ಕೀಟಗಳ ಹಾವಳಿ ತಡೆಯಲು 5 ಸುಲಭ ಸೂತ್ರಗಳು..!
ಬೆಳೆಗಳನ್ನು ನಾವು ರೋಗದಿಂದ ಕಾಪಾಡಿಕೊಳ್ಳಬಹುದು. ಆದರೆ ಈ ಕೀಟಗಳ ಹಾವಳಿಯಿಂದ ಉಳಿಸಿಕೋಳ್ಳುವುದು ಕಷ್ಟ ಸಾಧ್ಯ. ಹಾಗಿದ್ದಾಗ ಕೃಷಿಕರು ಹೆಚ್ಚಾಗಿ ರಾಸಾಯನಿಕ ಕೀಟನಾಶಕಗಳನ್ನು ಬಳಸಿ ಕೀಟಗಳ ನಿಯಂತ್ರಣ ಮಾಡಲು ಹೋಗಿ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ರಾಸಾಯನಿಕ ಕೀಟನಾಶಕಗಳಿಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬ ಕಲ್ಪನೆಯಿಂದ ಬೆಳೆಯನ್ನು ವಿಷಕ್ಕೆ ತುತ್ತಾಗಿಸುತ್ತಾರೆ.
|
ಬಾಳೆಯಲ್ಲಿ ಆದಾಯ ಹೆಚ್ಚಿಲು ಈ ಪದ್ಧತಿ ಬೇಕು..!
ಆಷಾಢ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆ ಬಾಳೆ ಹಣ್ಣಿನ ಬೇಡಿಕೆ ಹೆಚ್ಚುತ್ತಾ ಹೋಗುತ್ತೆ. ಸಾಂಪ್ರದಾಯಿಕ ಸ್ಥಾನದಲ್ಲಿ ಮುಂದೆಯಿರುವ ಬಾಳೆಗೆ ಮಾರುಕಟ್ಟೆಯಲ್ಲಿಯೂ ಡಿಮ್ಯಾಂಡ್ ಹೆಚ್ಚು. ಹೀಗಿರುವ ಬಾಳೆ ಬೆಳೆಯಲ್ಲಿ ಹೆಚ್ಚಾಗಿ ಇಳುವರಿ ಪಡೆಯುವ ಮಾರ್ಗಗಳು ಎಷ್ಟೋ ರೈತರಿಗೆ ತಿಳಿದಿಲ್ಲ. ನಾವು ಸಾಮಾನ್ಯವಾಗಿ ಏಕ ಬಾಳೆ ಪದ್ಧತಿಯನ್ನೇ ಹೆಚ್ಚಾಗಿ ನೋಡಿರುತ್ತೆವೆ.ಅಜ್ಜ ಹಾಕಿದ ಆಲದ ಮರ ಎನ್ನುವ ಹಾಗೆ ಏಕ ಬಾಳೆ ಪದ್ಧತಿಯೇ ರೂಢಿಯಾಗಿ ಬಿಟ್ಟಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಗುಂಪು ಬಾಳೆಯ ಪದ್ಧತಿಯಲ್ಲಿ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ.
|
ಪರಂಗಿ ಬೆಳೆಯನ್ನು ಕಾಡುವ ಒಂದು ದೊಡ್ಡ ಸಮಸ್ಯೆಯೆಂದರೆ Papaya ringspot virus
ಪರಂಗಿಹಣ್ಣು ರೈತರಿಗೆ ಹೆಚ್ಚು ಲಾಭ ತಂದುಕೊಡುವ ಒಂದು ಹಣ್ಣಿನ ಬೆಳೆ. ಪಪ್ಪಾಯ ಬೆಳೆಯುವುದು ಸುಲಭ ಮತ್ತು ನಿರ್ವಹಣೆ ಕಡಿಮೆ. ಆರೋಗ್ಯಕಾರಿ ಪ್ರಯೋಜನ ಮತ್ತು ವಾಣಿಜ್ಯ ಮೌಲ್ಯದಿಂದಾಗಿ ಮಾರುಕಟ್ಟೆಯಲ್ಲಿ ಪರಂಗಿ ಹಣ್ಣಿಗೆ ತುಂಬಾ ಬೇಡಿಕೆ ಇದೆ. ನಿರ್ವಹಣೆ ಮತ್ತು ಸಸಿಯ ಆಯ್ಕೆಯಲ್ಲಿ ಎಡವುತ್ತಿರುವ ರೈತರು ಪರಂಗಿ ಬೆಳೆಯುವಾಗ ಹೆಚ್ಚು ನಷ್ಟಕ್ಕೊಳಗಾಗುತ್ತಿದ್ದಾರೆ. ಹಾಗಾದರೆ ಪರಂಗಿಯಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ಏನು ಮಾಡಬೇಕು? ರೋಗಗಳನ್ನು ಗುರುತಿಸುವುದು ಹೇಗೆ? ನಿರ್ವಹಣೆಗೆ ಏನು ಮಾಡಬೇಕು?
|
1 ವರ್ಷದ ಅಡಿಕೆ ತೋಟದಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದು ಹೇಗೆ?
ಅಡಿಕೆ ಇಂದು ಅತಿ ಹೆಚ್ಚು ಬೇಡಿಕೆಯಲ್ಲಿರುವ ಬೆಳೆ. ಇದರ ಅನೇಕ ಉಪಯೋಗಗಳಿಂದ ರೈತರಿಗೆ ಒಳ್ಳೆ ಲಾಭ ಸಿಗುತ್ತಿದೆ. ಆದರೆ ರೈತರು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಸಣ್ಣ ತಪ್ಪುಗಳಿಂದ, ಅಡಿಕೆ ತೋಟವನ್ನು ರೋಗ-ರುಜಿನಗಳಿಗೆ ತುತ್ತಾಗುವಂತೆ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ರೈತರು ತಮ್ಮ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ರೋಗಕ್ಕೆ ಮೈಕ್ರೋಬಿ ತಂಡದಿಂದ ಪರಿಹಾರ ಪಡೆದಿದ್ದಾರೆ.
|
ಸಾವಯವ ಕೃಷಿಕರ 3 ಪ್ರಮಾದಗಳು..!
ಕೃಷಿಯಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿ ಶ್ರೇಷ್ಠ. ಆದರೆ ಸಾವಯವ ಕೃಷಿಯಲ್ಲೂ ಅದೇ ರಾಗ ಅದೇ ಗೋಳು, ಡಾ.ಸಾಯಿಲ್ ಬಳಸಿದ್ರೂ, ಅದ್ರಲ್ಲೂ ಸಹ ರಾಸಾಯನಿಕ ಕೃಷಿಯಷ್ಟೆ ಇಳುವರಿ ಬರೋದು. ಏನೂ ವ್ಯತ್ಯಾಸ ಇಲ್ಲ ಅನ್ನೋ ಎಷ್ಟೋ ರೈತರಿಗೆ ಉತ್ತರ ಇಲ್ಲಿದೆ.
|
ಕರ್ನಾಟಕ ರೈತ ಸಿರಿ ಯೋಜನೆ ಯಾರಿಗೆಲ್ಲಾ ಲಾಭ? ಅರ್ಜಿ ಸಲ್ಲಿಕೆ ಹೇಗೆ..?
ರೈತರ ಏಳಿಗೆಗಾಗಿ ಸರ್ಕಾರ ಹೊಸಹೊಸ ಸ್ಕೀಮ್ಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ರೈತಸಿರಿ ಯೋಜನೆ ಕೂಡ ಒಂದಾಗಿದೆ.
|
ಜೇನು ಹುಳುಗಳಿಗೆ ಬೇಕು ಸಾವಯವ ಊಟ..!
ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ.
|
ಕುಸುಮ್ ಯೋಜನೆಯಿಂದ ಯಾವ ಕೃಷಿಕರಿಗೆ ಲಾಭ?
ಕೇಂದ್ರ ಸರ್ಕಾರ ಹೆಚ್ಚಾಗಿ ಕೃಷಿ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಘೋಷಿಸಲಾಯಿತು. ಅದರಲ್ಲಿ ಬಂಜರು ಭೂಮಿಯಿಂದಲೂ ಹಣ ಸಂಪಾದಿಸಬಹುದಾದ ಯೋಜನೆಯೂ ಕೂಡ ಒಂದು. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಈ ಯೋಜನೆಗಳಲ್ಲಿ ಒಂದು ಕಿಸಾನ್ ಸಮ್ ಯೋಜನೆ. ಅದುವೇ ಕುಸುಮ್ ಯೋಜನೆ.
|
1 ವರ್ಷದಿಂದ ಭೂಮಿಯಲ್ಲಿ ಅವಿತಿರುವ ಬೇರುಹುಳುವನ್ನು ಕೊಲ್ಲುವುದು ಹೇಗೆ?
ಬೆಳೆಗಳಿಗೆ ಮಾರಕವಾಗಿರುವ ಬೇರುಹುಳುಗಳು ಅಡಿಕೆ, ತಾಳೆ, ತೆಂಗು , ಕಬ್ಬು, ಬಾಳೆ, ನೆಲಗಡಲೆ, ಭತ್ತ, ಗೋಧಿ, ಗೆಣಸು, ತೇಗದ ಮರ, ಕಬ್ಬು ಇತ್ಯಾದಿ ಬೆಳೆಗಳನ್ನು ನಾಶಮಾಡಿಬಿಡುತ್ತವೆ. ನಮ್ಮ ಕೃಷಿ ಭೂಮಿಯಲ್ಲಿ ಮೂರು ರೀತಿಯ ಬೇರುಹುಳುಗಳನ್ನು ನೋಡಬಹುದು. ಬೇರೆ ಬೇರೆ ಋತುಮಾನಗಳಲ್ಲಿ ಕಾಣಿಸಿಕೊಳ್ಳುವ ಇವುಗಳು ಹೆಚ್ಚಾಗಿ ಮಳೆಗಾಲದಲ್ಲಿ ಸಂತಾನ ಅಭಿವೃದ್ಧಿ ಹೆಚ್ಚಿಸಿಕೊಳ್ಳುತ್ತವೆ.
|
ಶ್ರೀಗಂಧ ಬೆಳೆಯುವ ಮುನ್ನ ಈ ವಿಷಯ ತಿಳಿದರೆ ಕೋಟಿ ಆದಾಯ..!
ಶ್ರೀಗಂಧ ಮರವು ಅತ್ಯಂತ ಶ್ರೇಷ್ಠ ಮರ ಮತ್ತು ಅತ್ಯಂತ ಬೆಲೆ ಬಾಳುವ ಮರ. ಕಾಂಡ, ಬೇರು , ಎಲೆ, ಬೀಜ, ಪ್ರತಿಯೊಂದು ಭಾಗವೂ ತುಂಬಾನೇ ಬೆಲೆ ಬಾಳುವಂತವಾಗಿವೆ. ಹಿಂದೆ ಶ್ರೀಗಂಧ ಬೆಳೆಯುವುದು ಕಾನೂನು ಪ್ರಕಾರ ನಿಷಿದ್ಧವಾಗಿತ್ತು. ಆದರೆ ಈಗ ಕಾನೂನನ್ನು ಸಡಿಲಿಕೆ ಮಾಡಿದ್ದು, ಖಾಸಗಿ ಭೂಮಿಯಲ್ಲಿ ಬೆಳೆಸಬಹುದು. ಇದನ್ನು ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತದೆ.
|