Blog

ಮೈಸೂರು ತಾಲೂಕಿನ ನೇಗಲಾಪುರ ಗ್ರಾಮದ ರೈತರಾದ ಮೋಹನ ಅವರ ಕಬ್ಬು ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಇಳುವರಿಯನ್ನು ನೀಡುತ್ತಾ ಬರ್ತಾಯಿದೆ. ಇದಕ್ಕೆ ಕಾರಣ ಯಾವುದೇ ರಾಸಾಯನಿಕ ಗೊಬ್ಬರವಲ್ಲ, ರೈತ ಮೋಹನ ಅವರು ಸಾವಯವ ಕೃಷಿಯಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಅನ್ನು ಕಬ್ಬು ಬೆಳೆಗೆ ಬಳಸುತ್ತಿದ್ದಾರೆ. ಹೀಗಾಗಿ ಇವರ ತೋಟದಲ್ಲಿ ಭೂತಾಯಿ ಮೃದುವಾಗಿ ಪೋಷಕಾಂಶಗಳು ವೃದ್ಧಿಯಾಗಿದ್ದು, ಕಬ್ಬು ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿಯನ್ನು ಒದಗಿಸಿ ಕೊಡುತ್ತಿದೆ.

ಸಾವಯವ ಕೃಷಿಯಲ್ಲಿ ಕಬ್ಬು ಬೆಳೆ ನಿರ್ವಹಣೆ ಮಾಡುತ್ತಿರುವ ರೈತ ಯಾವುದೆ ಒಂದು ರಾಸಾಯನಿಕ ವಿಷವನ್ನು ಭೂಮಿಗೆ ತಾಕಿಸಿಲ್ಲ.  ಆದ್ದರಿಂದ ಮರಿ ಸಂಖ್ಯೆ 30ರಷ್ಟು, ಗಣಿಕೆ ಸಂಖ್ಯೆ 20ರಷ್ಟು ಬೆಳೆದು ಬಂದಿವೆ. ಭೂಮಿ, ಬೆಳೆ ಆರೋಗ್ಯವಾಗಿದ್ದು, ಕೃಷಿಕರಿಗೆ ಲಾಭವನ್ನು ತಂದುಕೊಡುತ್ತಿದೆ.

ತ್ಯಾಜ್ಯಗಳ ಮೌಲ್ಯವರ್ಧನೆ:

ರೈತ ಮೋಹನ ಅವರು ಕಬ್ಬಿನ ರವದಿಯನ್ನು ಭೂಮಿಯ ಮೇಲೆ ಹೊದಿಕೆ ಮಾಡಿ, ಕೃಷಿ ತ್ಯಾಜ್ಯವನ್ನು ಭೂಮಿಯಲ್ಲಿ ಮಲ್ಚಿಂಗ್  ಮಾಡಿ ತ್ಯಾಜ್ಯಗಳ ಮೌಲ್ಯವರ್ಧನೆಯನ್ನು ಮಾಡುತ್ತಿದ್ದಾರೆ. ಇದರಿಂದ ರೈತಮಿತ್ರ ಅಂತಾನೆ ಕರೆಸಿಕೊಳ್ಳುವ ಎರೆಹುಳುಗಳ ಸಂಖ್ಯೆ ಭೂಮಿಯಲ್ಲಿ ಯಥೇಚ್ಛವಾಗಿ ನಿರ್ಮಾಣವಾಗಿ ಭೂಮಿಯಲ್ಲಿ ಜೈವಿಕ ಗುಣ, ರಾಸಾಯನಿಕ ಗುಣ, ಭೌತಿಕ ಗುಣಗಳು ಮನೆಮಾಡಿವೆ.

ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಭೂಮಿಗೆ ವಿಷವನ್ನು ನೀಡುವುದರಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು, ಉತ್ತಮ  ಇಳುವರಿ ನೀಡುವಲ್ಲಿ ವಿಫಲವಾಗಿ ಬಿಡುತ್ತೆ. ಇದರಿಂದ ರೈತ ನಷ್ಟವನ್ನು ಅನುಭವಿಸಿ, ಕಂಗಾಲಾಗುವುದಂತು ಖಂಡಿತ. ಆದ್ದರಿಂದ ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಭೂಮಿಗೆ ವಿಷಮುಕ್ತ ಆಹಾರ ನೀಡಿ, ವಿಷಮುಕ್ತ ಬೆಳೆ ಬೆಳೆಯ ಬೇಕಾಗಿದೆ. ಇದರಿಂದ ರೈತ ಲಾಭವನ್ನು ಪಡೆಯುವುದರ ಜತೆಗೆ ದೇಶಕ್ಕೆ ವಿಷಮುಕ್ತ ಆಹಾರ ನೀಡಿದಂತಾಗುತ್ತದೆ.

ವರದಿ: ವನಿತಾ ಪರಸಣ್ಣವರ್

 

ರೈತ ಮೋಹನ ಅವರ ಕಬ್ಬು ತೋಟದಲ್ಲಿ ಮಾಡಿದ ಸಾವಯವ ಕೃಷಿ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=RvMdJ9JjdXw&t=181s

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies