Blog

       ಹಳ್ಳಿಗಳಿಗೆ ಹೋದರೆ ಸಾಕು ಒಂದು ಮರ ಸರ್ವೇಸಾಮಾನ್ಯವಾಗಿ ಕಾಣಸಿಗುತ್ತದೆ. ಮನೆಯ ಹಿತ್ತಲಲ್ಲಿ, ಹೊಲದ ಯಾವುದೋ ಒಂದು ಮೂಲೆಯಲ್ಲಿ ನುಗ್ಗೆಮರ ನೋಡಬಹುದು. ಹಳೇ ಕಾಲದವ್ರು ತಿನ್ನೋ ಈ ಸೊಪ್ಪನ್ನ ಇವಾಗ ಯಾರ್ ತಿಂತಾರೆ ಅಂದುಕೊಂಡಿದ್ರೆ ಅದು ತಪ್ಪು. ನುಗ್ಗೆಯಿಂದ ಹಲವು ಉಪಯೋಗಗಳಿವೆ.


ನುಗ್ಗೆ

       ನುಗ್ಗೆ ಮರ ಮೋರಿಂಗ ಎಂಬ ಪಂಗಡಕ್ಕೆ ಸೇರಿದ ಒಂದು ಮರವಾಗಿದೆ. ಇದರ ಮೂಲ ಭಾರತದ ಆಗ್ರಾ, ತಮಿಳುನಾಡು ಎಂದು ಉಲ್ಲೇಖಿಸಲಾಗಿದೆ. ಇದೊಂದು ವೇಗವಾಗಿ ಬೆಳೆಯುವ ಮರವಾಗಿದ್ದು, ಅನೇಕ ಔಷಧೀಯ ಹಾಗೂ ಅರೋಗ್ಯದ ಪ್ರಯೋಜನಗಳಿವೆ. ಈ ಮರದ ಕಾಯಿ(ನುಗ್ಗೆ ಕಾಯಿ), ಸೊಪ್ಪು(ನುಗ್ಗೆ ಸೊಪ್ಪು) ಮತ್ತು ಹೂಗಳನ್ನು ಆಹಾರವಾಗಿ ಸೇವಿಸಬಹುದು. ಇವುಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ರುಚಿಯಾದ, ಸ್ವಾದಿಷ್ಟವಾದ ಅಡುಗೆ ಜೊತೆ ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಹಳ್ಳಿಗಳಲ್ಲಿ ನುಗ್ಗೆಸೊಪ್ಪು ತಿನ್ನು ಎಂದು ಅಜ್ಜಿ, ತಾತಂದಿರು ಹೇಳುತ್ತಿರುತ್ತಾರೆ. ಏಕೆಂದು ನೋಡಿದರೆ…..

 

ಆರೋಗ್ಯಕ್ಕಾಗಿ ನುಗ್ಗೆ


  • ನುಗ್ಗೆಕಾಯಿ ತಿನ್ನುವುದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
  • ಆರೋಗ್ಯಕರ ಹೃದಯಕ್ಕಾಗಿ ನುಗ್ಗೆಸೊಪ್ಪು ತುಂಬಾ ಮುಖ್ಯ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಹೃದಯಾಘಾತ ಸಂಭವ ಹೆಚ್ಚಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಒಮೆಗಾ-3 ಫ್ಯಾಟಿ ಅ್ಯಸಿಡ್ ಇದನ್ನು ಕಡಿಮೆ ಮಾಡಿ ಹೃದಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
  • ಮೂಳೆಗಳ ಬಲಿಷ್ಠತೆಗೆ ಕ್ಯಾಲ್ಸಿಯಂ ತುಂಬಾ ಮುಖ್ಯ. ನುಗ್ಗೆಸೊಪ್ಪಿನಲ್ಲಿ ಹಾಲಿಗಿಂತಲೂ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಿಷ್ಠಗೊಳ್ಳಲು ಸಹಾಯ ಮಾಡುತ್ತದೆ.
  • ಕಣ್ಣಿನ ದೃಷ್ಟಿಗೂ ಒಳ್ಳೆಯದು ನುಗ್ಗೆಸೊಪ್ಪು. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕ್ಯಾರೆಟ್ ಗಿಂತ 4 ಪಟ್ಟು ಹೆಚ್ಚು ವಿಟಮಿನ್ ಎ ಇದೆ.
  • ನುಗ್ಗೆ ಹೂ ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.

  ನುಗ್ಗೆ ಒಂದು ಅದ್ಭುತ ಸಸ್ಯ, ಪೋಷಕಾಂಶಗಳ ಆಗರ. ಆಯುರ್ವೇದದಲ್ಲಿ ಔಷಧಿಯಾಗಿ ಇನ್ನೂ ಅನೇಕ ಉಪಯೋಗಗಳಿವೆ. ಆರೋಗ್ಯದ ಮೇಲೆ ಇನ್ನೂ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ.

 

ಕೃಷಿಯಲ್ಲಿ ನುಗ್ಗೆಯ ಪಾತ್ರ


       ಇದನ್ನು ಬೇಸಾಯದಲ್ಲಿ ಸಾಮಾನ್ಯವಾಗಿ ಪ್ರಮುಖ ಬೆಳೆಯಾಗಿ ಬೆಳೆಯದಿದ್ದರೂ, ಮನೆಯವರು ಆಹಾರವಾಗಿ ಸೇವಿಸಲು ಎಷ್ಟೋ ರೈತರು ಬೆಳೆಯುವುದನ್ನು ನೋಡಿದ್ದೇವೆ. ಕೇವಲ ಆಹಾರಕ್ಕಾಗಷ್ಟೇ ಇದನ್ನು ಬಳಸಬೇಕಾ?

ನುಗ್ಗೆಮರವನ್ನು ಕೃಷಿಯಲ್ಲೂ ಕೂಡ ಬೆಳೆಯಬಹುದು. ಆದರೆ ಮೊದಲು ಆ ಪ್ರಾಂತ್ಯದ ಮಾರುಕಟ್ಟೆ, ಬೇಡಿಕೆ ನೋಡಿಕೊಳ್ಳಬೇಕು. ಇದನ್ನು ಅಂತರಬೆಳೆಯಾಗಿ ಪ್ರಮುಖ ಬೆಳೆಯ ಜೊತೆ ಬೆಳೆಯಬಹುದು. ಇದು ಸಾರಜನಕ ಸ್ಥಿರೀಕರಣ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಬೆಳೆಗಳಿಗೆ ನೈಸರ್ಗಿಕವಾಗಿ ಸಾರಜನಕ ಒದಗಿಸುವ ಕೆಲಸ ಮಾಡುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವುದಲ್ಲದೇ ಪ್ರಮುಖ ಬೆಳೆಯ ಅಧಿಕ ಇಳುವರಿ ಪಡೆಯಲು, ಖರ್ಚು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಸೊಪ್ಪನ್ನು ಹೈನುಗಾರಿಕೆ, ಕುರಿ ಸಾಕಾಣಿಕೆಯಲ್ಲಿ ಮೇವಿಗೆ ಕೂಡ ಬಳಸಬಹುದು. ಹಸಿರೆಲೆ ಗೊಬ್ಬರವಾಗಿ ಕೂಡ ನುಗ್ಗೆಸೊಪ್ಪನ್ನು ಬಳಸಿಕೊಳ್ಳಬಹುದು.

       ಇಷ್ಟೆಲ್ಲಾ ಉಪಯೋಗಗಳಿರುವ ನುಗ್ಗೆಯನ್ನು ಒಂದು ಅದ್ಭುತ ಮರ ಎನ್ನಲೇಬೇಕು. ಕೇವಲ ಮನುಷ್ಯನ ಆರೋಗ್ಯವಲ್ಲದೇ ಕೃಷಿಭೂಯ ಫಲವತ್ತತೆಯಲ್ಲಿ ಸಹಾಯ ಮಾಡುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ, ನಮ್ಮ ಆರೋಗ್ಯ ಹಾಗು ಭೂಮಿಯ ಆರೋಗ್ಯ ಎರಡನ್ನೂ ಕಾಪಾಡುತ್ತದೆ.

 

ಬರಹ: ರವಿಕುಮಾರ್ ನಾಯಕ್

ಇನ್ನೂ ಹೆಚ್ಚಿನ ಮಾಹಿತಿಗಾಗಿ ಖ್ಯಾತ ಸಾವಯವ ತಜ್ಞರಾದ ಡಾ. ಕೆ.ಆರ್. ಹುಲ್ಲುನಾಚೇಗೌಡರ ಸಂದರ್ಶನವನ್ನು ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=aKwqLKGpO5M&list=PLuN9VcGQAtK6sD6QMGErcXbbj3XN3TGrA

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #drumstick  #moringaleaves  #healthyfoods  #healthiswealth  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies