Blog

ಜಾಗತಿಕ ತಾಪಮಾನ, ಇಂದು ಇಡೀ ಜಗತ್ತನ್ನೇ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ. ಇಡೀ ಮನುಕುಲವನ್ನೇ ಸರ್ವನಾಶ ಮಾಡುವಂತಹ ಅಪಾಯ ತಂದಿಟ್ಟಿದೆ. ಪ್ರಪಂಚದ ತಾಪಮಾನವು 2 ಡಿಗ್ರಿಗಳಷ್ಟು ಏರಿದರೆ, ಹಿಮನದಿಗಳು ಮತ್ತು ನದಿಗಳು ಕಣ್ಮರೆಯಾಗಲು ಪ್ರಾರಂಭಿಸುತ್ತವೆ ಮತ್ತು ಪರ್ವತ ಪ್ರದೇಶಗಳು ಹೆಚ್ಚು ಭೂಕುಸಿತಗಳನ್ನು ಅನುಭವಿಸುತ್ತವೆ. 2100ರ ವೇಳೆಗೆ ಇದರ ಪರಿಣಾಮವಾಗಿ ವಿಶ್ವದ ಜನಸಂಖ್ಯೆಯ ಶೇ. 10ಷ್ಟು ಜನರನ್ನು ಸ್ಥಳಾಂತರಿಸಬೇಕಾಗುತ್ತದೆ.

 

ಜಾಗತಿಕ ತಾಪಮಾನ ಹೆಚ್ಚಿದರೆ ಏನಾಗುತ್ತೆ?

       ಆಧುನಿಕ ಕೃಷಿಯ ವಿಧಾನಗಳು ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡುತ್ತಿರುವುದು ವಿಪರ್ಯಾಸ. ಇದು ಹವಾಮಾನ ವೈಪರೀತ್ಯಗಳಿಗೆ ಕಾರಣವಾಗುತ್ತಿವೆ. ಹೆಚ್ಚಿನ ತಾಪಮಾನವು ಚಂಡಮಾರುತಗಳು, ಶಾಖದ ಅಲೆಗಳು, ಪ್ರವಾಹಗಳು ಮತ್ತು ಬರ ಸೇರಿದಂತೆ ಅನೇಕ ರೀತಿಯ ವಿಪತ್ತುಗಳು ಹೆಚ್ಚು ವಿಪರೀತಗೊಳ್ಳುವಂತೆ ಮಾಡುತ್ತಿವೆ. ಬೆಚ್ಚನೆಯ ವಾತಾವರಣವು ಹೆಚ್ಚು ನೀರನ್ನು ಸಂಗ್ರಹಿಸುವ, ಉಳಿಸಿಕೊಳ್ಳುವ ಮತ್ತು ಬಿಡಬಹುದಾದಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಿಂದ ತೇವ ಪ್ರದೇಶಗಳು ಹೆಚ್ಚು ತೇವ ಮತ್ತು ಶುಷ್ಕ ಪ್ರದೇಶಗಳು ಹೆಚ್ಚು ಶುಷ್ಕವಾಗುತ್ತವೆ. ಇದರ ಪರಿಣಾಮವಾಗಿಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಕಾಲಿಕ ಮಳೆ, ಪ್ರವಾಹ ಮತ್ತು ಬರಗಾಲವನ್ನು ಅನುಭವಿಸುತ್ತಿರುವುದು. . ಜಗತ್ತಿಗೆ ಆಹಾರ ಕೊಡುವ ಕೃಷಿಯೂ ಇದಕ್ಕೆ ಹೊರತಲ್ಲ. ಅದು ಹೇಗೆ ಅಂತೀರಾ?

ಜಾಗತಿಕ ತಾಪಮಾನದಲ್ಲಿ ಕೃಷಿಯ ಪಾತ್ರ:

       Indian Network on Climate Change Assessment (INCCA)ನ ಅಂಕಿ-ಅಂಶದ ಪ್ರಕಾರ ಭಾರತದಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುವಿಕೆಯಲ್ಲಿ ಕೃಷಿಯ ಭಾಗ ಶೇ. 24ಷ್ಟಿದೆ. ಆಧುನಿಕ ಕೃಷಿಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿರುವುದು ಸಾರಜನಕ ಗೊಬ್ಬರಗಳು(ರಾಸಾಯನಿಕ). ಸಾರಜನಕ ಗೊಬ್ಬರ ತಯಾರಿಕೆಯ ಸಮಯದಲ್ಲಿ ಹಸಿರುಮನೆ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಉತ್ಪತ್ತಿಯಾಗುತ್ತವೆ. ಅಂದಾಜಿನ ಪ್ರಕಾರ ಪ್ರತಿ ಕಿಲೋಗ್ರಾಂ ಅಮೋನಿಯಂ ನೈಟ್ರೇಟ್‌ಗೆ 2 ಕಿಲೋಗ್ರಾಂಗಳಷ್ಟು ಕಾರ್ಬನ್ ಡೈಆಕ್ಸೈಡ್ ಹೊರಬರುತ್ತದೆ. ಇದಲ್ಲದೇ ರಾಸಾಯನಿಕ ಗೊಬ್ಬರದ ಬಳಕೆಯಿಂದ ನೈಟ್ರಸ್ ಆಕ್ಸೈಡ್ ಬಿಡುಗಡೆಗೊಳ್ಳುತ್ತದೆ. ಇವೆಲ್ಲವೂ ತಾಪಾಮಾನ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಮತ್ತು ಕೀಟನಾಶಕ, ಕಳೆನಾಶಕ ಇತ್ಯಾದಿ ರಾಸಾಯನಿಕಗಳನ್ನು ಸಿಂಪಡಿಸಿದಾಗ ಗಾಳಿಯಲ್ಲಿ ಸೇರಿ ಗಾಳಿಯನ್ನು ಮಲಿನಗೊಳಿಸುವುದಲ್ಲದೇ, ಪರಾಗಸ್ಪರ್ಶಕಗಳ(pollinators) ಸಾವಿಗೆ ಕಾರಣವಾಗುತ್ತದೆ. ರಾಸಾಯನಿಕ ಬಳಕೆಯಿಂದ ಮಣ್ಣು ಗಟ್ಟಿಯಾಗಿರುವ ಕಾರಣ ಮಳೆ ಬಿದ್ದಾಗ ನೀರು ಇಂಗದೆ, ಮೇಲ್ಮಣ್ಣನ್ನು ಕೊಚ್ಚಿಕೊಂಡು ಕೆರೆ, ಕಾಲುವೆ, ನದಿಯ ಮುಖಾಂತರ ಸಮುದ್ರ ಸೇರುತ್ತಿವೆ. ಭೂಮಿಯ ಮೇಲಿನ ಮರಗಳಿಗಿಂತ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವುದು ಸಮುದ್ರ. ಹೌದು, ಸಮುದ್ರದಲ್ಲಿ ವಾಸಿಸುವ ಜೀವಿಗಳು, ಶಿಲೀಂಧ್ರಗಳು, ಪಾಚಿಗಳಿಗೆ ಕಾರ್ಬನ್ ಅವಶ್ಯಕತೆಯಿರುವುದರಿಂದ ವಾತಾವರಣದಿಂದ ಇವು ಕಾರ್ಬನ್ ಡೈ ಆಕ್ಸೈಡ್ ಅನ್ನು ಸಮುದ್ರದ ಮುಖಾಂತರ ಹೀರಿಕೊಳ್ಳುತ್ತವೆ. ಕೃಷಿಯಲ್ಲಿ ರಾಸಾಯನಿಕ ಬಳಕೆ ಮತ್ತು ಇವುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಹೆಚ್ಚು ವಿದ್ಯುತ್ ಬಳಸುವುದರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಜಾಗತಿಕ ತಾಪಮಾನ ಹೆಚ್ಚುವಲ್ಲಿ ರೈತರು, ಕೃಷಿ ಕಾರಣವಾಗಿವೆ.

       ಮಾಡಿದ್ದುಣ್ಣೋ ಮಾರಾಯ ಎಂಬಂತೆ, ಇದರಿಂದ ಕೃಷಿಗೆ ಅಪಾರ ಹಾನಿಯಾಗುತ್ತಿದೆ. ಅಕಾಲಿಕ ಮಳೆ, ತೀವ್ರವಾದ ಚಂಡಮಾರುತಗಳು, ಪ್ರವಾಹ, ಬರಗಾಲಗಳಿಂದ ಬೆಳೆಗಳು ನಾಶವಾಗುತ್ತಿವೆ. ಹವಾಮಾನ ವೈಪರೀತ್ಯದಿಂದ ಧಾನ್ಯಗಳಲ್ಲಿ ಪೋಷಕಾಂಶಗಳು ಕಡಿಮೆಯಾಗುತ್ತಿವೆ. ತಿನ್ನಲು ಆಹಾರವಿದ್ದರೂ ಅಪೌಷ್ಠಿಕತೆ ತಾಂಡವವಾಡುತ್ತಿದೆ. ಜನರಲ್ಲಿ ಎಂದೂ ಇಲ್ಲದ ಖಾಯಿಲೆಗಳು ಕಾಣಸಿಗುತ್ತಿವೆ. ಕೇವಲ ವಯಸ್ಸಾದವರಿಗೆ, ನಗರ-ಪಟ್ಟಣಗಳ ಜನರಿಗೆ ಎನ್ನುತ್ತಿದ್ದ ಖಾಯಿಲೆಗಳು ಎಲ್ಲಾ ವಯಸ್ಸಿನವರಿಗೂ, ಹಳ್ಳಿಗಳಿಗೂ ಲಗ್ಗೆ ಇಟ್ಟಿವೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಇರುವ ಮಾರ್ಗವೆಂದರೆ ಕೃಷಿಯಲ್ಲಿ ರಾಸಾಯನಿಕ ಬಳಕೆ ತ್ಯಜಿಸುವುದು, ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು.

 

ಬರಹ: ರವಿಕುಮಾರ್

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=Mc1DfKsL_3E&list=PLuN9VcGQAtK7zD3J_102aWrrmzGziq_56&index=17

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  #kannadablog  #drsoil  #microbiagrotech  #agricultureblogs  #agricultureinkannada  #integratedfarming  #globalwarming  #globalwarminginkannada  #climatechange  



Blog




Home    |   About Us    |   Contact    |   
microbi.tv | Powered by Ocat Online Advertising Service in India