Blog

       ಮಲ್ಲಿಕಾರ್ಜುನ್ ಮತ್ತು ತಂದೆ ಪಂಚಾಕ್ಷರಿರವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬಿಸಲೇಹಳ್ಳಿಯವರು. ತಮ್ಮ ತೋಟದಲ್ಲಿ 400 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ತಂದೆ ಮಗನ ಜುಗಲ್ ಬಂದಿಯಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಹಿಂದೆ 20 ಕ್ವಿಂಟಾಲ್ ಹಸಿ ಅಡಿಕೆ ಇಳುವರಿ ತೆಗೆಯುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಇಳುವರಿಯಲ್ಲಿ ಬದಲಾವಣೆ ಆಗಿದ್ದಾದರು ಹೇಗೆ? ಮುಂಚೆ ಇಲ್ಲಿ ಇದ್ದ ಸಮಸ್ಯೆಗಳುಏನಾದವು? ಮುಂದೆ ಓದಿ.

 

 

ಸಮಸ್ಯೆಗಳು ಮತ್ತು ಡಾ.ಸಾಯಿಲ್:

       ಇವರ ತೋಟದಲ್ಲಿ ನೀರಿಗೆ ಅಭಾವ. 800 ಅಡಿ, 1000 ಅಡಿ ಬೋರ್ ವೆಲ್ ತೆಗೆದರೂ ನೀರು ಸಿಗದ ಉದಾಹರಣೆಯಿದೆ. ಇದರ ಜತೆಗೆ, ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುತ್ತಿದ್ದರಿಂದ ನೀರಿನ ಅವಶ್ಯಕತೆ ಬಹಳ ಹೆಚ್ಚಿತ್ತು. ಇವರ ಭೂಮಿ ಒಡೆದು ಬರಡಾಗುತ್ತಿತ್ತು. ರಾಸಾಯನಿಕ ಬಳಕೆಯಿಂದ ಭೂಮಿ ಗಟ್ಟಿಯಾಗುತ್ತಿತ್ತು. ಮಳೆ ಬಿದ್ದರೆ ಹೆಚ್ಚು ನೀರು ಇಂಗದೆ, ಹರಿದುಹೋಗುತ್ತಿತ್ತು. ಇದರಿಂದ ಇಳುವರಿ ಕಡಿಮೆಯಾಗಿತ್ತು. ಇದರಿಂದ ಕಂಗಾಲಾಗಿದ್ದ ಇವರು ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಖ್ಯಾತ ಸಾವಯವ ಕೃಷಿ ತಜ್ಞರು ಮತ್ತು ಮೈಕ್ರೋಬಿ ಆಗ್ರೋಟೆಕ್ ಸಂಸ್ಥಾಪಕರಾದ ಡಾ.ಕೆ.ಆರ್ ಹುಲ್ಲುನಾಚೇಗೌಡರ ತರಬೇತಿ ವೀಡಿಯೋಗಳನ್ನು ನೋಡಿ ಡಾ.ಸಾಯಿಲ್ ಬಗ್ಗೆ ತಿಳಿದುಕೊಂಡಿದ್ದಾರೆ. ಮೊದಲೇ ಕಂಗೆಟ್ಟಿದ್ದ ಇವರಿಗೆ ಡಾ.ಸಾಯಿಲ್ ಜೈವಿಕ ಗೊಬ್ಬರ ವರದಾನವಾಗಿ ಕಂಡಿದ್ದು ಸುಳ್ಳಲ್ಲ. ಮೊದಲ ಬಾರಿ ಬೆಂಗಳೂರಿನಿಂದ ಡಾ.ಸಾಯಿಲ್ ತರಿಸಿಕೊಂಡಿದ್ದರು. ಈಗ ವಿತರಕರಾದ ಪರಮೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಸಾವಯವ ಕೃಷಿ ಆರಂಭಿಸಿ ಇಳುವರಿಯನ್ನು 3 ಪಟ್ಟು ಹೆಚ್ಚಿಸಿಕೊಂಡಿದ್ದಾರೆ.

ಇದರಲ್ಲಿ ಡಾ.ಸಾಯಿಲ್ ಪಾತ್ರ ಏನು ಎಂದು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=AmchzBdjFP0&t=539s

 

ವರದಿ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India