ಸವಾಲಿನಲ್ಲಿ ವಿಜಯ ಸಾಧಿಸಿದ ಸಾವಯವ ಸರದಾರ..!

ಅವೈಜ್ಞಾನಿಕ ಕೃಷಿ ಪದ್ಧತಿ ತುಂಬಿ ತುಳುಕುತ್ತಿರುವ ಹಿನ್ನೆಲೆ, ಕೃಷಿ ಚಟುವಟಿಕೆ ರಾಸಾಯನಿಕ ಕೃಷಿಯಲ್ಲಿ ಮಿಂದೇಳುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಕನೋರ್ವನಿಗೆ ಕೃಷಿ ಭೂಮಿ ಮತ್ತು ಬೆಳೆಗಳನ್ನ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಯಿತು. ಕೃಷಿಕ ಸಾವಯವ ಕೃಷಿಯ ಮಾಹಿತಿ ಪಡೆದು ಸಾವಯವಕ್ಕೆ ಎಂಟ್ರಿ ಕೊಡಲು ಸಜ್ಜಾದ್ರು, ಆಗ ಅವರಿಗೆ ಕಾಡಿದ ವಿಘ್ನಗಳು ನೂರೆಂಟು.

ಭೋಪಾಲ್ ಅನಿಲ ದುರಂತ: ಸಾವಿಲ್ಲದ ಕೀಟನಾಶಕ ತಯಾರಿಕೆಯ ಕರಾಳ ಮುಖ

       ಡಿಸೆಂಬರ್ 2-3-1984 ರ ಮಧ್ಯರಾತ್ರಿ. ವಿಶ್ವ ಕಂಡ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ ಭೋಪಾಲ್ ಅನಿಲ ದುರಂತ ನಡೆದ ದಿನ. ನಿದ್ದೆಯಲ್ಲಿದ್ದ ಎಷ್ಟೋ ಜನ ಚಿರನಿದ್ರೆಗೆ ಜಾರಿದ ಕರಾಳ ರಾತ್ರಿ. ಸಾವಿರಾರು ಜನ ಉಸಿರುಕಟ್ಟಿ ಪ್ರಾಣ ಬಿಟ್ಟ ದಿನ. ಕೆಲವರ ದುರಾಸೆ, ಬೇಜವಾಬ್ದಾರಿತನಕ್ಕೆ ಹಸುಗೂಸು, ಮಕ್ಕಳು, ವೃದ್ಧರು ಉಸಿರುಕಟ್ಟಿ ನರಳಿ ನರಳಿ ಪ್ರಾಣತೆತ್ತ ದಿನ. ‘ದಿ ಅಟ್ಲಾಂಟಿಕ್’ ಎಂಬ ಅಮೇರಿಕಾದ ಮ್ಯಾಗಜಿನ್ ಇದನ್ನು “world’s worst industrial disaster” ಎಂದು ಬರೆದಿದೆ.

ನುಗ್ಗೆ: ತಿಳಿದುಕೊಳ್ಳಲೇ ಬೇಕು ಇದರ ಬಗ್ಗೆ

       ಹಳ್ಳಿಗಳಿಗೆ ಹೋದರೆ ಸಾಕು ಒಂದು ಮರ ಸರ್ವೇಸಾಮಾನ್ಯವಾಗಿ ಕಾಣಸಿಗುತ್ತದೆ. ಮನೆಯ ಹಿತ್ತಲಲ್ಲಿ, ಹೊಲದ ಯಾವುದೋ ಒಂದು ಮೂಲೆಯಲ್ಲಿ ನುಗ್ಗೆಮರ ನೋಡಬಹುದು. ಹಳೇ ಕಾಲದವ್ರು ತಿನ್ನೋ ಈ ಸೊಪ್ಪನ್ನ ಇವಾಗ ಯಾರ್ ತಿಂತಾರೆ ಅಂದುಕೊಂಡಿದ್ರೆ ಅದು ತಪ್ಪು. ನುಗ್ಗೆಯಿಂದ ಹಲವು ಉಪಯೋಗಗಳಿವೆ.

10 ಅಡಿ ಕಬ್ಬು-100 ಟನ್ ಇಳುವರಿಯ ಸೂತ್ರ

       ಒಂದು ಬೆಳೆ ಸಮೃದ್ಧವಾಗಿ ಬೆಳೆಯಲು ಗಾಳಿ, ಬೆಳಕು, ನೀರು ಮತ್ತು ಆಹಾರ ತುಂಬಾ ಮುಖ್ಯ. ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಇವುಗಳ ಸದ್ಬಳಕೆಯಾಗುತ್ತಿಲ್ಲ. ಆದ ಕಾರಣ ಎಕರೆಗೆ ಕೇವಲ 40 ರಿಂದ 50 ಟನ್ ಮಾತ್ರ ಇಳುವರಿ ಪಡೆಯುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ, ಕಬ್ಬಿನಲ್ಲಿ 100 ಟನ್  ಇಳುವರಿಯನ್ನು ಸುಲಭವಾಗಿ ಪಡೆಯಬಹುದು. ಇಳುವರಿ ಹೆಚ್ಚಿಸಲು, ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲು, ಅಂತರ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಆರ್. ಹುಲ್ಲುನಾಚೇಗೌಡರವರು ಹುಟ್ಟು ಹಾಕಿರುವ ಪದ್ಧತಿಯೇ 10 x 10 ಜೋಡಿ ಸಾಲು ಪದ್ಧತಿ.

ಶುಂಠಿ ಬೆಳೆಯನ್ನ ರಾಸಾಯನಿಕ ಬಂಧನದಿಂದ ಪಾರು ಮಾಡಿ..!

ಮಸಾಲೆ ಪದಾರ್ಥದಲ್ಲಿ ಒಂದಾಗಿರುವ ಶುಂಠಿ ಬೆಳೆಯಿಂದ ರೈತರು ಹೆಚ್ಚು ಆದಾಯ ಪಡೆಯುವ ಸಲುವಾಗಿ,ಶುಂಠಿ ಬಯಸುವ ಹೆಚ್ಚು ಪೋಷಕಾಂಶವನ್ನ ಸಾವಯವದಲ್ಲಿ ನೀಡದೆ, ರಾಸಾಯನಿಕ ಗೊಬ್ಬರ ನೀಡುತ್ತಾರೆ. ಇದರಿಂದ ಬೆಳೆ ವಿಷವಾಗುತ್ತೆ, ಕೃಷಿ ಭೂಮಿ ಬರಡಾಗುತ್ತದೆ. ಇಲ್ಲೊಬ್ರು ಕೃಷಿಕರು, ಒಂದು ಕಡೆ ರಾಸಾಯನಿಕ ಗೊಬ್ಬರ, ಮತ್ತೊಂದೆಡೆ ಪರೀಕ್ಷಾರ್ಥವಾಗಿ ಸಾವಯವದಲ್ಲಿ ಶುಂಠಿ ಬೆಳೆದಿದ್ದಾರೆ.

ಕಳೆಗೆ ಕಳೆನಾಶಕ ಬೇಡ, ಸಾವಯವ ಕೃಷಿ ಬೇಕು..!

ಕೃಷಿ ಕಾಯಕದ ಸವಾಲುಗಳಲ್ಲಿ ಕಳೆ ಕೂಡ ಒಂದು ದೊಡ್ಡ ಸವಾಲು. ಬೆಳೆಗಳ ಜತೆಗೆ ಬೆಳೆದು ಬೇಡ ಎಂದರೂ ಹೊಲಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಇವುಗಳನ್ನು ಹೇಗಾದರು ಜಮೀನಿನಿಂದ ಡಿಸಲೇ ಬೇಕು ಎಂದು ನಮ್ಮ ರೈತರು, ಕಳೆನಾಶಕಗಳನ್ನು ಬಳಸಿ, ಕಳೆ ನಾಶಮಾಡುವ ಅವಸರದಲ್ಲಿ  ಬೆಳೆಯನ್ನೇ ನಾಶಮಾಡಿಕೊಳ್ಳುತ್ತಾರೆ.

ಮಳೆಯಾಶ್ರಯ ಶಾಪವಲ್ಲ.. ಜಲಸಂಪನ್ಮೂಲಗಳಿಗೆ ಜೀವನಾಡಿ

ಸಾಂಪ್ರದಾಯಿಕ ಕೃಷಿ ವಿಧಾನದಲ್ಲಿ ಬಾವಿ, ಕೆರೆ, ಕೃಷಿಹೊಂಡ, ನೀರು ಹರಿದು ಹೋಗದಂತೆ ತಡೆಗಟ್ಟುವ ಬದುಗಳನ್ನ ಇಂದು ಮರೆಯಲಾಗಿದೆ. ಇದರಿಂದ ಭೂತಾಯಿ ದಾಹ ನೀಗಿಸಿಕೊಳ್ಳಲು ವರ್ಷಪೂರ್ತಿ ಮಳೆರಾಯನಿಗೆ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಮಳೆಯಾಶ್ರಿತ ರೈತರು ಉತ್ತಮ ಇಳುವರಿ ಪಡೆಯುವುದು ಕನಸಾಗಿದೆ.

ಶೀತ ತಡೆದುಕೊಂಡು, ರೈತನನ್ನ ಬೆಚ್ಚಗಿರಿಸಿದ ಬಜ್ಜಿ ಮೆಣಸಿನಕಾಯಿ..!

ಡಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿಕ ಶ್ರಿನಿವಾಸ್ ರೆಡ್ಡಿ ಅವರು, ತಮ್ಮ ಕೃಷಿ ಭೂಮಿಯಲ್ಲಿ ಪ್ರಪ್ರಥಮ ಬಾರಿಗೆ ಸಾವಯವ ಕೃಷಿ ಅಳವಡಿಸಿಕೊಂಡು ಕೃಷಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಡ್ರ್ಯಾಗನ್ ಫ್ರೂಟ್: ಒಣಭೂಮಿ ಬೇಸಾಯಗಾರರ ನಿಧಿ

     ನೀರಾವರಿ ಇರೋ ಜಮೀನಿನಲ್ಲಿ ಹೇಗೆ ಕೃಷಿ ಮಾಡಬೇಕು ಎಂದು ನಾವು ಮಾತನಾಡುತ್ತೇವೆ. ಆದರೆ ಕೃಷಿ ಭೂಮಿಯಲ್ಲಿ ನೀರಿಲ್ಲದಿದ್ದರೆ? “ಬೋರ್ ವೆಲ್ ತೆಗೆಸಿ ಸಾಕಾಗೋಗಿದೆ ಸರ್”, “1000 ಅಡಿ ಹೊಡೆದ್ರು ನೀರೆ ಸಿಕ್ಕಲ್ಲ”, “ಇಲ್ಲಿ ನೀರೇ ಇಲ್ಲ ಸರ್ಇವು ರೈತರು ಹತಾಶೆಯಿಂದ ಹೇಳೋ ಮಾತುಗಳು. ಹಾಗಾದರೆ ಏನು ಬೆಳೆಯೋದು? ಡ್ರ್ಯಾಗನ್ ಫ್ರೂಟ್..!

ಡಾ. ಸಾಯಿಲ್ ಉಪಯೋಗಿಸುತ್ತಿರುವ ರೈತ ಉದ್ಯಮಿಯ ಯಶೋಗಾಥೆ

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದಬ್ಬೆಘಟ್ಟ ಹೋಬಳಿಯ ಕೆ. ಬೇವಿನಹಳ್ಳಿ ಗ್ರಾಮದ ರಾಮೇಗೌಡರ ಮಗ ವಿಶ್ವನಾಥ್, ಕಳೆದ ಎರಡು ವರ್ಷಗಳಿಂದ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಜೈವಿಕ ಗೊಬ್ಬರವನ್ನು ತಮ್ಮ ತೆಂಗಿನ ತೋಟಕ್ಕೆ ಬಳಸಿ, ಅದ್ಭುತ ಫಸಲನ್ನು ಪಡೆಯುತ್ತಿದ್ದಾರೆ. ಹಾಗೆಯೇ ಉದ್ಯಮಿಯಾಗಿಯೂ ಬದಲಾಗಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ತೆಂಗಿನ ಕಾಯಿಗಳಿಂದ ಶುದ್ಧ ತೆಂಗಿನ ಎಣ್ಣೆ ಉತ್ಪಾದಿಸುತ್ತಿದ್ದಾರೆ. ಸಾಂಪ್ರಾದಾಯಿಕವಾದ ಎಣ್ಣೆ ಗಾಣಗಳನ್ನು ಅಳವಡಿಸಿ "ಶ್ರೀ ರಾಮಾಂಜನೆಯ ಕೋಕನಟ್ ಆಯಿಲ್ ಮಿಲ್" ಸ್ಥಾಪಿಸಿದ್ದಾರೆ.

|< ... 27 28 29 30 31 32 ...>|
Home    |   About Us    |   Contact    |   
microbi.tv | Powered by Ocat Online Advertising Service in India