Blog

ಬೀಜೋಪಚಾರ:

ಕೃಷಿಕ ವಿಜಯಕುಮಾರ ತಮ್ಮ ಬಾಳೆ ಬೆಳೆಗೆ ರಾಸಾಯನಿಕ ಗೊಬ್ಬರ ಬಳಸುವುದನ್ನ ನಿಲ್ಲಿಸುವ ನಿರ್ಧಾರ ಕೈಗೊಂಡರು. ಆನಂತರ ಬೆಳೆಗೆ ಯಾವುದೇ ರೋಗ, ಕೀಟಗಳ ಹಾವಳಿ ಹೆಚ್ಚಾಗಬಾರದು ಮತ್ತು ಬೆಳೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಾಳೆ ಸಸಿಗಳಿಗೆ ಬೀಜೋಚಪಾರ ಮಾಡಿರು. ಇದರಿಂದ ಬಿಳಿ ಬೇರುಗಳು ಹೆಚ್ಚಾಗಿ ಅಭಿವೃದ್ಧಿಯಾದವು, ನಂತರ ಉಪಕಾರಿ ಸೂಕ್ಷ್ಮಾಣು ಜೀವಿಗಳು, ಎರೆಹುಳುಗಳ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ಕೃಷಿ ಭೂಮಿ ಸಡಿಲವಾಯಿತು. ಬೆಳೆ ಹುರುಪಿನಿಂದ ಬೆಳೆಯಲು ಸಾಧ್ಯವಾಯಿತು.

 

ಬೆಳೆಗೆ ಪೋಷಕಾಂಶ:

ಕೃಷಿಕ ವಿಜಯಕುಮಾರ ಬೆಳೆಗೆ ಪೋಷಕಾಂಶ ನೀಡುವಾಗ ಯಾವುದೇ ರಾಸಾಯನಿಕ ಗೊಬ್ಬರ ಬಳಸಲು ಮುಂದಾಗಲಿಲ್ಲ, ಬದಲಾಗಿ ಸಾವಯವ ಕೃಷಿ ಪದ್ಧತಿ ಅನುಸರಿಸಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಲು ಮುಂದಾದ್ರು. ಇದರಿಂದ ಬೆಳೆಗೆ ಒದಗಬೇಕಾದ ಎಲ್ಲಾ 17 ಪೋಷಕಾಂಶಗಳು ಸೂಕ್ತವಾಗಿ ದೊರೆಯಿತು. ಹೀಗಾಗಿ ಬೆಳೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬರಲಿಲ್ಲ. ಫಲವತ್ತಾದ ಕೃಷಿ ಭೂಮಿ, ಸೂಕ್ತ ಪ್ರಮಾಣದ ನೀರು ಮತ್ತು ಸಮಗ್ರ ಪೋಷಕಾಂಶಗಳ ಕೃಪೆಯಿಂದ  ಕಟಾವಿನ ಹಂತಲ್ಲೂ ಯಾವುದೇ ಅಪಾಯಕ್ಕೆ ಸಿಲುಕದೆ ಬೆಳೆ ಸಮೃದ್ಧವಾಗಿ ಬೆಳೆಯಿತು.


ಒಟ್ಟಿನಲ್ಲಿ ಕೃಷಿಕರು ಬಾಳೆ ಬೆಳೆಗೆ ಅವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು, ಬೆಳೆಗಳನ್ನ ಅಪಾಯಕ್ಕೆ ತಳ್ಳುವ ಬದಲು, ಸಾವಯವ ಕೃಷಿಯಲ್ಲಿ ಸಂರಕ್ಷಿಸುವುದೇ ಲೇಸು ಎಂಬುದಕ್ಕೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವಿಜಯ ಕುಮಾರ ಸಾಕ್ಷಿಯಾಗಿದ್ದಾರೆ.


ವರದಿ: ಶ್ವೇತಾ ಕಲಕಣಿ


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=BX2FBzQseXo&t=778s

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India