ಹೀಗೆ ಬಾಳೆ ಬೆಳೆದರೆ 10 ರಿಂದ 20 ವರ್ಷ ಇಳುವರಿ ಗ್ಯಾರಂಟಿ..!

ಭಾರತದಲ್ಲಿ ಮಾವಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆ ಬಾಳೆ. ಉತ್ಪಾದನೆ ಮತ್ತು ಇಳುವರಿಯಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ಸುಮಾರು 50ಕ್ಕೂ ಹೆಚ್ಚು ತಳಿಗಳನ್ನು ಬಾಳೆಯಲ್ಲಿ ಕಾಣಬಹುದು. ಪ್ರಮುಖ ಹಣ್ಣಿನ ಬೆಳೆಯಾದ ಬಾಳೆ ಮನುಷ್ಯನ ಆರೋಗ್ಯ ವೃದ್ಧಿಸಲು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ ಮತ್ತು ಕೃಷಿ ಭೂಮಿಗೆ ಬಹಳಷ್ಟು ತ್ಯಾಜ್ಯಗಳನ್ನು ನೀಡುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಹಾಯಕ.

ಕುರಿ ಸಾಕಾಣಿಕೆಗಿಂತ ಮೇಕೆ ಸಾಕಾಣಿಕೆಯೇ ಮೇಲು..!

ಮೇಕೆ ಸಾಕಾಣಿಕೆ ಇಂದು ಕೇವಲ ಉಪಕಸುಬಾಗಿ ಉಳಿದಿಲ್ಲಮೇಕೆ ಸಾಕಾಣಿಕೆಯೂ ದೊಡ್ಡ  ಉದ್ಯಮವಾಗಿ   ಬದಲಾಗುತ್ತಿದೆಅದರಲ್ಲಿ ಲಕ್ಷಾಂತರ ಆದಾಯ ಇರುವ ಕಾರಣಕ್ಕೆಜನರು ಕೃಷಿಯ ಜೊತೆಗೆಮೇಕೆಸಾಕಾಣಿಕೆ   ಮಾಡುತ್ತಿದ್ದಾರೆಕೆಲವರು ಮೇಕೆ ಹಾಲಿಗಾಗಿ ಸಾಕಿದರೆಇನ್ನೂ ಕೆಲವರು ಮಾಂಸಕ್ಕಾಗಿ ಸಾಕುತ್ತಾರೆಅದೇನೇ ಇರಲಿ,   ಉದ್ಯಮ ಆರಂಭಿಸುವ ಮೊದಲು, ಮೇಕೆ ಹಾಲಿಗಾಗಿ ಸಾಕಾಣಿಕೆ ಮಾಡುತ್ತಿದ್ದರೆ, ಯಾವ ಮೇಕೆ ತಳಿ ಉತ್ತಮ.   ಮಾಂಸಕ್ಕಾಗಿ ಮೇಕೆ ಸಾಕುತ್ತಿದ್ದರೆ, ಅದಕ್ಕೆ ಯಾವ ತಳಿ ಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಕೋಳಿಗೊಬ್ಬರ ನೀಡುವ ಮುನ್ನ ಇರಲೇ ಬೇಕು ಎಚ್ಚರ..!

ಸಾವಯವ ಕೃಷಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿಗೊಬ್ಬರ ಬೇಡಿಕೆ ಹೆಚ್ಚಿಸಿಕೊಳ್ಳತೊಡಗಿದೆ. ಕೋಳಿ ಹಿಕ್ಕೆ ಹಾಗೂ ದುರ್ವಾಸನೆಯಿಂದ ಕೆಲವೇ ವರ್ಷಗಳ ಹಿಂದೆ ಅವಕೃಪೆಗೆ ಒಳಗಾಗಿದ್ದ ಕೋಳಿ ಗೊಬ್ಬರ ಇಂದು ಟನ್ ಗಟ್ಟಲೇ ವ್ಯಾಪರವಾಗುತ್ತಿದೆ. ಆದರೆ ಕೋಳಿ ಗೊಬ್ಬರ ಬಳಸುವ ಮುನ್ನ ಕೃಷಿಕರು ವಹಿಸಿಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು ಅತಿ ಮುಖ್ಯ.

ಬೀಜೋಪಚಾರದಿಂದ ಶೇಂಗಾ 80 ಚೀಲ ಬಂತು..!

ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ನಷ್ಟ ಎಂಬುದೇ ಇಲ್ಲ. ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಹೀಗೆ ಆಯಾ ಬೆಳೆಗೆ ತಕ್ಕಂತ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.

6 ಎಕರೆ ಅಡಿಕೆ, 10 ವರ್ಷದ ತೋಟ, 500 ಗಿಡಗಳು ಭಸ್ಮ…!

       ಅಡಿಕೆ ರೈತರಿಗೆ ಲಾಭತರುವ ಬೆಳೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಅತಿ ಹೆಚ್ಚು ನಿರ್ವಹಣೆಯಿಲ್ಲದೆ ಬೆಳೆಯಬಹುದು. ಆದರೆ ಮೂಲಭೂತ ನಿರ್ವಹಣೆಯಲ್ಲಿ ಎಡವಿದರೆ ಸಮಸ್ಯೆಗಳು ಕಾಣಿಸಿಕೊಂಡು ಇಳುವರಿ ಕಡಿಮೆಯಾಗುವುದಂತೂ ಸತ್ಯ. ಇಲ್ಲೊಬ್ಬ ರೈತರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ 500 ಗಿಡಗಳು ನಾಶಗೊಂಡಿದ್ದಾವೆ. ಇದಕ್ಕೆ ಪರಿಹಾರ ಏನು? ಸಮಸ್ಯೆಗಳ ಮೂಲ ಹುಡುಕುವುದು ಹೇಗೆ? ನೋಡೋಣ ಬನ್ನಿ….

ಶ್ರೀಗಂಧ: ಕೋಟಿಗಳ ಲೆಕ್ಕ ಸತ್ಯವೇ?

       ಶ್ರೀಗಂಧ ತನ್ನ ಪರಿಮಳ ಮತ್ತು ದುಬಾರಿ ಬೆಲೆಗೆ ಜನಪ್ರಿಯ. ಶ್ರೀಗಂಧ ಅತ್ಯಂತ ದುಬಾರಿ ಮರಗಳಲ್ಲೊಂದು. ಇವು slow growing ಅಥವಾ ನಿಧಾನವಾಗಿ ಬೆಳೆಯುವ ಮರಗಳಾಗಿವೆ ಸಾಮಾನ್ಯವಾಗಿ 15ರಿಂದ 20 ವರ್ಷಗಳು ಬೇಕಾಗುತ್ತದೆ ಮತ್ತು ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತವೆ. ಹಾಗಾಗಿ ಇದರ ಬೆಲೆ ದುಬಾರಿ. ಶ್ರೀಗಂಧ ಬೆಳೆದರೆ ಕೋಟಿ ಆದಾಯ ಮಾಡಬಹುದು ಎಂದು ಹೇಳುತ್ತಾರೆ, ಅದು ನಿಜವೇ?

ಮೇಕೆ ಸಾಕಾಣಿಕೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ತಂತ್ರಗಾರಿಕೆ..!

       ಇವರು ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್. ಹಾಲಿ ವೃತ್ತಿಯಲ್ಲಿ ಫಾರ್ಮರ್, ಉಪ ಕಸುಬು ಮೇಕೆ ಸಾಕಾಣಿಕೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸಕ್ಕೆ ರಾಜೀನಾಮೆ ನೀಡಿ, ಈಗ ಪೂರ್ತಿ ಕೃಷಿ, ಮೇಕೆ ಸಾಕಾಣಿಕೆಗೆ ಸಮಯ ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು, ಈಗ ತಮ್ಮ ಸಮಯದ ಸ್ವಾತಂತ್ರ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮೇಕೆ ಸಾಕಾಣಿಕೆಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ನೋಡೋಣ ಬನ್ನಿ

ಬದನೆಯ ಕಾಯಿಕೊರಕಕ್ಕೆ ರಾಸಾಯನಿಕ ಸ್ಪ್ರೇ ಬೇಡ, ಸಾವಯವದಲ್ಲಿದೆ ನಿಯಂತ್ರಣ..!

ನಮ್ಮ ಭಾರತ ದೇಶ ಬದನೆ ಬೆಳೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಆದರೆ ಬದನೆಯಲ್ಲಿ ಹೆಚ್ಚಾಗಿ ಕಾಡುವ ಕಾಯಿಕೊರಕ ಹುಳುವಿನಿಂದ ಬದನೆ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಕೃಷಿಕರು ಹೈರಾಣಾಗಿ ಹೋಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ರೈತರು ಬಳಸುತ್ತಿರುವ ರಾಸಾಯನಿಕ ಸ್ಪ್ರೇಗಳಿಂದ ಹುಳುಗಳ ತಡೆಗಟ್ಟುವಿಕೆಯ ಬದಲು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ದಿನೇದಿನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಸ್ಪ್ರೇಗಳು, ಮಣ್ಣಿನ ಆರೋಗ್ಯ ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವುದು ನಿಗೆಲ್ಲಾ ತಿಳಿದಿರುವ ವಿಚಾರ.

ರಿಂಗ್ ಪಿಟ್ ತಂತ್ರ-ಅಧಿಕ ಇಳುವರಿಯ ಮಂತ್ರ

       ಕಬ್ಬು ನಮ್ಮ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆ. ಉಷ್ಣವಲಯದಲ್ಲಿ ಬೆಳೆಯಲಾಗುವ ಒಂದು ಬಹುವಾರ್ಷಿಕ ಬೆಳೆ ಇದಾಗಿದೆ. ಬ್ರೆಜಿಲ್ ಮತ್ತು ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಾಗಿವೆ. ಕಬ್ಬನ್ನು ಸಕ್ಕರೆ ತಯಾರಿಸಲು ಬಳಸುವುದಲ್ಲದೆ, ಜಾನುವಾರುಗಳಿಗೆ ಮೇವಾಗಿ ಕೂಡ ಬಳಸಲಾಗುತ್ತದೆ. ಕಬ್ಬನ್ನು ಬೆಳೆಯಲು ಹಲವು ವಿಧಾನಗಳಿವೆ. ಸಾಮಾನ್ಯವಾಗಿ ಬೆಳೆಯುವ 4 ಅಡಿ ಅಂತರದ ವಿಧಾನ, ಜೋಡಿ ಸಾಲು ಪದ್ಧತಿ, ಇತ್ಯಾದಿ. ನಾವು ಇಲ್ಲಿ ಹೇಳಲು ಹೊರಟಿರುವುದು ರಿಂಗ್ ಪಿಟ್ ವಿಧಾನದ ಬಗ್ಗೆ. ಇಲ್ಲೊಬ್ಬ ರೈತರು ಈ ಮಾದರಿಯಲ್ಲಿ ಕಬ್ಬು ಬೆಳೆದಿದ್ದಾರೆ. ಹೇಗೆ ಮಾಡಿದ್ದಾರೆ? ಇದರಿಂದ  ಇವರಿಗೆ ಲಾಭವಾಗಿದೆಯಾ? ತಿಳಿಯೋಣ ಬನ್ನಿ.

ಅಡಿಕೆ ಸಸಿಗಳಲ್ಲಿ ಎಲೆಚುಕ್ಕೆ ರೋಗ ಬಂದ್ರೆ ತಕ್ಷಣ ಹೀಗೆ ಮಾಡಿ..!

 ಅಡಿಕೆ ಸಸಿಗಳಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆರೋಗದಿಂದ ಬೆಳೆ ಬೆಳೆಯುವ ಹಂತದಲ್ಲಿಯೇ ಕುಗ್ಗುವಿಕೆ ಶುರುವಾಗಿಬಿಡುತ್ತೆ. ಉಷ್ಣಾಂಶ ಕಡಿಮೆ ಆದಾ, ಕೊಟ್ಟಿಗೆ ಗೊಬ್ಬರ ಕಳಿಯದೆ ಕೃಷಿ ಭೂಮಿಗೆ ನೀಡಿದಾಗ ಈ ಸಮಸ್ಸೆ ಉದ್ಭವಿಸುವುದು ಸಹಜ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಸಸಿಗಳು ಬೆಳೆಯುವ ಸಮಯದಲ್ಲಿಯೇ ಇದು ಆವರಿಸಿಕೊಂಡರೆ ರೈತರ ಬೆಳೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಇದಕ್ಕೆ ಪರಿಹಾರವೇನು ಎಂಬುದನ್ನು ನೋಡುವುದಾದರೆ, ಸಾವಯವ ಕೃಷಿ ಪದ್ಧತಿಯಲ್ಲಿಯೇ ಎಲೆ ಚುಕ್ಕೆ ರೋಗದಿಂದ ಅಡಿಕೆ ಸಸಿಗಳನ್ನು ಕಾಪಾಡಿಕೊಳ್ಳಬಹುದು. ಯಾವುದೆ ರಾಸಾಯನಿಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ.

|< ... 19 20 21 22 23 24 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd