Blog

ಶೇಂಗಾ ಬೆಳೆ ಬೆಳೆಯಲು ರೈತರು ಮಾಡಬೇಕಾದ ವೈಜ್ಞಾನಿಕ ಕ್ರಮಗಳು:

ಶೆಂಗಾ ಬೆಳೆ ತಳಿಗಳ ಆಯ್ಕೆ ವಿಚಾರದಲ್ಲಿ ರೈತರು ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ತಳಿಗಳನ್ನು ಆಯ್ಕೆಮಾಡಿಕೊಳ್ಳಬೇಕು.

ಬಿತ್ತನೆಗೂ ಮುನ್ನ ಕೊಟ್ಟಿಗೆ ಗೊಬ್ಬರದ ಜತೆ ಬೇವಿನ ಹಿಂಡಿಯನ್ನು ಸೇರಿಸಿ ಭೂಮಿಗೆ ನೀಡಬೇಕು. ನಂತರ ಹಸಿರೆಲೆ ಗೊಬ್ಬರವನ್ನು ಭೂಮಿಯಲ್ಲಿ ಲ್ಚಿಂಗ್ ಮಾಡಿಕೊಳ್ಳಬೇಕು.

ಬಿತ್ತನೆಯ ಹಂತದಲ್ಲಿ, ಶೇಂಗಾ ಬೀಜಗಳನ್ನು ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರವಾದ ಡಾ.ಸಾಯಿಲ್ ರೈಜೋಬಿಯಮ್ ಬಳಸಿ ಬಿತ್ತನೆ ಮಾಡಬೇಕು.

ಯಾವುದೇ ರಾಸಾಯನಿಕ ಸ್ಪ್ರೇಗಳನ್ನು ಬಳಸದೆ, ಸಾವಯವ ಕೃಷಿಯಲ್ಲಿ ಬೇವಿನ ಎಣ್ಣೆಗಳನ್ನು ಬಳಸಿಕೊಳ್ಳುವುದು ಸೂಕ್ತ.

ಸಾವಯವ ಕೃಷಿಯನ್ನು ಪಾಲಿಸಿ ಜೈವಿಕ ಗೊಬ್ಬರಗಳನ್ನು ಬೆಳೆಗೆ ಬಳಸಬೇಕು.

ನೀರಿನ ನಿರ್ವಹಣೆಯನ್ನು ಬೆಳೆಗೆ ಸರಿಯಾದ ಕ್ರಮಗಳಲ್ಲಿ ಎಷ್ಟು ಅಗತ್ಯವೋ? ಅಷ್ಟು ಮಾತ್ರ ನೀಡುವುದು ಉತ್ತಮ ( ವಾರಕ್ಕೆ ಒಂದು ಬಾರಿ)

ಇನ್ನು ರೈತರು ಒಂದೇ ಬೆಳೆಗೆ ಸಿಮೀತವಾಗದೆ ಸಮಗ್ರ ಕೃಷಿಯನ್ನು ಮಾಡಿ, ಶೇಂಗಾ ಬೆಳೆಯ ಜತೆ ಇನ್ನಿತರ ಯಾವುದೇ ಏಕದಳ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ.

 
ಶೇಂಗಾ ಬೆಳೆಯುವ ಕಾಲ

ಮುಂಗಾರಿನಲ್ಲಿ ಶೇಂಗಾ ಬೆಳೆ ಬೆಳೆಯುವವರು ಮೇ ತಿಂಗಳ ಎರಡನೇ ವಾರದಿಂದ, ಜುಲೈ ತಿಂಗಳ ಎರಡನೇ ವಾರದ ವರೆಗೆ ಬಿತ್ತನೆ ಮಾಡಬೇಕು. ಹಿಂಗಾರಿನಲ್ಲಿ ಬೆಳೆಯುವವರು ನಂವಂಬರ್ ನಿಂದ ಜನವರಿ ತಿಂಗಳ ಕೊನೆಯ ವರೆಗೆ ಬಿತ್ತನೆ ಮಾಡಬಹುದು.

 
ಬಿತ್ತನೆ ವಿಧಾನ

ಮೊದಲು ಸಾವಯವ ಗೊಬ್ಬರಗಳಿಂದ ಭೂಮಿಯನ್ನು ಚೆನ್ನಾಗಿ ಹದ ಮಾಡಿದ ನಂತರಬಿತ್ತನೆ ಮಾಡುವ 10 ನಿಮಿಷದ ಪೂರ್ವದಲ್ಲಿ ಶೇಂಗಾ ಬೀಜಗಳಿಗೆ ಬೀಜೋಪಚಾರ ಮಾಡಬೇಕು. ಜೈವಿಕ ಗೊಬ್ಬರವಾದ ರೈಜೋಬಿಯಮ್ ದ್ರಾವಣದೊಂದಿಗೆ ಬೀಜಗಳನ್ನು ಮಿಶ್ರಣಮಾಡಬೇಕು. ನೆರಳಿನಲ್ಲಿ ಒಣಗಿಸಿ ನಂತರ ಬೀಜಗಳ ಬಿತ್ತನೆ ಮಾಡಿದರೆ, ಬೆಳೆಗೆ ರಕ್ಷಣಾ ಕವಚವನ್ನು ಹಾಕಿದಂತಾಗುತ್ತದೆ. ಬೆಳೆ ಬೆಳೆಯುವ ಹಂತದಲ್ಲಿ ಯಾವುದೇ ಕೀಟ, ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುವುದಿಲ್ಲ. ಬಿತ್ತನೆ ಮಾಡುವಾಗ ಸಾಲಿನಿಂದ ಸಾಲಿಗೆ 30 ಸೆಂ.ಮೀ., ಬೀಜದಿಂದ ಬೀಜಕ್ಕೆ 15 ಸೆಂ.ಮೀ ಅಂತರದಲ್ಲಿ ಬಿತ್ತನೆ ಮಾಡಬೇಕು, ಬೀಜವನ್ನು 5 ಸೆಂ.ಮೀ ಗೀಂತ ಹೆಚ್ಚು ಆಳದಲ್ಲಿ ಬಿತ್ತನೆ ಮಾಡಬಾರದು.
ಗೊಬ್ಬರಗಳ ಬಳಕೆ

ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ನೀಡುವ ಬದಲು, ಸಾವಯವ ಕೃಷಿಯನ್ನು ಅನುಸರಿಸಿ ಜೈವಿಕ ಗೊಬ್ಬರಗಳನ್ನು ನೀಡುವುದು ಉತ್ತಮ.ಯಾಕಂದರೆ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ, ಭೂಮಿಗೆ ವಿಷ ಸೇರ್ಪಡೆಯಾಗಿ ಮಣ್ಣಿನಲ್ಲಿರುವ ಪೋಷಕಾಂಶ ಹಾಳಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆದಷ್ಟು ಬೆಳೆಗಳಿಗೆ ರೈತರು ಸಾವಯವ, ಜೈವಿಕ ಗೊಬ್ಬರಗಳನ್ನು ಬಳಸಿ ಭೂಮಿಯ ಆರೋಗ್ಯ ಮತ್ತು ಬೆಳೆಗಳ ಆರೋಗ್ಯ ಕಾಪಾಡಿ, ದೇಶಕ್ಕೆ ವಿಷಮುಕ್ತ ಆಹಾರ ನೀಡುವುದಕ್ಕೆ ಸ್ಪಂದಿಸಬೇಕು.

ನೀರು ನಿರ್ವಹಣೆ ಮತ್ತು ಕಳೆ ನಿಯಂತ್ರಣ

ಬಿತ್ತನೆಯ ಸಮಯದಲ್ಲಿ ಒಂದು ಬಾರಿ ನೀರು ಹಾಯಿಸಿದ ಮೇಲೆ, ನಾಲ್ಕು ವಾರದವರೆಗೆ ಅತಿಯಾದ ನೀರು ನೀಡಬಾರದು, ನಂತರ ಮುಂಗಾರಿನಲ್ಲಿ ಭೂಮಿ ಮತ್ತು ಹವಾಗುಣಕ್ಕನುಗುಣವಾಗಿ 12 ಇಂಚು, ಹಿಂಗಾರು ಬೇಸಿಗೆಯಲ್ಲಿ 16 ಇಂಚಿನಷ್ಟು ನೀರು ಅವಶ್ಯಕತೆ ಇದ್ದು, ವಾತಾವರಣಕ್ಕೆ ಅನುಗುಣವಾಗಿ ನೀರು ನೀಡಬೇಕು. ಕಳೆ ನಿಯಂತ್ರಣ ಮಾಡುವ ಅವಸರದಲ್ಲಿ ಯಾವುದೇ ಕಳೆನಾಶಕ ಸ್ಪ್ರೇ ಗಳನ್ನು ಬಳಸಕೂಡದು. ಸಾವಯವ ಕೃಷಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಳೆ ನಿಯಂತ್ರಣ ಮಾಡಿಕೊಳ್ಳಬಹುದಾಗಿದ್ದು, ಭೂಮಿಯನ್ನು ಸಡಿಲವಾಗಿಟ್ಟುಕೊಂಡರೆ ಕಳೆ ನಿರ್ಮಾಣ ಯಾವತ್ತೂ ಕಡಿಮೆಯಾಗಿರುತ್ತದೆ.

ಮೇಲೆ ತಿಳಿಸಿದ ಕ್ರಮಗಳನ್ನು ಪಾಲಿಸಿರುವ ಕೊಪ್ಪಳ ಜಿಲ್ಲೆ, ಕುಷ್ಠಗಿ ತಾಲೂಕಿನ ಕೃಷಿಕ ಮಾರುತಿ ಅವರು ಸಾವಯವ ಕೃಷಿಯಲ್ಲಿ ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ರೈಜೋಬಿಯಮ್ ಬಳಸಿ ಶೇಂಗಾ ಬೆಳೆ ಬಿತ್ತನೆ ಮಾಡಿದ್ದಾರೆ. ಇದರಿಂದ ಶೇಂಗಾ ಬೆಳೆ ಉತ್ತಮವಾಗಿ ಸಮೃದ್ಧವಾಗಿ ಬೆಳೆದು ಬಂದಿದೆ.

ವರದಿ: ವನಿತಾ ಪರಸಣ್ಣವರ್    

ಕೃಷಿಕ ಮಾರುತಿ ಅವರ ಶೇಂಗಾ ಬೆಳೆಯ ವೀಕ್ಷಣೆ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=cpx-ZcUVlcg&list=PLuN9VcGQAtK7HTvTU0tqdOQxTTwlP2zNP&index=8



 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India