ಸಾವಯವ ಕೃಷಿಯಿಂದ ಇಳುವರಿ ಹೆಚ್ಚುತ್ತಿದೆ..!

ಜೈವಿಕ ಗೊಬ್ಬರ, ಪರಿಸರಕ್ಕೆ ಪೂರಕವಾದ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ  ಮುಂತಾದ ವಿಭಿನ್ನ ಪದಗಳಿಂದ ಕರೆಯಲ್ಪಡುವ "ಸಾವಯವ ಕೃಷಿ" ನಾನಾ ವಿಧದಲ್ಲಿ ಉಪಕಾರಿಯಾಗಿದೆ. ಕೃಷಿ, ಮಾನವ ಆರೋಗ್ಯ ಹಾಗೂ ವಾಣಿಜ್ಯ ಸಮಸ್ಯೆಗಳ ಮೇಲೆ ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಲು ಪರ್ಯಾಯ ವಿಧಾನವಾಗಿ ಹೊರಹೊಮ್ಮಿದೆ

ಸಾವಯವದಲ್ಲಿ ಶೇಂಗಾ ಬೆಳೆ: ಡಬಲ್ ಆದಾಯದ ಮಳೆ

       ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚುವುದಿಲ್ಲ ಎಂದು ಹೇಳುವವರು ಇದನ್ನು ಓದಲೇಬೇಕು. ರಾಸಾಯನಿಕ ಕೃಷಿಯಲ್ಲಿ ಖರ್ಚು ಹೆಚ್ಚು ಮತ್ತು ಆದಾಯ ಕಡಿಮೆ. ಇದರ ಜೊತೆ ಮಣ್ಣನ್ನು ಕೂಡ ಹಾಳು ಮಾಡುತ್ತದೆ. ಮಣ್ಣಿನ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಇಲ್ಲೊಬ್ಬ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.

ಕ್ಯಾನ್ಸರ್ ಗೆ ರಾಮಬಾಣವಾದ ಲಕ್ಷ್ಮಣ..! ಕೃಷಿಗೆ..?

ಕ್ಯಾನ್ಸರ್‌ ಗೆ ಲಕ್ಷ್ಮಣ ಫಲ ರಾಮಬಾಣವಾಗಿದ್ದು,  ರೈತರಿಗೂ ಲಾಭದಾಯಕ ಆಗಿರುವುದು  ವಿಶೇಷವಾಗಿದೆ. ರಾಮ, ಲಕ್ಷ್ಮಣ ಹಾಗೂ ಹನುಮಂತ ಫಲಗಳು ಅತ್ಯಂತ  ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿಯನ್ನು ಹೊಂದಿವೆ.  ಅದರಲ್ಲಿಯೂ ಪ್ರಮುಖವಾಗಿ ಲಕ್ಷ್ಮಣ ಫಲವು ಸುಮಾರು 12 ಮಾದರಿಯ ಕ್ಯಾನ್ಸರ್‌ ಕಣಗಳನ್ನು ಕೊಲ್ಲುತ್ತದೆ ಎಂದು ಸಂಶೋಧನೆಗಳಿಂದ  ತಿಳಿದುಬಂದಿದೆ.

ಅಡಿಕೆ ತೋಟಕ್ಕೆ ಎಷ್ಟು ನೀರು ಕೊಡಬೇಕು?

       ಅಡಿಕೆಯಲ್ಲಿ ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತಾ? ಅಧಿಕ ಆದಾಯ ಕೊಡುವ ಅಡಿಕೆಯಲ್ಲಿ ರೈತರು ಮುಗ್ಗರಿಸುವುದೇಕೆ? ಯಾವ ತಪ್ಪುಗಳಿಂದ ಅಡಿಕೆ ತೋಟದಲ್ಲಿ ರೋಗ-ರುಜಿನಗಳು ಕಾಣಿಸಿಕೊಳ್ಳುತ್ತವೆ?

ಬರಡಾಗಿದ್ದ ಭೂಮಿಗೆ ಹಿಂದೆ 90 ಸಾವಿರ ಖರ್ಚು, ಈಗ 15 ಸಾವಿರ..!

ಅರಿಶಿನ ಹಲವು ಮನೆಮದ್ದುಗಳ ಒಡೆಯಅಡುಗೆಗೂ ಬೇಕುಔಷಧಿಗೂ ಬೇಕು. ಆರೋಗ್ಯಕ್ಕೂ ಅರಿಶಿನ ಬೇಕುಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿಯೂ ಅರಿಶಿನದ್ದು ದೊಡ್ಡ ಪಾಲುಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆಅರಿಶಿನವು 300ಕ್ಕೂ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ


ದ್ವಿದಳ ಧಾನ್ಯಗಳಿಂದ ಹಸಿರೆಲೆ ಗೊಬ್ಬರ ಎಷ್ಟು ಲಾಭಕರ?

ಹಸಿರೆಲೆ ಗೊಬ್ಬರದ ಸಸ್ಯಗಳು ತ್ವರಿತವಾಗಿ ಬೆಳೆದು ಕಡಿಮೆ ಅವಧಿಯಲ್ಲಿ ಹೆಚ್ಚು ಸೊಪ್ಪನ್ನು ಕೊಡುವಂತಿರಬೇಕು.


 

ಹಸಿರೆಲೆ ಗೊಬ್ಬರವಾಗಿ ಸೆಣಬು ಎಷ್ಟು ಪ್ರಯೋಜನಕಾರಿ?
  • ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚಾಗಿ ಇಂಗಿ, ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುವುದಲ್ಲದೆ, ಮಣ್ಣಿನಲ್ಲಿ ತಾಪ ಕಡಿಮೆಯಾಗಿರುವುದು.
ಕಬ್ಬಿನ ರವದಿಯನ್ನು ಸುಡುವ ಬದಲು ಸುಲಭವಾಗಿ ಮೌಲ್ಯವರ್ಧನೆ ಮಾಡಿ

ಕಬ್ಬಿನಲ್ಲಿಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ಟನ್ ಗಟ್ಟಲೆ ರಾಸಾಯನಿಕ  ಗೊಬ್ಬರಗಳನ್ನು ಸುರಿದು ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಗಳನ್ನು ಹೊಲದಲ್ಲಿಯೇ  ಸುಟ್ಟು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆ.

ಸೈನೋ ಬ್ಯಾಕ್ಟೀರಿಯಾ ಎಂಬ ರೈತ ಸ್ನೇಹಿ ಸೂಕ್ಷ್ಮಾಣು

ಪ್ರಯೋಜನಕಾರಿ ಸೂಕ್ಷ್ಮಜೀವಿಗಳು ಇತರ ನಿರ್ವಹಣಾ ಕ್ರಮಗಳಿಗೆ ಪರ್ಯಾಯವಾಗಿವೆ. ಸೈನೋ ಬ್ಯಾಕ್ಟೀರಿಯಾವು ವಾತಾವರಣದ ಸಾರಜನಕವನ್ನು ಸ್ಥಿರೀಕರಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಸಾವಯವ ತ್ಯಾಜ್ಯಗಳು ಮತ್ತು ಅವಶೇಷಗಳನ್ನು ಕಳೆಸುತ್ತದೆ. ಕೀಟನಾಶಕಗಳು ಮತ್ತು ಇತರ ವಿಷಯುಕ್ತ ಪದಾರ್ಥಗಳನ್ನು ಮಣ್ಣಿನಲ್ಲಿ ನಿರ್ವಿಷಗೊಳಿಸುತ್ತದೆ. ಪೋಷಕಾಂಶಗಳ ಲಭ್ಯತೆಯ ವೇಗವರ್ಧಿಸುತ್ತದೆ, ಮಣ್ಣು ಮತ್ತು ನೀರಿನಲ್ಲಿ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ ಮತ್ತು ಅಂತಹ ಕೆಲವು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಸಸ್ಯಗಳ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.

ಬೆವೇರಿಯಾ ಬೆಸ್ಸಿಯಾನಾ-ಇದು ಜೈವಿಕ ಕೀಟನಾಶಕ

ಬೆವೇರಿಯಾ ಬೆಸ್ಸಿಯಾನಾ ಎಂಬುದು ಶಿಲೀಂಧ್ರವಾಗಿದ್ದು, ಇದು ಪ್ರಪಂಚದಾದ್ಯಂತ ಮಣ್ಣಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ ಮತ್ತು ವಿವಿಧ ಆರ್ತ್ರೋಪಾಡ್ ಜಾತಿಯ ಕೀಟಗಳ ಮೇಲೆ ಪರಾವಲಂಬಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವೈಟ್ ಮಸ್ಕಾರ್ಡಿನ್ ಕಾಯಿಲೆಗೆ ಕಾರಣವಾಗುತ್ತದೆ.

|< ... 16 17 18 19 20 21 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd