Blog

ತುರುವೇಕೆರೆ ತಾಲ್ಲೂಕಿನ ಕಾಚಿಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಟರಾಜ್ ರವರ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದೆವು. ಅವರು ಒಮ್ಮೆ ಮಾತ್ರ ತಮ್ಮ ಅಡಿಕೆ ತೋಟಕ್ಕೆ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಅರೇಕಾ ಸ್ಪೆಷಲ್ ಜೈವಿಕ ಗೊಬ್ಬರವನ್ನು ಕೊಟ್ಟಿದ್ದರು. ಅವರೇ ಹೇಳಿದಂತೆ ತೋಟ ಈಗ ಚೆನ್ನಾಗಿದೆ ಮತ್ತು ಈ ಬಾರಿ ಒಳ್ಳೆಯ ಇಳುವರಿಯೂ ಬಂದಿದೆ.

ಅವರಿಗೆ ಟ್ರಾಕ್ಟರ್ ನಲ್ಲಿ ಉಳುಮೆ ಮಾಡುವುದನ್ನು ನಿಲ್ಲಿಸಬೇಕು. ಕಾರಣ ಅತಿಯಾದ ಭಾರದಿಂದ ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಮತ್ತು ಭೂಮಿ ಗಟ್ಟಿಯಾಗಿ ಬೇರುಗಳಿಗೆ ತೊಂದರೆ ಯಾಗುತ್ತೆ ಎಂಬುದನ್ನು ಮನವರಿಕೆ ಮಾಡಿದೆವು.

 

ಆ ಊರಿನ ಮಂದಿ ಹಸಿ ಸಗಣಿಯನ್ನು ತಿಪ್ಪೆಗೆ ಎಸೆದು, ಗೊಬ್ಬರ ಮಾಡದೆ ನೇರವಾಗಿ ತೋಟಕ್ಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ಸೂಚಿಸಲಾಯಿತು. ನಮಗೆ ಅನ್ನ ಮಾಡಿ ಹಾಕದೆ ಬರೀ ಅಕ್ಕಿಯನ್ನು ಕೊಟ್ಟರೆ ತಿನ್ನೋದಿಕ್ಕೆ ಆಗುತ್ತದೆಯೇ? ಹಾಗೆಯೇ ಮರಗಳು ಕೂಡ! ಅವುಗಳಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಗೊಬ್ಬರ ಮಾಡಿ ಕೊಡಬೇಕು, ಆಗ ಅವುಗಳು ಸಂತೋಷದಿಂದ ಸ್ವೀಕರಿಸುತ್ತವೆ.

ಅಡಿಕೆ ತೋಟದಲ್ಲಿ ಅಂತರಬೆಳೆಯಾಗಿ ಬಾಳೆ, ಕರಿಮೆಣಸು, ನುಗ್ಗೆ, ನಿಂಬೆ ಮುಂತಾದ ಉಪಯುಕ್ತ ಗಿಡಗಳನ್ನು ಹಾಕಿಕೊಂಡು ಆದಾಯಪಡೆಯಲು ಸಲಹೆ ನೀಡಲಾಯಿತು. ಮಧ್ಯದಲ್ಲಿ ತರಕಾರಿ, ಹಣ್ಣಿನ ಗಿಡಗಳು, ಬದುಗಳಲ್ಲಿ ಗೆಣಸು, ಮುಂತಾದ ಗಿಡಗಳನ್ನು ಹಾಕಿಕೊಳ್ಳಲು ಸೂಚಿಸಲಾಯಿತು. ತೋಟದ ಸುತ್ತಲೂ ಕೃಷಿ ಅರಣ್ಯವನ್ನು ಮಾಡಿ, ಲಕ್ಷಾಂತರ ಆದಾಯಪಡೆಯಬಹುದು ಎಂಬುದನ್ನು ಮನವರಿಕೆ ಮಾಡಲಾಯಿತು.

ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್.ಹುಲ್ಲುನಾಚೆಗೌಡರ ಸಲಹೆಯಂತೆ ಪ್ರತಿಯೊಂದು ಮರಗಳ ಸುತ್ತಲೂ ಒಂದೊಂದು ತಿಪ್ಪೆಯನ್ನು ಮಾಡಲು ಸಲಹೆ ನೀಡಲಾಯಿತು.

ರೈತರೆಲ್ಲರೂ ಮರೆತೇ ಹೋಗಿರುವ ತಿಪ್ಪೆಯನ್ನು ಮಾಡಿಕೊಳ್ಳುವುದು ಹೇಗೆ? ತ್ಯಾಜ್ಯ ಮೌಲ್ಯವರ್ಧನೆಯ ಅವಶ್ಯಕತೆಯನ್ನು ಹೇಳಿ ಕೊಡಲಾಯಿತು. ಹಸಿರೆಲೆ ಗೊಬ್ಬರದ ಮಹತ್ವವನ್ನು ತಿಳಿಸಲಾಯಿತು. ನೀರಿನ ಸಮರ್ಪಕ ನಿರ್ವಹಣೆಯ ಜವಾಬ್ಧಾರಿಯನ್ನು ವಿವರಿಸಲಾಯಿತು.

ತೆಂಗಿನಲ್ಲಿ ಒಂದು ಮರಕ್ಕೆ 250 ಕಾಯಿ ಇಳುವರಿ ಹಾಗೂ ಅಡಕೆಯಲ್ಲಿ ಮರಕ್ಕೆ 3-4 ಕೆಜಿ ಒಣ ಅಡಿಕೆ ಇಳುವರಿ ಪಡೆಯುವ ಸಾಧ್ಯತೆಯ ಗುಟ್ಟನ್ನು ಹೇಳಿಕೊಡಲಾಯಿತು.

ವರದಿ: ಶ್ರೀನಿವಾಸ ರೈತ

ಸಮಗ್ರ ಸುಸ್ಥಿರ ಸಾವಯವ ಕೃಷಿಗಾಗಿ ಸಂಪರ್ಕಿಸಿ:

ಉನ್ನತಿ ಎಂಟರ್ಪ್ರೈಸಸ್

ತುರುವೇಕೆರೆ.  ಫೋನ್ – 8197443132

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

https://www.youtube.com/watch?v=hADjOyPXAtw&t=115s

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India