Blog

ಸಾಂಪ್ರದಾಯಿಕ ಕೃಷಿ ವಿಧಾನದಲ್ಲಿ ಬಾವಿ, ಕೆರೆ, ಕೃಷಿಹೊಂಡ, ನೀರು ಹರಿದು ಹೋಗದಂತೆ ತಡೆಗಟ್ಟುವ ಬದುಗಳನ್ನ ಇಂದು ಮರೆಯಲಾಗಿದೆ. ಇದರಿಂದ ಭೂತಾಯಿ ದಾಹ ನೀಗಿಸಿಕೊಳ್ಳಲು ವರ್ಷಪೂರ್ತಿ ಮಳೆರಾಯನಿಗೆ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಮಳೆಯಾಶ್ರಿತ ರೈತರು ಉತ್ತಮ ಇಳುವರಿ ಪಡೆಯುವುದು ಕನಸಾಗಿದೆ.

 

ಮಳೆಯಾಶ್ರಿತ ಕೃಷಿ ಎಂದರೇನು?

 

ಕೃಷಿ ಭೂಮಿಗೆ ಮತ್ತು ಜಲ ಸಂಪನ್ಮೂಳಿಗಳಿಗೆ ಮುಂಗಾರು ಹಂಗಾಮಿನಲ್ಲಾಗುವ (ಜೂನ್ ನಿಂದ ಅಕ್ಟೊಬರ್) ಮಳೆ ಜೀವ ತುಂಬುತ್ತದೆ. ನಂತರ ಹಿಂಗಾರಿನ ಮಳೆ ಸ್ವಲ್ಪ ಸಮಾಧಾನಕರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೃಷಿಯೇತರ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಇದನ್ನ ಮಳೆಯಾಶ್ರಿತ ಕೃಷಿ ಎಂದು ಕರೆಯುತ್ತಾರೆ.

ಇನ್ನು ರಾಜ್ಯದಲ್ಲಿ ಶೇ. 70ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತವಾಗಿದ್ದು, ಶೇ.75ರಷ್ಟು ಎಣ್ಣೆಕಾಳುಗಳ ಉತ್ಪಾದನೆ ಮಳೆಯಾಶ್ರಿತ ಪ್ರದೇಶದ ಕೊಡುಗೆಯಾಗಿದೆ.  

 

ಮಳೆಯಾಶ್ರಿತ ರೈತರ ಸುಸ್ಥಿರತೆ:

 

ವರ್ಷದ ಮಳೆಗೆ ವರ್ಷ ಪೂರ್ತಿ ಕಾಯ್ದು, ಅಲ್ಪಾವಧಿ ಬೆಳೆಗಳಿಗೆ ಸಿಮೀತವಾಗುವುದರಿಂದ ಮಳೆಯಾಶ್ರಿತ ರೈತರು ಕೃಷಿಯಲ್ಲಿ ಸುಸ್ಥಿರತೆ ಕಾಣುವುದು ವಿರಳವಾಗಿದೆ. ಹೀಗಾಗಿ ಕೃಷಿ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಹಾಗಾದ್ರೆ ಮಳೆಯಾಶ್ರಿತ ರೈತರು ಕೂಡ ಕೃಷಿಯಲ್ಲಿ ಜಯಗಳಿಸಬೇಕೆಂದರೆ ಯಾವುದಾದ್ರು ಮಾರ್ಗವಿದೆಯಾ?.

 

ಮಳೆಯಾಶ್ರಿತ ರೈತರು ಎಂದ ಕೂಡಲೇ ತಕ್ಷಣ ನೆನಪಾಗುವುದು ಒಣ ಭೂಮಿ, ಬಡತನ, ಕಡಿಮೆ ಇಳುವರಿ, ಮಳೆ ಬಂದ್ರೆ ಬೆಳೆ ಎಂಬ ಮಾತುಗಳು. ಆದ್ರೆ ರೈತರು ಈ ವಿಚಾರಗಳಿಗೆ ಕಿವಿಗೊಡದೆ, ಮುಂಗಾರಿನಲ್ಲಿ ಸಿಕ್ಕ ನೀರನ್ನ ಸದ್ಭಳಕೆ ಮಾಡಿಕೊಂಡು ವರ್ಷ ಪೂರ್ತಿ ಬೆಳೆ ಬೆಳೆದು, ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ ಎಂಬುವುದನ್ನ ಅರಿಯಬೇಕಿದೆ.

 

ಹೌದು… ಕೆರೆ, ಬಾವಿ, ಕೃಷಿ ಹೊಂಡ, ಕಾಲುವೆ, ಬದುಗಳ ನಿರ್ಮಾಣ, ಪೂರ್ವಿಕರು ತೋರಿಸಿಕೊಟ್ಟ ಸಾಧನೆಯ ಹಾದಿಗಳು. ಅಂದು ಇವುಗಳು ನೀರಿನಿಂದ ತುಂಬಿ ತುಳುಕುತ್ತಿದ್ದವು, ಇಂದು ನೀರಿಲ್ಲದೆ ಬತ್ತಿವೆ. ಕೆಲವೊಂದು ಕಡೆ ಇವುಗಳ ಇರುವಿಕೆ ಇಲ್ಲದೆ ಇರುವುದು ವಿಪರ್ಯಾಸ.

 

ಓಡುವುದನ್ನ ನಡೆಯುವಂತೆ ಮಾಡು

ನಡೆಯುವುದನ್ನ ನಿಲ್ಲುವಂತೆ ಮಾಡು

ನಿಂತಿದ್ದನ್ನ ಇಂಗುವಂತೆ ಮಾಡು...

 

ಈ ವಾಕ್ಯದ ಅರ್ಥ, ಹೆಚ್ಚು ಮಳೆಯಾದಾಗ ಫಲವತ್ತಾದ ಮಣ್ಣಿನ ಜತೆ ನೀರು ಕೊಚ್ಚಿಕೊಂಡು ಹೋಗುತ್ತಿರುತ್ತದೆ. ಅದನ್ನ ತಡೆಯಲು ಹೊಲದ ಸುತ್ತ ಬದು ನಿರ್ಮಾಣ ಮಾಡಿ. ಕೃಷಿ ಭೂಮಿಯಲ್ಲಿ ನೀರು ಇಂಗುವಂತೆ ಮಾಡಬೇಕು. ಹೆಚ್ಚಾದ ನೀರನ್ನ ಕಾಲುವೆಯ ಮುಖಾಂತರ ಕೃಷಿ ಹೊಂಡವೊ ಅಥವಾ ನೀರು ಸಂಗ್ರಹಣಾ ತೊಟ್ಟಿಗೆ ಕಳಿಸುವುದರಿಂದ ನೀರು ಸಂಗ್ರಹವಾಗುತ್ತದೆ. 

 

ಮಳೆಯಾಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆ:

 

ರೈತರು ನೀರಿನ ಅಭಾವಕ್ಕೆ ಒಳಗಾಗಿ, ಅಲ್ಪಾವಧಿ ಬೆಳೆಗಳತ್ತ ಮಾತ್ರ ಮುಖ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಹೆಚ್ಚಿನ ಆಹಾರ ಉತ್ಪಾದನೆ ಮತ್ತು ಕೃಷಿಗೆ ಪ್ರತ್ಸಾಹಿಸುವ ಸಲುವಾಗಿ ಕೃಷಿ ಭಾಗ್ಯ ಯೋಜನೆಯನ್ನ ರೂಪಿಸಿದೆ.

 

ಕೃಷಿ ಭಾಗ್ಯ ಯೋಜನೆಯ ಮೂಲ ಉದ್ದೇಶ:

 

ಬದುಗಳ ಮೂಲಕ ಮಳೆ ನೀರಿನ ಸಂರಕ್ಷಣೆ, ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ. ಲಾಭದಾಯಕ ಬೆಳೆ ಪದ್ಧತಿಗಳ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು ಮತ್ತು ಪಶು ಸಂಗೋಪನಾ ಚಟುವಟಿಕೆಗೆ ಪ್ರೊತ್ಸಾಹ. ಮೂಲ ಸೌಕರ್ಯಗಳ ಅಭಿವೃದ್ಧಿ, ಯೋಜನೆಯ ಮೂಲ ಉದ್ಧೇಶವಾಗಿದೆ.

ಮಳೆ ನೀರನ್ನ ಸಂಗ್ರಹಿಸಿಕೊಳ್ಳಲು ಕೆರೆ, ಬಾವಿ, ಬದು ನಿರ್ಮಾಣ, ಇನ್ನಿತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಸಬ್ಸಿಡಿ ಮೂಲಕ ರೈತರ ಸಹಾಯಕ್ಕೆ ನಿಂತಿದೆ.  ಹೀಗಿರುವಾಗ ಇಂತಹ ಯೋಜನೆಗಳನ್ನ ರೈತರು ಸದ್ಭಳಕೆ ಮಾಡಿಕೊಂಡು ಸಮಗ್ರ ಬೆಳೆಗೆ, ಮಳೆ ನೀರನ್ನ ವರ್ಷಪೂರ್ತಿ ಉಪಯೋಗಿಸಬಹುದು.

 

ಮಳೆಯಾಶ್ರಿತದಲ್ಲಿ ಸಮಗ್ರ ಬೆಳೆ:

 

ನೀರಾವರಿ ಹೊಂದಿದ ರೈತರು ಕೂಡ ಸಮಗ್ರ ಬೆಳೆಯತ್ತ ಮುಖ ಮಾಡಬಹುದಾಗಿದೆ. ಅದು ಹೇಗೆಂದರೆ ಕೃಷಿ ಹೊಂಡ ಮತ್ತು ಕೆರೆ ಬಾವಿಯಲ್ಲಿ ಸಂಗ್ರಹಿಸಿದ ನೀರಿನ್ನ ಬಳಸಿಕೊಂಡು, ಕೃಷಿಕರು ವಾಣಿಜ್ಯ ಬೆಳೆ, ಅರಣ್ಯ ಬೆಳೆ, ಅಲ್ಪಾವಧಿ ಬೆಳೆ, ಮೇವು ಬೆಳೆ, ಉಪಕಸುಬುಗಳನ್ನ ಅಳವಡಿಸಿಕೊಳ್ಳಬಹುದು.

 

ಮಾವು, ಹುಣಸೆ, ತೇಗ ಹೀಗೆ ಕಡಿಮೆ ನೀರಿನಲ್ಲಿ ಬೆಳೆಯಬಹುದಾದಂತಹ ಬೆಳೆಗಳನ್ನ ಆಯ್ಕೆ ಮಾಡಿಕೊಂಡು ಬೆಳೆಯಬಹುದು. ಇವುಗಳ ಮಧ್ಯ ಅಲ್ಪಾವಧಿ ಬೆಳೆಗಳು ಬೆಳೆಯುವುದು ಸೂಕ್ತ. ಇದಾದ ನಂತರ ಕೃಷಿಯಲ್ಲಿ ನಿರಂತರ ಆದಾಯ ತಂದುಕೊಡುವ ಉಪಕಸುಬುಗಳಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಎತ್ತು, ಆಕಳು, ಮೀನು ಸಾಕಾಣಿಕೆ, ಈ ಎಲ್ಲಾ ಕಾರ್ಯಗಳನ್ನ ಮಳೆಯಾಶ್ರಿತದಲ್ಲಿ ನಿರ್ವಹಿಸಬಹುದು.

 

ಹೀಗೆ ಮಾಡುವುದರಿಂದ ರೈತರಿಗೆ ವರ್ಷಪೂರ್ತಿ ಬೆಳೆಗಳಿಂದ ಆದಾಯ ದೊರೆಯುತ್ತೆ, ಕೃಷಿ ಹೊಂಡ, ಕೆರೆ, ಬಾವಿಗಳಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ.

 

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:

https://www.youtube.com/watch?v=GWRfOoRwTuM&t=990s

 

 

#howtosaverainwater,  #mansoonagriculture  #mansooncrop  #mansoonrain  #rainwaterbenfits  #howtosaverainwaterforcrop,Howtodointegratedfarmingwithrainwater  #integratedorganicfarming  #integratedfarmingsystem  #integratedfarminginkannada  #multiplefruitvarieties  #SuccessfulIntegratedfarming  #integratedfarming  



Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India