Blog

ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯಲ್ಲಿ ಫಲವತ್ತತೆ ನಶಿಸಿ ಹೋಗುತ್ತಿದ್ದುಭೂಮಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಭೂಮಿಯನ್ನು ನಾವು ಕಾಪಾಡಿಕೊಳ್ಳಬೇಕು, ಭೂಮಿ ನಮ್ಮ ಮುಂದಿನ ಪೀಳಿಗೆಗೂ ಆಧಾರವಾಗಿರಬೇಕು, ಬೆಳೆಗಳಿಗೆ ಪೋಷಕಾಂಶಗಳು ಸಿಗಬೇಕು ಎಂದರೆ, ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಪೋಷಕಾಂಶಗಳನ್ನು ನೀಡುವುದು ತುಂಬಾ ಅವಶ್ಯಕವಾಗಿದೆ.


ಈ ನಿಟ್ಟಿನಲ್ಲಿ ಬೆಳೆಗಳಿಗೆ ಪೋಷಕಾಂಶ ಒದಗಿಸಲು ಡಾ.ಸಾಯಿಲ್ ಸ್ಲರಿ ಎನ್ರಿಚರ್ ಉಪಯುಕ್ತವಾಗಿದ್ದು, ಬೆಳೆಗಳಿಗೆ ಬೇಕಾದ ಪೋಷಕಾಂಶವನ್ನು ನೀಡುವುದರಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಸ್ಲರಿ ಎನ್ರಿಚರ್ ಎಂದರೇನು? ಇವುಗಳನ್ನು ಬಳಸುವ ಕ್ರಮಗಳು ಯಾವುವು ಎಂದು ನೋಡುವುದಾದರೆ.


ಈ ಸ್ಲರಿಯಲ್ಲಿ ಸಾಕಷ್ಟು ಉಪಕಾರಿ ಸೂಕ್ಷ್ಮಾಣು ಜೀವಿಗಳಿದ್ದು, ಬೆಳೆ ಮತ್ತು ಭೂಮಿಗೆ ಪೋಷಕಾಂಶವನ್ನು ನೀಡುವ ಸಾಮರ್ಥ್ಯ ಸ್ಲರಿ ಎನ್ರಿಚರ್ ನಲ್ಲಿರುತ್ತದೆ, 1) ಡಾ.ಸಾಯಿಲ್ ಸ್ಲರಿ ಫಾಸ್ಪೇಟ್  2) ಡಾ.ಸಾಯಿಲ್ ಸ್ಲರಿ ಪೊಟ್ಯಾಷ್ ಎಂಬ ಎರಡು ವಿಧಗಳನ್ನು ಸ್ಲರಿ ಎನ್ರಿಚರ್ ನಲ್ಲಿ ಕಾಣಬಹುದು.


ಸ್ಲರಿ ಎನ್ರಿಚರ್ ತಯಾರಿಸುವ ವಿಧಾನ:

ಮೊದಲಿಗೆ 500 ಲೀಟರ್ ನೀರು ಹಿಡಿಯುವಷ್ಟು ಸಾಮರ್ಥ್ಯವಿರುವ ಬ್ಯಾರಲ್ ನ್ನು ತೆಗೆದುಕೊಂಡು, ಅದರಲ್ಲಿ 200 ಲೀಟರ್ ಷ್ಟು ನೀರನ್ನು ತುಂಬಬೇಕು. ಅದಕ್ಕೆ 40 ರಿಂದ 50 ಕೆ.ಜಿ ಸಗಣಿಯನ್ನು ಹಾಕಿ, 5 ಕೆ.ಜಿ ಶೇಂಗಾ ಅಥವಾ ಕಡಲೆ ಹಿಂಡಿಯನ್ನು ಅದರ ಜತೆಗೆ ಬೆರೆಸಿಕೊಳ್ಳಬೇಕು. ಇದಕ್ಕೆ ಡಾ.ಸಾಯಿಲ್ ಪೊಟ್ಯಾಷ್ ಸ್ಲರಿ ಅಥವಾ ಡಾ.ಸಾಯಿಲ್ ಫಾಸ್ಪೇಟ್ ಸ್ಲರಿಯನ್ನು ಸೇರಿಸಿ ಚೆನ್ನಾಗಿ ಕಲುಕಿ ತೋಟದಲ್ಲಿ ನೆರಳಿರುವಂತಹ ಜಾಗದಲ್ಲಿ 6 ರಿಂದ 7 ದಿನದ ವರೆಗೆ ಇಡಬೇಕಾಗುತ್ತದೆ. ಪ್ರತಿ ದಿನ ಆ ಮಿಶ್ರಣದಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ತಯಾರಾಗುವುದರಿಂದ, ಬೆಳಿಗ್ಗೆ ಮತ್ತು ಸಾಯಂಕಾಲ ಕಲುಕುತ್ತಿರಬೇಕು. 7 ದಿನದ ಬಳಿಕ ಮಿಶ್ರಣಕ್ಕೆ 150 ಲೀಟರ್ ನೀರನ್ನು ಬೆರೆಸಿ ಬೆಳೆಗಳಿಗೆ ನೀಡಬೇಕಾಗುತ್ತದೆ.


ಬಳಸುವ ವಿಧಾನ:

ಒಂದು ಎಕರೆ ಕೃಷಿ ಭೂಮಿ ಇದ್ದರೆ 350 ಲೀಟರ್ ಸ್ಲರಿ ಬೇಕಾಗುತ್ತದೆ. ನೀವು ಸ್ಲರಿ ನೀಡುವ ಹಿಂದಿನ ದಿನ ಬೆಳೆಗಳಿಗೆ ನೀರು ಹಾಯಿಸಿರಬೇಕು, ನೀರು ಹಾಯಿಸಿದ ಮರು ದಿನ ಸ್ಲರಿಯನ್ನು ನೀಡಬೇಕಾಗುತ್ತದೆ. ಬಹು ವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆಯನ್ನು ಹೊರತು ಪಡಿಸಿ ಯಾವುದೇ ಬೆಳೆಯಾಗಿರಲಿ, ಬೆಳೆಯ ಒಂದೊಂದು ಗಿಡಕ್ಕೆ ಅರ್ಧ ಲೀಟರಷ್ಟು ಹಾಕಬೇಕು. ತೆಂಗು, ಅಡಿಕೆ ಮರಗಳಿದ್ದರೆ, ಒಂದು ಲೀಟರಷ್ಟು ಹಾಕಬೇಕು. ಹೀಗೆ ಎಲ್ಲ ಬೆಳೆಗಳಿಗೆ ನೀಡಬೇಕಾಗುತ್ತದೆ. ಬೆಳೆ ನಾಟಿ ಮಾಡಿದ ಮೂರು ತಿಂಗಳ ಬಳಿಕ ಡಾ.ಸಾಯಿಲ್ ಸ್ಲರಿ ಫಾಸ್ಪೇಟ್ ಉಪಯೋಗಿಸಬೇಕು. ನಂತರ  20 ದಿನಗಳ ಬಳಿಕ ಡಾ.ಸಾಯಿಲ್ ಪೊಟ್ಯಾಷ್ ಸ್ಲರಿಯನ್ನು ಬೆಳೆಗೆ ನೀಡಬೇಕು, ಹೀಗೆ ವರ್ಷಕ್ಕೆ ನಾಲ್ಕು ಬಾರಿ ನೀಡಿದರೆ ಉತ್ತಮ.


ಬೆಳೆಗಳಿಗೆ ಫಾಸ್ಪೇಟ್ ಸ್ಲರಿಯ ಲಾಭ

ರಾಸಾಯನಿಕಗಳ ಬಳಕೆಯಿಂದ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿದೆ. ಸಾಕಷ್ಟು ಜೀವ ರಾಶಿಯನ್ನು ಹೊಂದಿರುವ ಮಣ್ಣು, ರಾಸಾಯನಿಕದಿಂದ ಹಾಳಾಗುತ್ತಿದೆ. ಹೀಗಿರುವಾಗ ಡಾ.ಸಾಯಿಲ್ ಫಾಸ್ಪೇಟ್ ಸ್ಲರಿಯಲ್ಲಿ ಬಿಳಿ ಬಣ್ಣದ ದಾರದ ಹಾಗೆ ಸೂಕ್ಷ್ಮಾಣು ಜೀವಿಗಳಿದ್ದು, ಬೆಳೆಗಳ ಬೇರಿನ ಜತೆಗೆ ಕೂಡಿಕೊಂಡು ಮಣ್ಣಿನಲ್ಲಿರುವಂತಹ ಫಾಸ್ಪೇಟ್ ನ್ನು ಹೀರಿ, ಬೆಳೆಗೆ ಸಿಗುವ ಹಾಗೆ ಮಾಡುತ್ತದೆ. ಮಣ್ಣಿನಲ್ಲಿರುವ ಫಾಸ್ಪೇಟ್ ಬೆಳೆಗೆ ಸಿಕ್ಕಾಗ, ಬೇರುಗಳ ಅಭಿವೃದ್ಧಿ ಆಗಿ ಬೆಳೆಯ ಶಾರೀರಿಕ ಕ್ರಿಯೆಯನ್ನು ಚೆನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತದೆ.

 

ಬೆಳೆಗಳಿಗೆ ಪೊಟ್ಯಾಷ್ ಸ್ಲರಿಯ ಲಾಭ

ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಬೆಳೆಗಳ ಬೆಳವಣಿಗೆ ಕುಂಠಿತವಾಗಿ, ಹವಲಾರು ರೋಗಗಳಿಗೆ ಬೆಳೆಗಳು ತುತ್ತಾಗುತ್ತವೆ. ಅಂತಹ ಸಂದರ್ಭದಲ್ಲಿ ಹಳದಿ ಎಲೆ ರೋಗ ಕಾಣಿಸಿಕೊಳ್ಳುವುದು ಕೂಡ ಸಹಜ. ಆದ್ದರಿಂದ ನಮ್ಮ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು, ಬೆಳೆಗಳು ಶಕ್ತವಾಗಬೇಕು ಎಂದರೆ ಡಾ.ಸಾಯಿಲ್ ಪೊಟ್ಯಾಷ್ ನ್ನು ಬಳಸಬೇಕು. ಇದು ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಬೆಳೆಯಲ್ಲಿ ರೋಗ ಕಾಣಿಸಿಕೊಂಡರೆ ಅವುಗಳನ್ನು ಎದುರಿಸುವಂತಹ ಶಕ್ತಿಯನ್ನು ಪೊಟ್ಯಾಷ್ ಸ್ಲರಿ ನೀಡುತ್ತದೆ. ಅದರ ಜತೆಗೆ ನೀರಿನ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ.


ಭೂಮಿಯಲ್ಲಿ ಹೆಚ್ಚಾಗಿ ಉಪಕಾರಿ ಸೂಕ್ಷ್ಮಾಣು ಜೀವಿಗಳಿದ್ದರೆ, ಮಣ್ಣಿನಲ್ಲಿ ಸಾವಯವ ಇಂಗಾಲ ಉತ್ಪತ್ತಿಯಾಗುವುದರ ಜತೆಗೆ ಜೈವಿಕ ಗುಣ, ರಾಸಾಯನಿಕ ಗುಣ, ಭೌತಿಕ ಗುಣಗಳು ಸೃಷ್ಠಿಯಾಗಿ ಮಣ್ಣನ್ನು ಫಲವತ್ತಾಗಿಡಲು ಸಹಾಯ ಮಾಡುತ್ತವೆ,


ಸ್ಲರಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು, ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳ ಬೇಕೆಂದರೆ ಈ ಕೆಳಗೆ ಕಾಣುವ ಲಿಂಕ್ ಕ್ಲಿಕ್ ಮಾಡಿ ವಿಡೀಯೋ ಮುಖಾಂತರ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

https://www.youtube.com/watch?v=247nLtQOlYw&t=87s


ವರದಿ: ವನಿತಾ ಪರಸಣ್ಣವರ್

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India