Blog

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೆವಡ್ಡಟ್ಟಿ ಗ್ರಾಮದ ಕೃಷಿಕರಾದ ಮಂಜುನಾಥ ಮೇವುಂಡಿ ಅವರು, ಸೂರ್ಯಕಾಂತಿ ಬೆಳೆಯಲು ಮುಂದಾದ್ರು. ಅದು ಎಲ್ಲರೂ ಬರಡು ಭೂಮಿ ಎಂದು ಕೈ ಬಿಟ್ಟರೆ, ಇವರು ಅದೇ ಭೂಮಿಯಲ್ಲಿ ಹೊನ್ನು ಬೆಳೆಯುವೆ ಎಂದು ಎದೆಗಪ್ಪಿದ್ದರು.


ಕೃಷಿ ಭೂಮಿ ಬರಡಾಗಿದ್ದು ಯಾಕೆ?

ಕೃಷಿ ಭೂಮಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮತ್ತು ಒಂದೇ ಬೆಳೆಯನ್ನ ಹಲವು ಬಾರಿ ಬೆಳೆಯುವುದರ ಮೂಲಕ ಕೃಷಿ ಭೂಮಿ ಬರಡಾಗುತ್ತದೆ.

 

ಹೆಚ್ಚು ರಾಸಾಯನಿಕ ಬಳಕೆ:

ರಾಸಾಯನಿಕ ಗೊಬ್ಬರದ ಯಥೇಚ್ಛ ಬಳಕೆಯಿಂದ ಮಣ್ಣಿಲ್ಲಿದ್ದ, ಉಪಕಾರಿ ಸೂಕ್ಷ್ಮಾಣು ಜೀವಿಗಳು, ಎರೆಹುಳು ಮತ್ತು ಅನೇಕ ಜೀವ ಸತ್ವಗಳು ನಶಿಸುತ್ತವೆ. ಹೀಗಾಗಿ ಭೂಮಿ ಫಲವತ್ತತೆಯನ್ನ ಕಳೆದುಕೊಳ್ಳುತ್ತದೆ.

 

ಸತತ ಒಂದೇ ಬೆಳೆ:

ಒಂದೇ ಬೆಳೆ ಹಲವು ಬಾರಿ ಬೆಳೆಯುವುದರಿಂದಲೂ ಕೂಡ ಕೃಷಿ ಭೂಮಿ ಬರಡಾಗುತ್ತದೆ. ಅದು ಹೇಗೆಂದರೆ ಬೆಳೆ ತನಗೆ ಬೇಕಾದ ಪೋಷಕಾಂಶವನ್ನ ಹೀರಿಕೊಳ್ಳುತ್ತದೆ. ಹೀಗೆ ಸತತವಾಗಿ ಒಂದೇ ಬೆಳೆ ಬೆಳೆಯುತ್ತಿದ್ರೆ, ತನಗೆ ಬೇಕಾದ ಯಾವುದೋ ಒಂದು ಪೋಷಕಾಂಶವನ್ನ ಹೀರುತ್ತಿರುತ್ತದೆ. ಆಗ ಮಣ್ಣಿನಲ್ಲಿ ಆ ಪೋಷಕಾಂಶ ಕ್ಷೀಣಿಸುತ್ತದೆ. ಅಂತಹ ಸಂದರ್ಭದಲ್ಲಿ ಮತ್ತೆ ಅದೇ ಬೆಳೆ ಬೆಳೆಯಲು ಮುಂದಾದಾಗ, ಬೆಳೆ ಪೋಷಕಾಂಶವಿಲ್ಲದೆ ನಲುಗಿ, ರೋಗ ಮತ್ತು ಕೀಟಬಾಧೆಗೆ ತುತ್ತಾಗುತ್ತದೆ.

 

ಬರಡು ಭೂಮಿಯಲ್ಲಿ ಬಂಪರ್ ಸೂರ್ಯಕಾಂತಿ ಹೇಗೆ?

ಕೃಷಿಕ ಮಂಜುನಾಥ ಅವರು ಸೂರ್ಯಕಾಂತಿ ಬೆಳೆ ಬೆಳೆಯಲು ಮುಂದಾದ್ರು, ಆದ್ರೆ ಮತ್ತೆ ರಾಸಾಯನಿಕ ಗೊಬ್ಬರ ಮುಟ್ಟಲಿಲ್ಲ. ಸಾವಯವ ಕೃಷಿ ಅಸ್ತ್ರ ಹಿಡಿದರು. ಹೀಗಾಗಿ ಕೃಷಿಕನಿಗೆ ಸೂರ್ಯಕಾಂತಿಯಲ್ಲಿ ಗೆಲವು ಸಾಧಿಸಲು ಸರಳವಾಯಿತು.

 

ಸಾವಯವದಲ್ಲಿ ಸೂರ್ಯಕಾಂತಿ ನಿರ್ವಹಣೆ:

ಬೀಜಗಳನ್ನ ಬಿತ್ತುವ ಪೂರ್ವದಲ್ಲಿ ಬೀಜಗಳಿಗೆ ಬೀಜೋಪಚಾರ ಮಾಡಿದರು. ಇದಾದ ನಂತರ ಕೃಷಿ ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳನ್ನ ವೃದ್ಧಿಸು ಪಾಸ್ಲೇಟ್ ಮತ್ತು ಪೊಟ್ಯಾಶ್ ಮೋಬಲೈಸಿಂಗ್ ಬ್ಯಾಕ್ಟೀರಿಯಾ ಸ್ಲರಿ ಬಳಸುವ ಮೂಲಕ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಿದರು. ಇದರಿಂದಾಗಿ ಜೈವಿಕ, ಭೌತಿಕ, ರಾಸಾಯನಿಕ ಗುಣಗಳು ಮತ್ತೆ ಮರಳಿದವು. ಈ ಕಾರಣದಿಂದ ಸೂರ್ಯಕಾಂತಿ ಆರೋಗ್ಯಕರವಾಗಿರಲು ಸಾಧ್ಯವಾಗಿದೆ.

 

ಸಾವಯವ ಫಲಿತಾಂಶ:

ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿದ್ದರಿಂದ ಮಣ್ಣಿಲ್ಲಿ ಸೂಕ್ಷ್ಮಾಣು ಜೀವಿಗಳು, ಎರೆಹುಳುಗಳ ಸಂತತಿ ಹೆಚ್ಚಾಯಿತು.  ಸೂರ್ಯಕಾಂತಿ ಬೆಳೆ ಎತ್ತರವಾಗಿದ್ದು, ಅಗಲವಾದ ತೆನೆಗಳನ್ನ ಹೊಂದಿರುವುದು ಕೃಷಿಕನಿಗೆ ಮತ್ತು ಸುತ್ತೂರಿನ ಕೃಷಿಕರಿಗೆ ಸಂತಸ ಮೂಡಿಸಿದೆ.

ಒಟ್ಟಿನಲ್ಲಿ ಸಾವಯವ ಕೃಷಿಯಿಂದ ಬರಡಾಗಿದ್ದ ಕೃಷಿ ಭೂಮಿ ಫಲವತ್ತಾಗಿ, ಸೂರ್ಯಕಾಂತಿಗೆ ಜೀವ ಕೊಟ್ಟಿರುವುದು ವಿಸ್ಮಯ. ಇಂತಹ ವಿಸ್ಮಯಗಳು ಸಾವಯವ ಕೃಷಿಯಲ್ಲಿ ಮಾತ್ರ ಎಂಬುವುದು ನೆನಪಿರಲಿ. ಹಾಗಾಗಿ ಸಾವಯವ ಕೃಷಿ ಉಳಿಸಿ,ಬೆಳೆಸಿ.

 

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=8gP0wyjwkII

 

#sunflower  #sunfloweoil  #sunflowercultivaion  #sunflowerinorganic  #organicsunflower  #sunflowercultivationinkannada  #moreyield  #moreincome  #howtocultivationinorganicfarming  #bijopachar  #rganicbijopacha  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies