Blog

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದಬ್ಬೆಘಟ್ಟ ಹೋಬಳಿಯ ಕೆ. ಬೇವಿನಹಳ್ಳಿ ಗ್ರಾಮದ ರಾಮೇಗೌಡರ ಮಗ ವಿಶ್ವನಾಥ್, ಕಳೆದ ಎರಡು ವರ್ಷಗಳಿಂದ ರೈತರ ಸಂಜೀವಿನಿಯಾದ ಡಾ. ಸಾಯಿಲ್ ಜೈವಿಕ ಗೊಬ್ಬರವನ್ನು ತಮ್ಮ ತೆಂಗಿನ ತೋಟಕ್ಕೆ ಬಳಸಿ, ಅದ್ಭುತ ಫಸಲನ್ನು ಪಡೆಯುತ್ತಿದ್ದಾರೆ. ಹಾಗೆಯೇ ಉದ್ಯಮಿಯಾಗಿಯೂ ಬದಲಾಗಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ ತೆಂಗಿನ ಕಾಯಿಗಳಿಂದ ಶುದ್ಧ ತೆಂಗಿನ ಎಣ್ಣೆ ಉತ್ಪಾದಿಸುತ್ತಿದ್ದಾರೆ. ಸಾಂಪ್ರಾದಾಯಿಕವಾದ ಎಣ್ಣೆ ಗಾಣಗಳನ್ನು ಅಳವಡಿಸಿ "ಶ್ರೀ ರಾಮಾಂಜನೆಯ ಕೋಕನಟ್ ಆಯಿಲ್ ಮಿಲ್" ಸ್ಥಾಪಿಸಿದ್ದಾರೆ.

 

ಸಾವಯವ ಮತ್ತು ಉತ್ಕೃಷ್ಟ ಗುಣಮಟ್ಟದ ಶುದ್ಧ ತೆಂಗಿನೆಣ್ಣೆಯ ಮಾರಾಟದ ಜವಾಬ್ಧಾರಿಯನ್ನು ತುರುವೇಕೆರೆ ತಾಲ್ಲೂಕಿನ ಡಾ. ಸಾಯಿಲ್ ಡೀಲರ್ "ಉನ್ನತಿ ಎಂಟರ್ ಪ್ರೈಸಸ್" ನವರು ವಹಿಸಿಕೊಂಡಿದ್ದಾರೆ. "ಉನ್ನತಿ"  ಬ್ರ್ಯಾಂಡ್ ನ ಈ ಸಾವಯವ ತೆಂಗಿನೆಣ್ಣೆಯನ್ನು ಬೆಂಗಳೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡರು, ಬೆಂಗಳೂರು ಕೃಷಿ ವಿವಿಯ ಕುಲಪತಿಗಳಾದ ಡಾ. ಎಸ್.ರಾಜೇಂದ್ರ ಪ್ರಸಾದ್ ರವರು, ವಿಶ್ರಾಂತ ಕುಲಪತಿಗಳಾದ ಡಾ. ಕೆ.ನಾರಾಯಗೌಡರು, ಖ್ಯಾತ ವಿಜ್ಞಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ "ಉನ್ನತಿ" ತೆಂಗಿನೆಣ್ಣೆಯನ್ನು ಲೋಕಾರ್ಪಣೆ ಮಾಡಲಾಯಿತು.

 

ಕೃಷಿಮೇಳದಲ್ಲಿ ಉನ್ನತಿ ತೆಂಗಿನೆಣ್ಣೆಯ ಸ್ಟಾಲ್ ಗೆ ಗೌರವಾನ್ವಿತ ಸಿಬಿಐ ಜಡ್ಜ್ ಮೋಹನ್ ರವರು, ಬೆಂ. ಕೃ.ವಿ. ವಿ

 ಪ್ರೊಫೆಸರ್ ಡಾ.ನಾರಾಯಣಗೌಡರು, ಮೈಕ್ರೋಬಿ ಸಂಸ್ಥೆ ಮಾರುಕಟ್ಟೆ ನಿರ್ದೇಶಕರಾದ ಡಾ. ವಿಕ್ರಂ ರವರು, ವಿಭಾಗೀಯ ಮುಖ್ಯಸ್ಥರಾದ ಶ್ರೀಕಾಂತ್ ರವರು. ಪ್ರೊ. ಬಿ ಸಂಸ್ಥೆನಾಗರಾಜ್ ಮತ್ತು ಬಸವರಾಜ್ ರವರು ಭೇಟಿ ನೀಡಿ ಶುಭ ಹಾರೈಸಿದರು.

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies