Blog

ಕೆಲವು  ವರ್ಷಗಳ ಹಿಂದೆ ನೋಡೋದಾದ್ರೆ ಯಾರಾದರು ಮರಣಹೊಂದಿದರೆ, ಅಯ್ಯೋ ಪಾಪ ಅಂತ ಕಣ್ಣೀರುಹಾಕಿ ಶವ ಸಂಸ್ಕಾರಕ್ಕೆ ಭಾಗಿಯಾಗಿ ದುಃಖ ವ್ಯಕ್ತಪಡಿಸುತ್ತಿದ್ದೆವು. ಆದರೆ ಈ 2 ವರ್ಷಗಳಿಂದ  ಸಾವು ಅಂದ್ರೆ ಅಬ್ಬಾ..! ಆಕಡೆ ಹೋಗೋದೆ ಬೇಡ, ಯಾರ ಸಹವಾಸವೂ ಬೇಡ ಎನ್ನುವ ಹಾಗೆ ಆಗಿದೆ, ರೇಷನ್ ಅಂಗಡಿ, ಬಟ್ಟೆ ಅಂಗಡಿಗಳ ಮುಂದೆಯೆಲ್ಲಾ ಸಾಲುಗಟ್ಟಿ ನಿಲ್ಲುತ್ತಿದ್ದ ಜನರು,  ಕೊರೊನಾ ಮಹಾಮಾರಿಯಿಂದ ಹೆಣಗಳನ್ನ ಇಟ್ಟುಕೊಂಡು ಸ್ಮಶಾನದ ಮುಂದೆ ಕ್ಯೂ ನಿಲ್ಲುವಂತಾಗಿತ್ತು. ಸಿನಿಮಾ ಥಿಯೇಟರ್ ಗಳ ಮುಂದೆ ನೋಡಿದ್ದ ಹೌಸ್ ಫುಲ್ ಬೋರ್ಡ್ ಗಳನ್ನ, ಸ್ಮಶಾನದ ಮುಂದೆ ನೋಡುವ ಪರಿಸ್ಥಿತಿ ಬಂದಿತ್ತು. ಹೆಣಗಳ ಅಂತ್ಯಸಂಸ್ಕಾರಕ್ಕೂ ಜಾಗ ಇಲ್ಲದಂತಾಗಿತ್ತು.

 

 

ಹೀಗಾಗಿ  ಮನುಷ್ಯನನ್ನ ಈ ಮಹಾಮಾರಿಯಿಂದ ಉಳಿಸಿಕೊಳ್ಳಲು ಸರ್ಕಾರ ರೊಗ ನಿರೋಧಕ ವ್ಯಾಕ್ಸಿನ್ ಗಳನ್ನ ನೀಡ್ತಾಯಿದೆ. ಹಾಗಾದ್ರೆ ಈ ವ್ಯಾಕ್ಸಿನ್ ಗಳಿಂದ ಮಾತ್ರ ನಮ್ಮಲ್ಲಿ ರೋಗ ನಿರೋಧಕ ಶಕ್ತಿ  ಹೆಚ್ಚೋಕೆ ಸಾಧ್ಯವಾಗುವುದಾ?  ಅದರ ಜತೆಗೆ ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗಿರುತ್ತದೆ ಅಲ್ವಾ? ಆದ್ದರಿಂದ ರೈತರು ಈ ಸಮಸ್ಯೆಯ ಪರಿಹಾರಕ್ಕೆ ಕೈ ಜೋಡಿಸಬೇಕಾಗಿದೆ, ಪ್ರತಿಯೊಬ್ಬ ರೈತರು ಸಹಿತ ಕೊರೋನಾ ವಾರಿಯರ್ ಆಗಬೇಕಾಗಿದೆ. ರಾಸಾಯನಿಕ ಗೊಬ್ಬರವನ್ನ ಬಿಟ್ಟು ಸಾವಯವ ಕೃಷಿಗೆ ಒತ್ತು ನೀಡಬೇಕಾಗಿದೆ, ಸಾವಯವ ಕೃಷಿಯಿಂದ ಬೆಳೆದ ಆಹಾರಗಳು ಮಾತ್ರ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನ ಹೊಂದಿರುವುದರಿಂದ, ವಿಷಮುಕ್ತ ಆಹಾರವನ್ನ ಬೆಳೆದು, ದೇಶದ ಜನತೆಯ ಆರೋಗ್ಯ ಕಾಪಾಡುವಲ್ಲಿ ಮುಂದಾಗಬೇಕಿದೆ.

 

 

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ, ಯಾರು ಹಣ್ಣು, ತರಕಾರಿಗಳಂತಹ ಒಳ್ಳೆಯ ಆಹಾರವನ್ನ ಸೇವಿಸಿ ಆರೋಗ್ಯವನ್ನ ಕಾಪಾಡಿಕೊಂಡು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುತ್ತಾರೊ? ಅವರಲ್ಲಿ ಕೊರೋನ ವೈರಸ್ ಪರಿಣಾಮ ಗಂಭೀರವಾಗಿರುವುದಿಲ್ಲ ಎಂಬ ಮಾತಿದೆ. ಆದರೆ ಈಗಿನ ದಿನಮಾನಗಳಲ್ಲಿ  ಕೆಮಿಕಲ್ ಇಲ್ಲದೆ ಇರುವ ಆಹಾರವೇ ಇಲ್ಲ. ಅದಕ್ಕೆ ಕಾರಣ ಬೆಳೆಗಳಿಗೆ ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು. ಹೌದು ಬೆಳೆ ಮೊಳಕೆಯೊಡೆಯುವಾಗಲೇ ನಾವು ಕೆಮಿಕಲ್ ಗೊಬ್ಬರವನ್ನ ಉಣಿಸಿರುತ್ತೇವೆ. ಅದೇ ರಾಸಾಯನಿಕ ಗೊಬ್ಬರದಿಂದ ಬೆಳೆದ ಆಹಾರವನ್ನ ಇಡೀ ದೇಶದ ಜನರು ಸೇವಿಸುವುದು.


ಅಡುಗೆ ಮನೆಯ ಸಾಂಬಾರ ಪದಾರ್ಥಗಳು ಅಡುಗೆಗಿಂತ ಔಷಧಿಗೆ ಬಳಕೆಯಾಗುವುದು ಹೆಚ್ಚು. ತಲೆನೋವು, ಶೀತ, ಕೆಮ್ಮು, ಹೊಟ್ಟೆನೋವು ಹೀಗೆ ಒಂದಿಲ್ಲೊಂದು ಸಣ್ಣಪುಟ್ಟ ಬಾಧೆಗಳಿಗೆ ಮನೆ ಮದ್ದಾಗಿ ಶುಂಠಿ, ಲವಂಗ, ಜಾಯಿಕಾಯಿ, ಏಲಕ್ಕಿ, ಕಾಳು ಮೆಣಸು, ಜೀರಿಗೆ ಮುಂತಾದ ಪದಾರ್ಥಗಳನ್ನು ಬಳಸುತ್ತಿರುತ್ತೇವೆ. ಇದರಿಂದ ಸಾಂಬಾರ ಪದಾರ್ಥಗಳು ವಿಷಮುಕ್ತವಾಗಿದ್ದರೆ ಹೆಚ್ಚು ಉತ್ತಮ. ವಿಷಮುಕ್ತವಾಗಿರಬೇಕು ಎಂದರೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಸಾವಯವ ಪದ್ಧತಿಯಲ್ಲಿ ಬೆಳೆದಿರಬೇಕು. ಜನರು ಬಯಸುವುದೂ ಅದನ್ನೆ. ಇದೇ ಕಾರಣಕ್ಕೆ ಸಾವಯವ ಪದ್ಧತಿಯಲ್ಲಿ ಬೆಳೆದ ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಧಿಕ ಇಳುವರಿಯೂ ಸಿಗುತ್ತೆ, ಉತ್ತಮ ಬೆಲೆಯೂ ಸಿಗುತ್ತದೆ.

 

ಫಿಜಾ, ಬರ್ಗರ್, ಇನ್ನೂ ಹಲವಾರು ಫಾಸ್ಟ್ ಫುಡ್ ಗಳ ಎಂಟ್ರಿಯಿಂದ, ಜನರು ಜವಾರಿ ಊಟದ ರುಚಿಯನ್ನೇ ಕಳೆದುಕೊಂಡಿದ್ದಾರೆ. ಇದರ ಪರಿಣಾಮ ಮನುಷ್ಯನ ಆರೋಗ್ಯ ,ಆಯುಷ್ಯದ ಮೇಲೆಯೂ ಬೀರಿದೆ, 80 ರಿಂದ 90 ವರ್ಷಗಳ ಕಾಲ ಬದುಕುತ್ತಿದ್ದ ಜನರು ಈಗ, ಹಲವಾರು ರೋಗಗಳಿಗೆ ಸಿಲುಕಿ 50, 60 ವರ್ಷಕ್ಕೆ ಸಾವಿಗೀಡಾಗುತ್ತಿದ್ದಾರೆ. ಇದರ ನಡುವೆ ಕೊರೋನ ಬಗ್ಗೆಯಂತೂ ನಿಮಗೆ ಗೊತ್ತೇ ಇದೆ. ದೇಶಕ್ಕೆ ಅನ್ನ ನೀಡುವ ಅನ್ನದಾತನ ಪಾತ್ರ ಬಹುಮುಖ್ಯವಾಗಿದೆ, ನಮ್ಮ ರೈತರು ರಾಸಾಯನಿಕ ಗೊಬ್ಬರವನ್ನ ದೂರಸರಿಸಿ, ಸಾವಯವ ಕೃಷಿಯನ್ನ ಅನುಸರಿಸಬೇಕಾಗಿದೆ.

 

ವರದಿ: ವನಿತಾ ಪರಸಣ್ಣವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

https://www.youtube.com/watch?v=mOexufefUcQ&t=509s

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#organicfood  #organicIndia  #organic  #chemicalfree  #microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Online Advertising Service in India