6 ತಿಂಗಳ ಕಬ್ಬು 12 ತಿಂಗಳ ಕಬ್ಬಿಗೆ ಸೆಡ್ಡು..! ಹೇಗೆ ಗೊತ್ತಾ?

ಕಬ್ಬು ಬೆಳೆಯುವಾಗ, ವರ್ಷ ತುಂಬಿದರೂ ಬೆಳೆಯ ಬೆಳವಣಿಗೆ ಹೇಳಿಕೊಳ್ಳುವಂತಿರಲ್ಲ. ಆದ್ರೆ ಕೆಲ ಕಬ್ಬು ಬೆಳೆ ಬರಿ 6 ತಿಂಗಳು ತಲಪುವಷ್ಟರಲ್ಲಿ ದಷ್ಟಪುಷ್ಟ ದೇಹ, ಉತ್ತಮ ಗಣಿಕೆ, ಮರಿಗಳನ್ನ ಹೊಂದಿರುತ್ತದೆ. ಇಂತಹ ಬದಲಾವಣೆಗೆ ನೇರ ಕಾರಣ ಕೃಷಿಕರೇ ಆಗಿರುತ್ತಾರೆ ಎಂಬುವುದನ್ನ ಇಲ್ಲೊಬ್ಬರು ಸಾಬೀತು ಪಡಿಸಿದ್ದಾರೆ.

ಅಡಿಕೆ ತೋಟದಲ್ಲಿ ಹೆಚ್ಚುವರಿ ಇಳುವರಿ ಪಡೆಯಲು ಪಂಚ ರಹಸ್ಯಗಳು..!

ತುರುವೇಕೆರೆ ತಾಲ್ಲೂಕಿನ ಕಾಚಿಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಟರಾಜ್ ರವರ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದೆವು. ಅವರು ಒಮ್ಮೆ ಮಾತ್ರ ತಮ್ಮ ಅಡಿಕೆ ತೋಟಕ್ಕೆ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಅರೇಕಾ ಸ್ಪೆಷಲ್ ಜೈವಿಕ ಗೊಬ್ಬರವನ್ನು ಕೊಟ್ಟಿದ್ದರು. ಅವರೇ ಹೇಳಿದಂತೆ ತೋಟ ಈಗ ಚೆನ್ನಾಗಿದೆ ಮತ್ತು ಈ ಬಾರಿ ಒಳ್ಳೆಯ ಇಳುವರಿಯೂ ಬಂದಿದೆ.

ನೆಮಟೋಡ್ (ಜಂತು ಹುಳ) ಬೆಳೆಗೆ ಎಷ್ಟು ಮಾರಕ ಗೊತ್ತೆ?

ನೆಮಟೊಡ್ ಇದೊಂದು ಗ್ರೀಕ್ ಭಾಷೆಯ ಪದ. ದಾರದಂತೆ ಕಂಡುಬರುವುದರಿಂದ ಇದನ್ನ ನೆಮಟೋಡ್ ಅಥವಾ ಜಂತು ಹುಳ ಎಂದು ಕರೆಯಲಾಗುತ್ತದೆ. ಇದು ಕಣ್ಣಿಗೆ ಕಾಣದಿರುವ ಸೂಕ್ಷ್ಮಾಣು ಜೀವಿಯಾಗಿದ್ದು, ಗಿಡದಲ್ಲಿನ ಪೋಷಕಾಂಶಗಳನ್ನ ಹೀರಿಕೊಳ್ಳಲು ನೇರವಾಗಿ ಬೇರುಗಳಿಗೆ ಮತ್ತು ಗಿಡದ ಮೆಲ್ಭಾಗವನ್ನ ಬಾಧಿಸುವ ಸೂಕ್ಷ್ಮ ಜೀವಿ.

ಕಡಿಮೆ ಜಾಗದಲ್ಲಿ, ಟನ್ ಗಟ್ಟಲೇ ಚೆಂಡು ಹೂ ಇಳುವರಿ..!

ಅಲಂಕಾರ, ಮದುವೆ ಸಂಭ್ರಮ, ಹಬ್ಬ, ಜಾತ್ರಾ ಮಹೋತ್ಸವ… ಹೀಗೆ ಎಲ್ಲಾ ಕಾಲದಲ್ಲೂ ಸದಾ ಬೇಡಿಕೆಯಲ್ಲಿರುತ್ತದೆ ಚೆಂಡು ಹೂ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಕಾರಣ, ಒಂದು ಕಡೆ ಖಾಸಗಿ ಕಂಪನಿಗಳು ರೈತರಿಗೆ ಖರ್ಚು ಕೊಟ್ಟು ಬೆಳೆಸಲು ಮುಂದಾದ್ರೆ, ಮತ್ತೊಂದು ಕಡೆ ರೈತರು ಹೆಚ್ಚು ಆದಾಯಗಳಿಸಲು ಚೆಂಡು ಹೂವನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಶೇಂಗಾ ಬೆಳೆಗಾರರು ಹೀಗೆ ಮಾಡಿದರೆ ಅಧಿಕ ಇಳುವರಿ..!

ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯುವ ಪ್ರಧಾನ ಎಣ್ಣೆ ಕಾಳು ಬೆಳೆ ಅಂದರೆ ಶೇಂಗಾ ಬೆಳೆ. ಎಂತಹ ವಾತಾವರಣವಿದ್ದರೂ  ಎಲ್ಲವನ್ನು ಮೆಟ್ಟಿ ಬೆಳೆಯುತ್ತದೆ. ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಶೇಂಗಾ ಬೆಳೆಯನ್ನು ವೈಜ್ಞಾನಿಕ ಕ್ರಮದಲ್ಲಿ ಬೆಳೆದರೆ, ಧಿಕ ಲಾಭವನ್ನು ಪಡೆಯಬಹುದಾಗಿದೆ.

ಸಾವಯವ ಕೃಷಿಗೆ ಅಸ್ತು… ಅಡಿಕೆ ಮತ್ತು ಬಾಳೆ ಬೆಳೆಗಳು ಮಸ್ತು..!

ಕೃಷಿಕ ಡಾಕ್ಷರಪ್ಪ ಅವರು ಬಿ.ಎಸ್.ಸಿ ಪಧವೀಧರ ಕೃಷಿಕರು. ರಾಸಾಯನಿಕದಿಂದ ಕೃಷಿ ಭೂಮಿಯ ಫಲವತ್ತತೆ ಹಾಳು ಮಾಡುವ ಬದಲು, ಸಾವಯವ ಕೃಷಿಯಲ್ಲಿ ಕೃಷಿ ಭೂಮಿಯನ್ನ ಉಳಿಸಿಕೊಳ್ಳೋಣ ಎಂದು ಆಲೋಚಿಸಿ, ಕಳೆದ ಎರಡು ವರ್ಷದಿಂದ ತಮ್ಮ ಬಾಳೆ ಮತ್ತು ಅಡಿಕೆ ಬೆಳೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇಂತಹದೊಂದು ಬದಲಾವಣೆ ಕಂಡು ಬಂದಿದ್ದು, ಬೆಣ್ಣೆ ನಗರಿ ಎಂದೇ ಪ್ರಖ್ಯಾತಿ ಹೊಂದಿದ ದಾವಣಗೆರೆ ಜಿಲ್ಲೆಯಲ್ಲಿ.

ವರ್ಷದಿಂದ ವರ್ಷಕ್ಕೆ ಹೆಚ್ಚಾಯ್ತು ಕಬ್ಬು ಇಳುವರಿ…!

ರಾಜ್ಯದಲ್ಲಿ ಬೆಳೆಯಲಾಗುವ ಪ್ರಮುಖ ವಾಣಿಜ್ಯ ಬೆಳೆ ಅಂದರೆ ಕಬ್ಬು, ಕಬ್ಬು ಬೆಳೆಯನ್ನು ಬೆಳೆಯುವುದರಲ್ಲಿ ಎಲ್ಲಾ ರೈತರು ಯಶಸ್ವಿಯಾಗಿ ಬಿಡಲ್ಲ. ಕಬ್ಬು ಬೆಳೆಗೆ ಕಾಡುವ ರೋಗ, ಕೀಟ ಬಾಧೆಗಳಿಂದ ರೈತರು ಹೈರಾಣಾಗಿ ಹೋಗುತ್ತಾರೆ. ಸರಿಯಾದ ಇಳುವರಿ ರೈತರ ಕೈ ಸೇರುವುದು ವಿರಳವಾಗಿ ಬಿಡುತ್ತದೆ. ಹೀಗಿರುವಾಗ ರೈತರು ರಾಸಾಯನಿಕ ಸ್ಪ್ರೇಗಳು ಹಾಗೂ ಇನ್ನಿತರ ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗಿ ರೋಗ, ಕೀಟ ಬಾಧೆಯನ್ನು ತಡೆಯುವ ಅವಸರದಲ್ಲಿ, ಬೆಳೆಗಳಿಗೆ ಉಚಿತವಾಗಿ ಮತ್ತಷ್ಟು ರೋಗಗಳನ್ನು ತಂದೊಡ್ಡಿಕೊಳ್ತಾರೆ. ಆದರೆ ಇಲ್ಲೊಬ್ಬ ರೈತರು ಮಾತ್ರ, ತಮ್ಮ ಕಬ್ಬು ಬೆಳೆಯಲ್ಲಿ ಸತತ 3 ವರ್ಷದಿಂದ ಅಧಿಕ ಇಳುವರಿಯನ್ನು ಪಡೆಯುತ್ತಾ ಬಂದಿದ್ದಾರೆ. 

ಮೂರು ಬೆಳೆಯಿಂದ ನೂರು ವರ್ಷ ಆಯಸ್ಸು ಹೆಚ್ಚಾಯಿತು..!

ಚಿಕ್ಕ ವಯಸ್ಸಿನ ಅಡಿಕೆ ಬೆಳೆ, ಮುಪ್ಪಿಗೂ ಮುನ್ನವೇ ಹಳದಿಯಾಗಿ ಅನಾರೋಗ್ಯದ ಸಮಸ್ಯೆ ಎದುರಿಸಿತ್ತು. ಕಾರಣ ಕೃಷಿಕರು ಅಡಿಕೆಗೆ ನೀಡಿದ ರಾಸಾಯನಿಕ ಗೊಬ್ಬರವೆಂಬ ಪಾಷಾಣ. ಹೀಗಾಗಿ ಕೃಷಿಕ, ಹೇಗಾದ್ರು ಮಾಡಿ ಅಡಿಕೆ ಬೆಳೆ ಉಳಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಸಾವಯವ ಕೃಷಿ ಅಳವಡಿಸಿಕೊಳ್ಳಲು ಶುರು ಮಾಡಿದ್ರು.

ಸಮಗ್ರ-ಸುಸ್ಥಿರ-ಸಾವಯವ ಅಭಿಯಾನ

"1 ತೆಂಗಿನ ಮರಕ್ಕೆ 250 ಕಾಯಿಗಳು ಮತ್ತು  1 ಅಡಿಕೆ ಮರಕ್ಕೆ 3 ಕೆ.ಜಿ ಒಣ ಅಡಿಕೆ ಇಳುವರಿ ಅಭಿಯಾನ" ದ ಅಂಗವಾಗಿ ಮೈಕ್ರೋಬಿ ಸಂಸ್ಥೆಯ ಸಾಯಿಲ್ ಡಾಕ್ಟರ್ ಶಿಲ್ಪ ಮತ್ತು ಪ್ರತಿನಿಧಿ ಶ್ರೀನಿವಾಸ್ ಅವರು ತುರುವೇಕೆರೆ ತಾಲೂಕಿನ ನೇರಲಕಟ್ಟೆ ಗೊಲ್ಲರಹಟ್ಟಿಗೆ ಭೇಟಿ ನೀಡಿದ್ದರು.

ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಭೂಮಿಗೂ, ಬೆಳೆಗೂ ಕಂಟಕ..!

ಕೃಷಿಯಲ್ಲಿ ಸೋಲು ಹೆಚ್ಚು, ಗೆಲುವು ಕಡಿಮೆ ಎಂಬ ಮಾತಿದೆ. ಆದ್ರೆ ಮಾತಿಗೆ ಪ್ರತಿವಾದವೆಂದರೆ ಅವೈಜ್ಞಾನಿಕ ಕೃಷಿ ತೊರೆದು, ವೈಜ್ಞಾನಿಕ ಕೃಷಿ ಪದ್ಧತಿ ತಮ್ಮದಾಗಿಸಿಕೊಂಡರೆ, ಕೃಷಿಕರಿಗೆ ಜಯಗಳಿಸುವುದು ಸುಲಭವಾಗುತ್ತದೆ ಎಂದು ಸಾಕಷ್ಟು ಸಾವಯವ ಕೃಷಿ ತಜ್ಞರು ಪ್ರತಿಪಾದಿಸುತ್ತಾರೆ. ಅದೆ ಮಾತಿನಂತೆ ಇಲ್ಲೊಬ್ಬ ಕೃಷಿಕ ಸಾವಯವ ಕೃಷಿಯ ಮಾಹಿತಿ ಪಡೆದು, ತಮ್ಮ ಆರು ಬೆಳೆಗಳಿಗೆ( ಈರುಳ್ಳಿ, ಹಲಸಂದಿ, ತೊಗರಿ, ರಾಗಿ, ಮೆಕ್ಕೆಜೋಳ, ಜೋಳ) ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

|< ... 29 30 31 32>|
Home    |   About Us    |   Contact    |   
microbi.tv | Powered by Ocat Online Advertising Service in India