ಸಾವಯವದಲ್ಲಿ ಯಶಸ್ಸು ಕಂಡ ಹಾಗಲಕಾಯಿ ಬೆಳೆಗಾರ

ಹಾಗಲಕಾಯಿಯ ರುಚಿ ಕಹಿಯಾಗಿದ್ದರೂ, ಆರೋಗ್ಯಕ್ಕೆ ಅಮೃತವಾಗಿದೆ. ಇಂತಹ ಬೆಳೆಯನ್ನ ಕೃಷಿಕರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿಯಲ್ಲಿ ಬೆಳೆದರೆ ಎಲ್ಲರಿಗೂ ಹಿತ. ರೈತರಿಗೆ ಉತ್ತಮ ಇಳುವರಿ ಸಿಗುವುದರ ಜತೆಗೆ, ಜನ ಸಾಮಾನ್ಯರ ಆರೋಗ್ಯ ವೃದ್ಧಿಗೊಳ್ಳಲು ದಾರಿಯಾಗುತ್ತದೆ.

ತೆಂಗಿನ ತೋಟದಲ್ಲಿ ರೈತರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ-ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರ ಮಾರ್ಗದರ್ಶನ

ನಮ್ಮ ರಾಜ್ಯದವರೇ ಆದ, ಆದರೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಪ್ರಖ್ಯಾತಿ ಪಡೆದಿರುವ ಸಾವಯವ ಕೃಷಿತಜ್ಞರಾದ, ವಿಜ್ಞಾನಿ ಡಾ.ಕೆ.ಆರ್.ಹುಲ್ಲುನಾಚೆಗೌಡರು ಮತ್ತು ಡಾ. ವಿಕ್ರಮ್, ಸಾಯಿಲ್ ಡಾಕ್ಟರುಗಳಾದ ಚೇತನ್, ಶಿಲ್ಪ, ಹಾಸನ ಚೇತನ್, ಶ್ರೀನಿವಾಸ್ಗಿರೀಶ್ ತಂಡದೊಂದಿಗೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ರಾಯಸಂದ್ರ ಗ್ರಾಮದ ಸತೀಶ್ ಎಂಬುವರ ತೋಟದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ತಾಲೂಕಿನ ಸುಮಾರು 30 ರೈತರು ಈ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡರು.

ಅಡಿಕೆ ತೋಟದಲ್ಲಿ ರೈತರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ-ಡಾ.ಕೆ.ಆರ್.ಹುಲ್ಲುನಾಚೆಗೌಡರ ಸಾರಥ್ಯ

ವಿಷಮುಕ್ತ ಭೂಮಿ, ವಿಷಮುಕ್ತ ಆಹಾರ, ವಿಷಮುಕ್ತ ಗಾಳಿ ಮತ್ತು ವಿಷಮುಕ್ತ ನೀರು ಎಂಬ ಸಂಕಲ್ಪದೊಂದಿಗೆ ಡಾ. ಸಾಯಿಲ್ ಖ್ಯಾತಿಯ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯು  ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಕೆಲಸಮಾಡುತ್ತಿದೆ ಎಂದು ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಹುಲ್ಲುನಾಚೆಗೌಡರು ತಿಳಿಸಿದರು.

MNC ಉದ್ಯೋಗಿ ಸಾವಯವದಲ್ಲಿ ಯಶಸ್ಸುಗಳಿಸಲು ಮಾಡಿದ್ದೇನು ಗೊತ್ತಾ?

ಬಾಳೆ ಬೆಳೆ ಬೆಳೆಯುವ ಮೊದಲು, ನಿರ್ವಹಣಾ ಕ್ರಮಗಳನ್ನ ಅರಿತು ಬೆಳೆಯಲು ಮುಂದಾದ್ರೆ, ಬೆಳೆ ನಿರೀಕ್ಷೆಗಿಂತ ಹೆಚ್ಚು ಇಳುವರಿ ನೀಡುವುದಕ್ಕೆ ಮುಂದಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೃಷಿಕ ವಿಜಯಕುಮಾರ ಅವರು, ತಮ್ಮ ಬಾಳೆ ಬೆಳೆಗೆ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನ ಪಾಲಿಸಿದ್ದರಿಂದ, ಬೆಳೆ ಇಂದು ಗೊನೆ ತೂಗುವ ಹಂತದಲ್ಲಿಯೂ ಸಹಿತ ಹಸಿರುತನವನ್ನ ಕಳೆದುಕೊಂಡಿಲ್ಲ.

ಸೂರ್ಯಕಾಂತಿಯಲ್ಲಿ ಸಮೃದ್ಧ ಕಾಳು, ಸಂತೃಪ್ತಿಯಾಯಿತು ರೈತನ ಬಾಳು..!

ಸೂರ್ಯಕಾಂತಿ ಬೆಳೆ, ಅದ್ಭುತ ಗುಣಗಳನ್ನ ಹೊಂದಿರುವ ಕಾರಣ, ಹೆಚ್ಚು ಹೆಚ್ಚು ಮೌಲ್ಯವರ್ಧನೆಗಳಿಂದ ಇಂದು ಮಾರುಕಟ್ಟೆಯಲ್ಲಿ ಬೇಡಿಕೆಗಳಿಸಿಕೊಳ್ಳುತ್ತಿದೆ. ಇಂತಹ ಬೆಳೆಯನ್ನ ರೈತರು, ಬೆಳೆಯಲು ಮುಂದಾದಾಗಲೆಲ್ಲ, ಸೋಲು ಸಾಮಾನ್ಯವಾಗುತ್ತಿದೆ, ಗೆಲವು ವಿರಳವಾಗುತ್ತಿದೆ. ಏಕೆಂದರೆ ರೈತರು ಕೃಷಿ ಭೂಮಿಗೆ ಆಗುತ್ತಿರುವ ತೊಂದರೆಗಳನ್ನ ಲೆಕ್ಕಿಸದೆ, ರಾಸಾಯನಿಕ ಗೊಬ್ಬರವನ್ನ ಸುರಿಯುತ್ತಿದ್ದರೆ ಬೆಳೆಯಲ್ಲಿ ಬಲವಿಲ್ಲದೆ, ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ.

         ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಸೊಣ್ಣ ಗ್ರಾಮದ ಕೃಷಿಕ ಕೊಟ್ರೇಶ್ ಅವರು, ತಮ್ಮ ಸೂರ್ಯಕಾಂತಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ಕೃಷಿ ಪದ್ಧತಿ ಅನುಸರಿಸಿಕೊಂಡಿದ್ದರಿಂದ ಬೆಳೆ ಇಂದು ಕಾಳುಗಳನ್ನ ಹೊತ್ತು ರೈತನಿಗೆ ಉತ್ತಮ ಇಳುವರಿಯ ವಿಶ್ವಾಸ ನೀಡುತ್ತಿದೆ. ಸಾವಯವ ಕೃಷಿಯಲ್ಲಿ ಹೇಗೆ ನಿರ್ವಹಣೆ ಮಾಡಿಕೊಂಡರು ಎಂಬುವುದು ಇಲ್ಲಿ ಅತ್ಯಂತ ಮುಖ್ಯ. ಕೃಷಿಕ ಕೊಟ್ರೇಶ್ ಅವರು, ಹಿಂದೆ ಅಲಸಂದಿ  ಬೆಳೆ ಬೆಳೆದಿದ್ದರು. ಆ ಬೆಳೆ ಕಟಾವಾದ ನಂತರ ತ್ಯಾಜ್ಯವನ್ನ ಸುಡದೆ,  ಭೂಮಿಯಲ್ಲೇ ಬಿಟ್ಟು ಉಳುಮೆ ಮಾಡಿದರು.

 ಸೂರ್ಯಕಾಂತಿಗೆ ಬೀಜೋಪಚಾರ:

 ಭೂ ಸಿದ್ಧತೆಯಾದ ನಂತರ ಕೃಷಿಕ ಬೀಜಗಳನ್ನ ನೇರವಾಗಿ ಬಿತ್ತಲಿಲ್ಲ, ಬದಲಿಗೆ ಆರೋಗ್ಯಕರ ಬೆಳವಣಿಗೆಗಾಗಿ ಬೀಜೋಪಚಾರ ಕ್ರಮ ಕೈಗೊಂಡರು. ಆನಂತರ ಸೂರ್ಯಕಾಂತಿ ಬೀಜಗಳನ್ನ ಬಿತ್ತಲು ಮುಂದಾದ್ರು. ಇದರಿಂದ ಬಿಳಿ ಬೇರುಗಳು ಅಭಿವೃದ್ಧಿಯಾದವು, ಎರೆಹುಳುಗಳ ಸಂತತಿ ಅಭಿವೃದ್ಧಿಯಾಯಿತು, ಮಣ್ಣು ಸಡಿಲವಾಯಿತು.

  ಬೆಳೆಗೆ ಪೋಷಕಾಂಶ:

 ಬೆಳೆಗೆ ಪೋಷಕಾಂಶ ನೀಡಲು ಕೃಷಿಕ ರಾಸಾಯನಿಕ ಗೊಬ್ಬರದ ಸಹವಾಸಕ್ಕೆ ಹೋಗದೆಸಾವಯವ ಕೃಷಿಯ ಮೂಲಕ ಸಮಗ್ರ ಪೋಷಕಾಂಶಗಳನ್ನ ಒದಗಿಸಿದ್ರು. ಇದರಿಂದ ಬೆಳೆ ಬಲಗೊಂಡು, ಸಮೃದ್ಧವಾಗಿ ಕಾಳುಗಳನ್ನ ಹೊತ್ತು ಕೃಷಿಕನ ನೆಮ್ಮದಿಗೆ ಕಾರಣವಾಗಿದೆ.

            ಒಟ್ಟಿನಲ್ಲಿ ಕೃಷಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರ ಫಲವಾಗಿ, ಅಂದುಕೊಂಡ ಇಳುವರಿ ಪಡೆಯಲು ಸಾಧ್ಯವಾಯಿತು

 

ವರದಿ: ಶ್ವೇತಾ ಕಲಕಣಿ

 

 ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://www.youtube.com/watch?v=1mmi_EscQE8

ಈ ಕೃಷಿಕ ಬೆಳೆದ ಸೇವಂತಿಗೆ ಮತ್ತು ಗುಲಾಬಿಗೆ ಫುಲ್ ಡಿಮ್ಯಾಂಡ್..!

ಹಬ್ಬ, ಪೂಜೆ, ಸಾಂಪ್ರದಾಯಿಕ ಕಾರ್ಯಕ್ರಮ, ಯಾವುದೇ ಅಲಂಕಾರವಾಗಿರಲಿ ಹೂವಿಲ್ಲದೆ ಪರಿಪೂರ್ಣತೆ ಪಡೆಯುವುದಿಲ್ಲ. ಹಾಗಾಗಿ ಹೂಗಳಿಗೆ ಸರ್ವೇಸಾಮಾನ್ಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಹೀಗಿರುವಾಗ ರೈತರು ತೋಟಗಾರಿಕೆ ಬೆಳೆ, ತರಕಾರಿ ಬೆಳೆ ಬೆಳೆಯುದರ ಜತೆಗೆ ಪುಷ್ಪ ಕೃಷಿಯತ್ತಲೂ ಸ್ವಲ್ಪ ಗಮನ ಹರಿಸಿದ್ರೆ ಹೆಚ್ಚು ಆದಾಯ ಪಡೆಯಲು ಸಾಧ್ಯ.

ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗಿಲ್ಲ, ಹೆಚ್ಚಾಯಿತು..!

ಕೃಷಿಕರು ಹೆಚ್ಚಿನ ಆದಾಯ ಪಡೆಯುವ ಸಲುವಾಗಿ, ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯಲು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿಕರು ಬೆಳೆಗೆ ಉತ್ತಮ ಆಹಾರ, ಸರಿಯಾದ ಅಂತರ, ವೈಜ್ಞಾನಿಕ ನಿರ್ವಹಣೆ ಪದ್ಧತಿ ಅಳವಡಿಸಿಕೊಂಡರೆ ಕಬ್ಬು ಬೆಳೆಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯ.

ರಾಷ್ಟ್ರೀಯ ಬೆಳೆ ವಿಮೆ-ಆಪತ್ಕಾಲದಲ್ಲಿ ಕಾಯುವ ಜಮೆ

ಭಾರತ ಒಂದು ಕೃಷಿ ಪ್ರಧಾನವಾದ ದೇಶ. ರೈತರ ವಿವಿಧ ಸಮಸ್ಯೆಗಳನ್ನು ಪರಿಹಾರ ಮಾಡಲು ಕೇಂದ್ರ ಸರ್ಕಾರವು ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಜಾರಿಗೊಳಿಸಿದ ಮಹತ್ವದ ಯೋಜನೆಯೇ ರಾಷ್ಟ್ರೀಯ ಬೆಳೆ ವಿಮಾ ಯೋಜನೆ.

ರಾಸಾಯಿಕ ಗೊಬ್ಬರ-ಮನುಕುಲದ ಅಸ್ತಿತ್ವಕ್ಕೆ ಸಂಚಕಾರ..!

ಆಧುನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಅವಿಭಾಜ್ಯ ಅಂಗವೇನೊ ಎಂಬಂತಹ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ರಾಸಾಯನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ಕೃಷಿ ಭೂಮಿಯು ದಿನ ಕಳೆದಂತೆಲ್ಲ ಬರಡಾಗುತ್ತಿದೆ. ಭೂತಾಯಿ ತನ್ನ ಒಡಲಿನಟ್ಟುಕೊಂಡ ಸಕಲ ಜೈವಿಕ ಸಂಪತ್ತುಗಳು ರಾಸಾಯನಿಕದ ವಿಷದ ಜಂತುವಿನಿಂದ ನಶಿಸುತ್ತಿವೆ. ಹೀಗಾಗಿ ಕೃಷಿಕರು ಬೆವರು ಸುರಿಸಿ ಬೆಳೆದ ಬೆಳೆ ಸರಿಯಾಗಿ ಕೈಗೆ ಸಿಗುತ್ತಿಲ್ಲ.

ಬಡವರ ಬಾದಾಮಿ ಶೇಂಗಾಗೆ ಬೀಜೋಪಚಾರದ ಶ್ರೀಮಂತಿಕೆ..!

ಶೇಂಗಾ(ನೆಲಗಡಲೆ) ಬೀಜ ಬಿತ್ತುವ ಪೂರ್ವದಲ್ಲಿ ಬೀಜಗಳನ್ನ ಬೀಜೋಪಚರಿಸಿ ಬಿತ್ತುವುದರಿಂದ ಬೀಜಗಳಿಗೆ ಹೆಚ್ಚಿನ ರಕ್ಷಣೆ ಒದಗುತ್ತದೆ. ಮಣ್ಣಿನಲ್ಲಿ ಅಪಕಾರಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಅವು ಬೀಜಗಳನ್ನ ಸರಿಯಾಗಿ ಮೊಳಕೆ ಒಡೆಯಲು ಬಿಡದೆ ನಿಷ್ಕ್ರಿಯಗೊಳಿಸುತ್ತವೆ. ಇದರಿಂದ ಬಿತ್ತನೆಗೆ ಮಾಡಿದ್ದ ಖರ್ಚು, ಶ್ರಮ ಎಲ್ಲವೂ ವ್ಯರ್ಥವಾಗುತ್ತೆ. ಇದರಿಂದ ಪಾರಾಗಲು ಇರುವ ಶ್ರೇಷ್ಠ ಮಾರ್ಗವೇ ಬೀಜೋಪಚಾರ.

|< ... 30 31 32>|
Home    |   About Us    |   Contact    |   
microbi.tv | Powered by Ocat Online Advertising Service in India