ಬೆಳೆಯಲ್ಲಿ ಬೆಳವಣಿಗೆಗೆ ಬೇಕು ಸ್ಲರಿ ಎನ್ರಿಚರ್-ಸಮಗ್ರ ಮಾಹಿತಿ

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯಲ್ಲಿ ಫಲವತ್ತತೆ ನಶಿಸಿ ಹೋಗುತ್ತಿದ್ದು, ಭೂಮಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಭೂಮಿಯನ್ನು ನಾವು ಕಾಪಾಡಿಕೊಳ್ಳಬೇಕು, ಭೂಮಿ ನಮ್ಮ ಮುಂದಿನ ಪೀಳಿಗೆಗೂ ಆಧಾರವಾಗಿರಬೇಕು, ಬೆಳೆಗಳಿಗೆ ಪೋಷಕಾಂಶಗಳು ಸಿಗಬೇಕು ಎಂದರೆ, ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಪೋಷಕಾಂಶಗಳನ್ನು ನೀಡುವುದು ತುಂಬಾ ಅವಶ್ಯಕವಾಗಿದೆ.

ಕಡಕ್ನಾಥ್ ಕೋಳಿ ಸಾಕಿದರೆ ಲಕ್ಷಗಳ ಸುರಿಮಳೆ

       ಕೋಳಿ ಸಾಕಾಣಿಕೆ ನಮ್ಮ ದೇಶದಲ್ಲಿ ಒಂದು ದೊಡ್ಡ ಉದ್ಯಮ. ಮೊಟ್ಟೆ, ಮಾಂಸಕ್ಕಾಗಿ ಇರುವ ಆಗಾಧ ಬೇಡಿಕೆಯಿಂದ, ಇಂದು ಈ ವಿಭಾಗದ ಉದ್ಯಮದಲ್ಲಿ ಹೊಸ ಪ್ರಯೋಗಗಳು, ಹೊಸ ತಳಿಗಳ ಪರಿಚಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವಿಚಿತ್ರ ತಳಿ ಎಂದರೆ ಅದು ಕಡಕ್ನಾಥ್ ಕೋಳಿ. ಇದರ ದೇಹ, ಮಾಂಸ ಎಲ್ಲಾ ಕಡು ಕಪ್ಪು. ಇದರ ಕಪ್ಪು ಬಣ್ಣಕ್ಕೆ ಕಾರಣ ಮೆಲನಿನ್ ಎಂಬ ಪಿಗ್ಮೆಂಟ್. ಇದರ ಪರಿಚಯ ಮತ್ತು ಔದ್ಯಮಿಕ ಮೌಲ್ಯದ ಪರಿಚಯ ಇಲ್ಲಿದೆ.

400 ಅಡಿಕೆ ಗಿಡಗಳಿಂದ ಹಿಂದೆ 20 ಕ್ವಿಂಟಾಲ್, ಈಗ 60 ಕ್ವಿಂಟಾಲ್ ಹಸಿ ಅಡಿಕೆ

       ಮಲ್ಲಿಕಾರ್ಜುನ್ ಮತ್ತು ತಂದೆ ಪಂಚಾಕ್ಷರಿರವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬಿಸಲೇಹಳ್ಳಿಯವರು. ತಮ್ಮ ತೋಟದಲ್ಲಿ 400 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ತಂದೆ ಮಗನ ಜುಗಲ್ ಬಂದಿಯಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಹಿಂದೆ 20 ಕ್ವಿಂಟಾಲ್ ಹಸಿ ಅಡಿಕೆ ಇಳುವರಿ ತೆಗೆಯುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಇಳುವರಿಯಲ್ಲಿ ಬದಲಾವಣೆ ಆಗಿದ್ದಾದರು ಹೇಗೆ? ಮುಂಚೆ ಇಲ್ಲಿ ಇದ್ದ ಸಮಸ್ಯೆಗಳು ಏನಾದವು? ಮುಂದೆ ಓದಿ.

 

ಹಸಿ ಅಡಿಕೆ

 

ಸಮಗ್ರ ಕೃಷಿ ಪದ್ಧತಿಯ ಸಮಗ್ರ ಮಾಹಿತಿ-ಬದುಕು ಬದಲಿಸುವ ದಾರಿ

      ಭಾರತ ಕೃಷಿ ಪ್ರಧಾನ ದೇಶ. ಸುಮಾರು ಶೇ.58 ರಷ್ಟು ಜನರು ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಆದg,É ರೈತರು ವರ್ಷಪೂರ್ತಿ ದುಡಿದರೂ, ಎಲ್ಲಿಗೂ ಸಾಲದ ಸಂಪಾದನೆ. ಇದರ ಮೇಲೆ ಯೂರಿಯಾ ಮತ್ತಿತರ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು..... ಇತ್ಯಾದಿಗಳನ್ನು ಖರೀದಿಸಲು ಮಾಡುವ ಸಾಲಗಳು, ರೈತರನ್ನು ದಿಕ್ಕು ತೋಚದಂತೆÉ ಮಾಡಿರುವುದು ಸುಳ್ಳಲ್ಲ. ಹಾಗಾದರೆ ಇದಕ್ಕೆ ಪರಿಹಾರ..?

ಶುಂಠಿಗೆ ಸಾಕುಸಾಕಾಯಿತು ಆಹಾರ, ಇದು ಸಾವಯವ ಚಮತ್ಕಾರ..!

ಅನಾರೋಗ್ಯದ ಕಂಟಕಕ್ಕೆ ರಾಮಬಾಣವಾಗಿರುವ ಶುಂಠಿ ಬೆಳೆಯ ಮೇಲೆ ಒಂದು ಆರೋಪವಿದೆ. ಅದು ಏನಂದ್ರೆ, ಕೃಷಿಕರು ಶುಂಠಿ ಬೆಳೆಯಲು ಆಯ್ಕೆ ಮಾಡಿಕೊಂಡರೆ ಭೂತಾಯಿ ಬರಡಾಗುತ್ತಾಳೆ ಎಂದು. ಆದ್ದರಿಂದ ಬಹುತೇಕ ಕೃಷಿಕರು ಶುಂಠಿ ಬೆಳೆಯ ಸಹವಾಸಕ್ಕೆ ಅಂಜುತ್ತಾರೆ

ಒಂಟಿ ಬೆಳೆ ಎಡವಟ್ಟು, ಸಮಗ್ರ ಬೆಳೆ ಒಬ್ಬಟ್ಟು - ಗುರುವಿನ ಪಾಠ..!

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಕೃಷಿಕ ಯೋಗೇಶ್ ಅವರು ಮೂಲತ: ಕೃಷಿ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ಶಿಕ್ಷಕರು. ಆದ್ರೆ ಮೂಲ ಕಸುಬಾಗಿರುವ ಕೃಷಿಯನ್ನ ಕೈಬಿಡಬಾರದೆಂಬ ಇಚ್ಛೆಯಿಂದ, ವೃತ್ತಿಯೊಂದಿಗೆ ಕೃಷಿಯನ್ನೂ ಎದೆಗಪ್ಪಿದರು.

ಹಸಿರೆಲೆ ಗೊಬ್ಬರ-ಸಮರ್ಪಕ ಮಾಹಿತಿ ಇದ್ದರೆ ಪೋಷಕಾಂಶಗಳ ಆಗರ..!

ಕೃಷಿಗೆ ಹಸಿರೆಲೆ ಗೊಬ್ಬರ, ಪೂರ್ವಿಕರ ಕಾಲದಿಂದಲೂ ಪರಿಚಯವಿರುವ ಪದ್ಧತಿ. ಆದ್ರೆ ಇಂದು ಕೃಷಿಕರು ಹಸಿರೆಲೆ ಗೊಬ್ಬರಗಳನ್ನ ಮೂಲೆಗಿಟ್ಟು, ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂತಾಯಿಯನ್ನ ಸೊರಗುವಂತೆ ಮಾಡುತ್ತಿರುವುದೇ ವಿಪರ್ಯಾಸ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ, ಮಣ್ಣಿನ ರಚನೆ ಹಾಳಾಗುತ್ತಿದೆ. ಮಣ್ಣಿನಲ್ಲಿ ಪೋಷಕಾಂಶದ ಸುಸ್ಥಿರತೆ ಕಾಣದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಬೆಳೆ ಪಡೆಯುವುದು ಕಷ್ಟಕರವಾಗಿದೆ.

ಸಾವಯವ ಕೃಷಿ ಪದ್ಧತಿ ಅಗತ್ಯವೋ? ಅನಿವಾರ್ಯವೋ?

ಸಾವಯವ ಕೃಷಿ ಇಂದು ನಿನ್ನೆಯದ್ದಲ್ಲ, ಹಾಗೆ ನೋಡಿದ್ರೆ ಕೃಷಿ ಪದ್ಧತಿಯ ಹುಟ್ಟು ಸಾವಯವ ಆಧಾರವಾಗಿತ್ತು. ಆದ್ರೆ ಇಂದು ಕೃಷಿ ಚಟುವಟಿಕೆ, ಕೃತಕ ಗೊಬ್ಬರಗಳಿಲ್ಲದೆ ಸಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದೇ ವಿಪರ್ಯಾಸದ ಸಂಗತಿ. ಹಾಗಾದ್ರೆ ಸಾವಯವ ಕೃಷಿ ಎಂದರೇನು? ಮತ್ತು ರಾಸಾಯನಿಕ ಕೃಷಿ ಎಂದರೇನು? ರೈತರು ಈ ಎರಡರಲ್ಲಿ ಯಾವುದನ್ನ ಅಳವಡಿಸಿಕೊಂಡರೆ ಕೃಷಿಕ ಕೃಷಿಯಲ್ಲಿ ಸಾಧಿಸಬಹುದು ಎಂಬುದನ್ನ ತಿಳಿಯೋಣ.

ಹೆಚ್ಚು ಇಳುವರಿ ಬೇಕೆಂದರೆ ಬೆಳೆಗೆ ಸಮಗ್ರ ನೈಸರ್ಗಿಕ ಪೋಷಕಾಂಶ ಬೇಕು..!

ಬೆಳೆಗಳು ಆರೋಗ್ಯವಾಗಿರಬೇಕು ಎಂದರೆ, ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ. ಬೆಳೆ ಆರೋಗ್ಯವಾಗಿ ಬೆಳೆದರೆ ಮಾತ್ರ, ರೈತ ಬೆಳೆದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಪೋಷಕಾಂಶಗಳನ್ನು ನೀಡುವ ಅವಸರದಲ್ಲಿ ನಮ್ಮ ರೈತರು ಕೃತಕ ಪೋಷಕಾಂಶಗಳಿಗೆ ಮೊರೆ ಹೋಗಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಬಳಸಿ, ಭೂಮಿ-ಬೆಳೆ ಎರಡನ್ನೂ ಹಾಳು ಮಾಡಿಕೊಳ್ತಾರೆ. ಕೃತಕ ಪೋಷಕಾಂಶಗಳನ್ನು ಬಿಟ್ಟರೆ ರೈತರಿಗೆ ಬೇರೆ ದಾರಿ ಇಲ್ಲವಾ ಎಂಬ ಪ್ರಶ್ನೆಗೆ ಎಲ್ಲ ರೈತರು ಉತ್ತರ ತಿಳಿದುಕೊಳ್ಳಬೇಕಾಗಿದೆ.

ಗುಲಾಬಿ ಬೆಳೆಯಲ್ಲಿ ಹೇಗೆ ಪಡೆಯುವುದು ಹೆಚ್ಚು ಇಳುವರಿ..?

ಸೌಂದರ್ಯದ ಪ್ರತೀಕ ಎಂದರೆ ಹೂಗಳು ಕಲರ್ ಫುಲ್ ಬಣ್ಣ,ಸುವಾಸನೆಗಳಿಂದ ಎಲ್ಲರ ಮೈಮನ ತಣಿಸುತ್ತವೆ.ಅದರಲ್ಲೂ ಹೂಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಗುಲಾಬಿ ಹೂ ನೋಡುತ್ತಿದ್ದರೆ, ಈ ಸೌಂದರ್ಯಕ್ಕೆ ಮತ್ಯಾವುದೂ ಸಾಟಿಯೇ ಇಲ್ಲ ಎನಿಸಿಬಿಡುತ್ತೆ.ಮಾರುಕಟ್ಟೆಯಲ್ಲಿಯೂ ಸದಾ ಬೇಡಿಕೆಯಲ್ಲಿರುವ ಗುಲಾಬಿಹೂ, ಸಾಕಷ್ಟು ಅಲಂಕಾರಿಕ ಜಾಗದಲ್ಲಿ ಬಳಸಲಾಗುತ್ತದೆ.

|< 28 29 30 31 32>|
Home    |   About Us    |   Contact    |   
microbi.tv | Powered by Ocat Online Advertising Service in India