Blog

ಸೂರ್ಯಕಾಂತಿ ಬೆಳೆ, ಅದ್ಭುತ ಗುಣಗಳನ್ನ ಹೊಂದಿರುವ ಕಾರಣ, ಹೆಚ್ಚು ಹೆಚ್ಚು ಮೌಲ್ಯವರ್ಧನೆಗಳಿಂದ ಇಂದು ಮಾರುಕಟ್ಟೆಯಲ್ಲಿ ಬೇಡಿಕೆಗಳಿಸಿಕೊಳ್ಳುತ್ತಿದೆ. ಇಂತಹ ಬೆಳೆಯನ್ನ ರೈತರು, ಬೆಳೆಯಲು ಮುಂದಾದಾಗಲೆಲ್ಲ, ಸೋಲು ಸಾಮಾನ್ಯವಾಗುತ್ತಿದೆ, ಗೆಲವು ವಿರಳವಾಗುತ್ತಿದೆ. ಏಕೆಂದರೆ ರೈತರು ಕೃಷಿ ಭೂಮಿಗೆ ಆಗುತ್ತಿರುವ ತೊಂದರೆಗಳನ್ನ ಲೆಕ್ಕಿಸದೆ, ರಾಸಾಯನಿಕ ಗೊಬ್ಬರವನ್ನ ಸುರಿಯುತ್ತಿದ್ದರೆ ಬೆಳೆಯಲ್ಲಿ ಬಲವಿಲ್ಲದೆ, ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ.

         ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಸೊಣ್ಣ ಗ್ರಾಮದ ಕೃಷಿಕ ಕೊಟ್ರೇಶ್ ಅವರು, ತಮ್ಮ ಸೂರ್ಯಕಾಂತಿ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ಕೃಷಿ ಪದ್ಧತಿ ಅನುಸರಿಸಿಕೊಂಡಿದ್ದರಿಂದ ಬೆಳೆ ಇಂದು ಕಾಳುಗಳನ್ನ ಹೊತ್ತು ರೈತನಿಗೆ ಉತ್ತಮ ಇಳುವರಿಯ ವಿಶ್ವಾಸ ನೀಡುತ್ತಿದೆ. ಸಾವಯವ ಕೃಷಿಯಲ್ಲಿ ಹೇಗೆ ನಿರ್ವಹಣೆ ಮಾಡಿಕೊಂಡರು ಎಂಬುವುದು ಇಲ್ಲಿ ಅತ್ಯಂತ ಮುಖ್ಯ. ಕೃಷಿಕ ಕೊಟ್ರೇಶ್ ಅವರು, ಹಿಂದೆ ಅಲಸಂದಿ  ಬೆಳೆ ಬೆಳೆದಿದ್ದರು. ಆ ಬೆಳೆ ಕಟಾವಾದ ನಂತರ ತ್ಯಾಜ್ಯವನ್ನ ಸುಡದೆ,  ಭೂಮಿಯಲ್ಲೇ ಬಿಟ್ಟು ಉಳುಮೆ ಮಾಡಿದರು.

 ಸೂರ್ಯಕಾಂತಿಗೆ ಬೀಜೋಪಚಾರ:

 ಭೂ ಸಿದ್ಧತೆಯಾದ ನಂತರ ಕೃಷಿಕ ಬೀಜಗಳನ್ನ ನೇರವಾಗಿ ಬಿತ್ತಲಿಲ್ಲ, ಬದಲಿಗೆ ಆರೋಗ್ಯಕರ ಬೆಳವಣಿಗೆಗಾಗಿ ಬೀಜೋಪಚಾರ ಕ್ರಮ ಕೈಗೊಂಡರು. ಆನಂತರ ಸೂರ್ಯಕಾಂತಿ ಬೀಜಗಳನ್ನ ಬಿತ್ತಲು ಮುಂದಾದ್ರು. ಇದರಿಂದ ಬಿಳಿ ಬೇರುಗಳು ಅಭಿವೃದ್ಧಿಯಾದವು, ಎರೆಹುಳುಗಳ ಸಂತತಿ ಅಭಿವೃದ್ಧಿಯಾಯಿತು, ಮಣ್ಣು ಸಡಿಲವಾಯಿತು.

  ಬೆಳೆಗೆ ಪೋಷಕಾಂಶ:

 ಬೆಳೆಗೆ ಪೋಷಕಾಂಶ ನೀಡಲು ಕೃಷಿಕ ರಾಸಾಯನಿಕ ಗೊಬ್ಬರದ ಸಹವಾಸಕ್ಕೆ ಹೋಗದೆಸಾವಯವ ಕೃಷಿಯ ಮೂಲಕ ಸಮಗ್ರ ಪೋಷಕಾಂಶಗಳನ್ನ ಒದಗಿಸಿದ್ರು. ಇದರಿಂದ ಬೆಳೆ ಬಲಗೊಂಡು, ಸಮೃದ್ಧವಾಗಿ ಕಾಳುಗಳನ್ನ ಹೊತ್ತು ಕೃಷಿಕನ ನೆಮ್ಮದಿಗೆ ಕಾರಣವಾಗಿದೆ.

            ಒಟ್ಟಿನಲ್ಲಿ ಕೃಷಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದರ ಫಲವಾಗಿ, ಅಂದುಕೊಂಡ ಇಳುವರಿ ಪಡೆಯಲು ಸಾಧ್ಯವಾಯಿತು

 

ವರದಿ: ಶ್ವೇತಾ ಕಲಕಣಿ

 

 ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://www.youtube.com/watch?v=1mmi_EscQE8

 



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies