವುಗಳ ಮೌಲ್ಯ ಅರಿಯದೇ ಸುಟ್ಟುಹಾಕಿ ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಉಚಿತವಾಗಿ ಸಿಗುವ ಪೋಷಕಾಂಶಗಳ ಆಗರವನ್ನು ವ್ಯರ್ಥ ಮಾಡಿ ರಾಸಾಯನಿಕ ಗೊಬ್ಬರಗಳಿಗೆ ಖರ್ಚು ಮಾಡುತ್ತಿರುವುದು ದುರ್ದೈವದ ಸಂಗತಿ.
|
ಬೀಜೋಪಚಾರದ ಬಳಿಕ ಮುಖ್ಯವಾಗಿ ಈ ಕೆಲಸಗಳನ್ನು ಮಾಡಿ..!
ಡಾ.ಸಾಯಿಲ್ ಬೀಜೋಪಚಾರಗಳು ರೈತರಿಗೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯೋಕೆ, ರೋಗಮುಕ್ತ ಬೆಳೆ ಪಡೆಯೋಕೆ ಅನುಕೂಲವಾಗುತ್ತಿವೆ.ಆದರೆ ರೈತರು ಮಾಡುವ ತಪ್ಪುಗಳೇನೆಂದರೆ ಬೀಜೋಪಚಾರದ ಬಳಿಕ ಗೊಬ್ಬರದ ನಿರ್ವಹಣೆ ಮಾಡುವುದರಲ್ಲಿ ಎಡುವುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸುವುದು ಅಥವಾ ಏನೂ ಗೊಬ್ಬರ ಬಳಸದೆ ಇರುವುದು, ಇವೆಲ್ಲ ಕೆಲವು ರೈತರ ಬೆಳೆಗಳ ಮೇಲೆ ದುಷ್ಪರಿನಾಮಗಳನ್ನು ಬೀರುತ್ತಿವೆ.ಗೊಬ್ಬರದ ನಿರ್ವಹಣೆ ಮಾಡಬೇಕು. ಆದರೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು. ಸಾವಯವ ಗೊಬ್ಬರದಲ್ಲಿಯೇ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಮುಂದುವರೆಸಬೇಕು.
|
ಕೇವಲ 500 ರೂ. ಬದಲಿಸಿ ಬಿಡುತ್ತೆ ಕೃಷಿ ಜೀವನದ ದಿಕ್ಕು..!
ಬೀಜ ಬಿತ್ತನೆ ಅಥವಾ ಸಸಿ ನಾಟಿ ಮಾಡುವಾಗ ಸಾಮಾನ್ಯವಾಗಿ ತಳಗೊಬ್ಬರ ಅಂತ ರಾಸಾಯನಿಕ ಪ್ಯಾಕೆಟ್ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ ನಾಟಿ,ಬಿತ್ತನೆ ಮಾಡಿದ ಪ್ರತಿಯೊಂದು ಬೀಜಗಳೂ ಉತ್ತಮ ಮೊಳಕೆ ಒಡೆಯುವುದಿಲ್ಲ. ಸಸಿಗಳು ಸಾಯುವಂತಹದು ಅಥವಾ ಮಣ್ಣಿನಲ್ಲಿರುವ ರೋಗಾಣುಗಳಿಗೆ ತುತ್ತಾಗುವಂತಹದ್ದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಬೆಳೆ ಬೆಳೆಯುವ ಮುನ್ನವೇ ನಾಶವಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಬೆಲೆ ಬೆಳೆಯುವಾಗಲೇ ಅದನ್ನು ರಕ್ಷಣೆ ಮಾಡುವಂತಹ ರಕ್ಷಾಕವಚವನ್ನು ತೊಡಿಸಬೇಕು. ಆಗ ಮಾತ್ರ ಮೊಳಕೆಯೊಡೆಯುವ ಹಂತದಲ್ಲಿ ಬೆಳೆ ಕಾಪಾಡಲು ಸಾಧ್ಯ. ಇದಕ್ಕೆ ಸೂಕ್ತ ಮಾರ್ಗ ಎಂದರೆ ಬೀಜೋಪಚಾರ.
|