ತೋಟಗಾರಿಕೆ ಕೃಷಿಗೆ ಸರ್ಕಾರದ 10 ಯೋಜನೆಗಳು..!

ಕೃಷಿ ಭೂಮಿ ಹೆಚ್ಚಾಗದಿದ್ದರೂ, ಇದ್ದ ಜಾಗದಲ್ಲೇ ರೈತರು ತೋಟಗಾರಿಕೆಯಿಂದ ಅಧಿಕ ಇಳುವರಿ ತೆಗೆದು ಉತ್ತಮ ಆದಾಯ ಪಡೆಯುತ್ತಿರುವುದು, ಕೃಷಿಯಿಂದ ವಿಮುಖರಾಬೇಕೆಂದಿದ್ದ ರೈತರಲ್ಲಿ ಭಯ ದೂರಮಾಡಿದೆ. ತೋಟಗಾರಿಕೆಯಿಂದ ಉತ್ತಮ ಆದಾಯ ಪಡೆಯುವುದರಿಂದ ರೈತರಿಗೆ ಒಕ್ಕಲುತನದ ಮೇಲಿನ ಅಭಿಮಾನ,  ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಇದಕ್ಕೆ ಸರ್ಕಾರ ಕೂಡ ಕೈ ಜೋಡಿಸಿದೆ.

ಜಾಗತಿಕ ತಾಪಮಾನ: ರಾಸಾಯನಿಕ ಕೃಷಿಯ ಬಹುಮಾನ

ಜಾಗತಿಕ ತಾಪಮಾನ, ಇಂದು ಇಡೀ ಜಗತ್ತನ್ನೇ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ. ಇಡೀ ಮನುಕುಲವನ್ನೇ ಸರ್ವನಾಶ ಮಾಡುವಂತಹ ಅಪಾಯ ತಂದಿಟ್ಟಿದೆ. ಪ್ರಪಂಚದ ತಾಪಮಾನವು 2 ಡಿಗ್ರಿಗಳಷ್ಟು ಏರಿದರೆ, ಹಿಮನದಿಗಳು ಮತ್ತು ನದಿಗಳು ಕಣ್ಮರೆಯಾಗಲು ಪ್ರಾರಂಭಿಸುತ್ತವೆ ಮತ್ತು ಪರ್ವತ ಪ್ರದೇಶಗಳು ಹೆಚ್ಚು ಭೂಕುಸಿತಗಳನ್ನು ಅನುಭವಿಸುತ್ತವೆ. 2100ರ ವೇಳೆಗೆ ಇದರ ಪರಿಣಾಮವಾಗಿ ವಿಶ್ವದ ಜನಸಂಖ್ಯೆಯ ಶೇ. 10ಷ್ಟು ಜನರನ್ನು ಸ್ಥಳಾಂತರಿಸಬೇಕಾಗುತ್ತದೆ.

9 ತಿಂಗಳಲ್ಲಿ 11 ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ, 5 ಎಕರೆ ಅಡಿಕೆ ತೋಟ ನೆಲಸಮ..!

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನೀರಿನ ಹಾಹಾಕಾರ ದಿನೇದಿನೇ ಹೆಚ್ಚಾಗ್ತಿದೆ. ಎಷ್ಟೇ ಬೋರ್ ವೆಲ್ ಕೊರೆದರೂ ನೀರು ಸಿಗ್ತಾಯಿಲ್ಲ, ಅಡಿಕೆ ಬೆಳೆಗಳಾರರ ಕಣ್ಣೀರು ತಪ್ಪುತ್ತಿಲ್ಲ. ಉದ್ಯಮಿ ಮತ್ತು ಕೃಷಿಕರೂ ಆಗಿರುವ ಶ್ರೀಧರ್ ಅವರು ತಮ್ಮ ಬಾಯಾರಿದ ಅಡಿಕೆ ಬೆಳೆಗೆ ನೀರು ಉಣಿಸಲು 9 ತಿಂಗಳದಲ್ಲಿ 11 ಬೋರ್ ವೆಲ್ ಕೊರೆಸಿದರು. ಆದ್ರೆ ನೀರು ಮಾತ್ರ ಸಿಗಲೇ ಇಲ್ಲ. ಆಗ ನೀರಿಲ್ಲದೆ ಸೊರಗುತ್ತಿದ್ದ ಅಡಿಕೆ ಮರಗಳನ್ನ ನೋಡಿ ಮನನೊಂದ ಕೃಷಿಕ ಶ್ರೀಧರ್, ತಮ್ಮ ಐದು ಎಕರೆ ಅಡಿಕೆ ತೋಟವನ್ನ ಕತ್ತರಿಸಿ ನೆಲಸಮ ಮಾಡೇ ಬಿಟ್ರು.

ರೋಗನಿರೋಧಕ ಶಕ್ತಿಗೆ ಬೇಕು ಸಾವಯವ ಆಹಾರ..!

ಕೆಲವು  ವರ್ಷಗಳ ಹಿಂದೆ ನೋಡೋದಾದ್ರೆ ಯಾರಾದರು ಮರಣಹೊಂದಿದರೆ, ಅಯ್ಯೋ ಪಾಪ ಅಂತ ಕಣ್ಣೀರುಹಾಕಿ ಶವ ಸಂಸ್ಕಾರಕ್ಕೆ ಭಾಗಿಯಾಗಿ ದುಃಖ ವ್ಯಕ್ತಪಡಿಸುತ್ತಿದ್ದೆವು. ಆದರೆ ಈ 2 ವರ್ಷಗಳಿಂದ  ಸಾವು ಅಂದ್ರೆ ಅಬ್ಬಾ..! ಆಕಡೆ ಹೋಗೋದೆ ಬೇಡ, ಯಾರ ಸಹವಾಸವೂ ಬೇಡ ಎನ್ನುವ ಹಾಗೆ ಆಗಿದೆ, ರೇಷನ್ ಅಂಗಡಿ, ಬಟ್ಟೆ ಅಂಗಡಿಗಳ ಮುಂದೆಯೆಲ್ಲಾ ಸಾಲುಗಟ್ಟಿ ನಿಲ್ಲುತ್ತಿದ್ದ ಜನರು,  ಕೊರೊನಾ ಮಹಾಮಾರಿಯಿಂದ ಹೆಣಗಳನ್ನ ಇಟ್ಟುಕೊಂಡು ಸ್ಮಶಾನದ ಮುಂದೆ ಕ್ಯೂ ನಿಲ್ಲುವಂತಾಗಿತ್ತು. ಸಿನಿಮಾ ಥಿಯೇಟರ್ ಗಳ ಮುಂದೆ ನೋಡಿದ್ದ ಹೌಸ್ ಫುಲ್ ಬೋರ್ಡ್ ಗಳನ್ನ, ಸ್ಮಶಾನದ ಮುಂದೆ ನೋಡುವ ಪರಿಸ್ಥಿತಿ ಬಂದಿತ್ತು. ಹೆಣಗಳ ಅಂತ್ಯಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿತ್ತು.

ಕಬ್ಬಿನಲ್ಲಿ 10 ಅಡಿ ಅಂತರವಿದ್ರೆ, ಬೆಳೆ ಮತ್ತು ರೈತನಿಗೆ ನೆಮ್ಮದಿ..!

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಕೃಷಿಕ ಹನುಮಂತ ಅವರು, ತಮ್ಮ ಒಂದು ಎಕರೆ ಕಬ್ಬಿನ ತೋಟದಲ್ಲಿ ಹತ್ತು ಅಡಿ ಅಂತರ ಕಾಯ್ದುಕೊಂಡು ಉತ್ತಮ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ.

ಕೃಷಿ ಹೊಂಡ ನಿರ್ಮಾಣಕ್ಕೆ ಬ್ಯಾಂಕ್ ಗಳಿಂದ ಸಾಲ..!

ಮಳೆಯಾಶ್ರಿತ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸರ್ಕಾರ ಸಾಕಷ್ಟು  ಅನುಕೂಲ ಮಾಡಿಕೊಟ್ಟಿದೆ. ಅದೆ ರೀತಿಯಾಗಿ ಕೆಲವು ಬ್ಯಾಂಕ್ ಗಳು ಸಹಿತ, ರೈತರಿಗೆ ಸಾಲದ ರೂಪದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಹೆಗಲು ಕೊಟ್ಟು ನಿಂತಿವೆ.

ಒಂದೊಂದು ಗಿಡದಲ್ಲಿ 45 ಕೆ.ಜಿ ಅಡಿಕೆ, ಒಟ್ಟು ಇಳುವರಿ ಎಷ್ಟು?

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕರಾದ ಸಂಜಯ್ ಅವರು, ತಮ್ಮ ಅಡಿಕೆ ಬೆಳೆಗೆ ಹಿಂದೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ ಹಾಗೆಯೇ ರಾಸಾಯನಿಕ ಗೊಬ್ಬರ ಬಳಸಿ ನಿರ್ವಹಣೆ ಮಾಡುತ್ತಿದ್ದರು. ಹಾಗಾಗಿ ಬಿಟ್ಟು ಬಿಡದಂಗೆ ಹರಳು ಉದುರುವಿಕೆ ಸಮಸ್ಯೆ, ಹಿಡಿಮುಂಡಿಗೆ ರೋಗಗಳು ಆವರಿಸಿದ್ದವು. ಹೀಗಾಗಿ ರೋಗಗಳ ಸರಮಾಲೆಗಳಿಂದ ಅಡಿಕೆ ತೋಟವನ್ನ ಬಚಾವ್ ಮಾಡುವ ಸಲುವಾಗಿ ಕೃಷಿಕ ಸಾವಯವ ಕೃಷಿಯತ್ತ ಹೆಜ್ಜೆ ಹಾಕಿದ್ರು. 

ಮಳೆ ಆಸರೆ ಬೇಡದೆ ಬೆಳೆದು ನಿಂತ ಶೇಂಗಾ, ತೊಗರಿ..!

ಕೊಪ್ಪಳ ತಾಲೂಕಿನ ಕೃಷಿಕರಾದ ನಾಗರಾಜ ಅವರು, ತಮ್ಮ ಶೇಂಗಾ ಮತ್ತು ತೊಗರಿ ಬೆಳೆಯನ್ನ ಮಳೆಯಾಶ್ರಿತದಲ್ಲಿ ಬೆಳೆಯುತ್ತಿದ್ದಾರೆ. ಆದ್ರೆ ಇಲ್ಲಿ ಆಶ್ಚರ್ಯ ಮತ್ತು ದುರಂತದ ಸಂಗತಿ ಅಂದ್ರೆ, ಮಳೆರಾಯ ಮುನಿಸಿಕೊಂಡು, ಅಪರೂಪಕ್ಕೆ ದರ್ಶನ ನೀಡುತ್ತಿದ್ದ. ಇದಷ್ಟೆ ಅಲ್ಲದೆ ಬಿದ್ದ ಮಳೆ, ಬೆಳೆ ಮತ್ತು ಭೂಮಿಗೆ ಸಾಕಾಗುತ್ತಿರಲಿಲ್ಲ. ಆದ್ರೆ ನಾಗರಾಜ್ ಅವರ ಶೇಂಗಾ ಮತ್ತು ತೊಗರಿಗೆ ನೀರಿನ ಅಭಾವ ಆಗಲಿಲ್ಲ ಯಾಕೆ ಗೊತ್ತಾ?

ಎಣ್ಣೆ ಬಿದ್ದ ಕಡೆಯೆಲ್ಲಾ ಎರೆಹುಳುಗಳ ಸಾಮ್ರಾಜ್ಯ..!

ಲಾಭವಿಲ್ಲದ ಕಷ್ಟದಾಯಕ ಕಾರ್ಯ ಅಂದ್ರೆ, ಅದು ಕೃಷಿ ಎಂಬುದು ಇವತ್ತಿನ ಸಾಕಷ್ಟು ರೈತರ ವಾದವಾಗಿದೆ. ಆದ್ರೆ ವೈಜ್ಞಾನಿ ಕೃಷಿ ಪದ್ಧತಿ ಅನುಸರಿಸಿದರೆ, ಕೃಷಿ ಸರಳವಾಗಿ, ಲಾಭ ರೈತನನ್ನ ಹಿಂಬಾಲಿಸುತ್ತದೆ ಎಂಬುದನ್ನು ಇಲ್ಲೊಬ್ಬ ಯುವ ಕೃಷಿಕ ಸಾಬೀತು ಪಡಿಸಿದ್ದಾರೆ.

ಬರಡು ಭೂಮಿಯಲ್ಲಿ ಅರಳಿತು ಬಂಗಾರದಂತಹ ಸೂರ್ಯಕಾಂತಿ..!

ಬರಪೀಡಿತ ಕೃಷಿ ಭೂಮಿಯಲ್ಲಿ ಇಲ್ಲೊಬ್ಬ ಕೃಷಿಕ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಹಾಗಾದ್ರೆ ಬರಡಾಗಿದ್ದ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಲು ಹೇಗೆ ಸಾಧ್ಯವಾಯಿತು ತಿಳಿಯೋಣವೆ.

|< ... 26 27 28 29 30 31 ...>|
Home    |   About Us    |   Contact    |   
microbi.tv | Powered by Ocat Business Promotion Service in India