ಕಾಳುಮೆಣಸು ಬೆಳೆಯಲ್ಲಿ ವಿಲ್ಟ್ ಬಾರದಿರಲು ಹೀಗೆ ಮಾಡಿ..!

ಚಿಕ್ಕಮಗಳೂರು: ವಿಲ್ಟ್ ರೋಗಕ್ಕೆ ತುತ್ತಾಗಿ ನರಳುತಿದ್ದ 300 ಕಾಳು ಮೆಣಸು ಬಳ್ಳಿಗಳು ಈಗ, ಕೇವಲ 4 ತಿಂಗಳಲ್ಲಿ ಸುಧಾರಿಸಿದ್ದು, ಹಚ್ಚ ಹಸಿರಿನೊಂದಿಗೆ ಹೆಚ್ಚು ಇಳುವರಿಯನ್ನು ನೀಡುತ್ತಿವೆ.

ಪ್ರತಿ ವರ್ಷ ಅಡಿಕೆಗೆ ಕೊಳೆ ರೋಗ ಬರ್ತಿತ್ತು, ಈಗ ಆ ಚಿಂತೆಯಿಲ್ಲ..!

ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ಪ್ರತಿವರ್ಷ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆ, ಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ರೀತಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈಗ ಮಾತ್ರ ಅದರ ಚಿಂತೆಯಿಲ್ಲ.

ಗುಂಪುಬಾಳೆ: ಕಡಿಮೆ ಜಾಗ, ಅಧಿಕ ಇಳುವರಿ

       ಒಂದಷ್ಟು ವರ್ಷಗಳ ಹಿಂದೆ ಹೋದರೆ ಹಳ್ಳಿಗಳಲ್ಲಿ ಮನೆಮುಂದೆ, ಹಿತ್ತಲಲ್ಲಿ ಒಂದು ಬಾಳೆ ಗಿಡ ಇರುತ್ತಿತ್ತು. ಅದರ ಸುತ್ತಾ ಇನ್ನಷ್ಟು ಬಾಳೆ ಗಿಡಗಳು. ಅದರ ನೆರಳಲ್ಲಿ ಪಾತ್ರೆ ತೊಳೆಯೋದು, ಬಟ್ಟೆ ತೊಳೆಯೋದು ನಡೀತಿತ್ತು. ಎಷ್ಟೋ ವರ್ಷಗಳ ತನಕ ಗೊನೆಗಳು ಬಿಡುತ್ತಿದ್ದವು. ಇದೇ ಫಾರ್ಮುಲಾವನ್ನು ಕೃಷಿಯಲ್ಲಿ ಅಳವಡಿಸಿಕಂಡರೆ ಹೇಗೆ? ಇದನ್ನೇ ಗುಂಪುಬಾಳೆ ಪದ್ಧತಿ ಎನ್ನುತ್ತಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಸರಳ ಸೂತ್ರ.

ಅಡಿಕೆ ಜತೆ ಈ ಬೆಳೆ ಬೆಳೆದರೆ ಫ್ರೀ ಗೊಬ್ಬರ ಸಿಗುತ್ತೆ..!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೃಷಿಕ ರಂಗಯ್ಯ ಸತತವಾಗಿ ಸಾವಯವ ಕೃಷಿಯನ್ನೇ  ಮಾಡುತ್ತಾ ಬಂದಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೆ, ಕೊಟ್ಟಿಗೆ ಗೊಬ್ಬರ ಮಾತ್ರ ತೋಟಕ್ಕೆ ಬಳಸುತ್ತಾ ಬಂದಿದ್ದರೂ ಸಹಿತ, ಗಿಡಗಳು ಮಾತ್ರ ಹಳದಿಯಾಗಿ ಸೊರಗುತ್ತಿದ್ದವು. ಹಾಗಾಗಿ ಕೃಷಿಕ ಕೊಟ್ಟಿಗೆ ಗೊಬ್ಬರದ ಜತೆ ಈಗ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

25 ವರ್ಷದಿಂದ ಬಾರದ ಬೆಳೆ ಒಂದೂವರೆ ತಿಂಗಳಿಗೆಲ್ಲಾ ಬಂತು..!

ರಾಯಚೂರು: ನಮ್ಮ ರೈತರು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಬೇಕೆಂಬ ಆಸೆಯಿಂದ, ಸಾಲಸೋಲ ಮಾಡಿ ಹೆಚ್ಚು ಹೆಚ್ಚು ಖರ್ಚಿನಿಂದ ರಾಸಾಯನಿಕ ಗೊಬ್ಬರವನ್ನು ತಂದು ಹಾಕುತ್ತಾರೆ. ಆದರೆ, ಕೊನೆಗೆ ರೈತರಿಗೆ ಸಿಗುವಂತಹ ಲಾಭ ಮಾತ್ರ ರೋಗಗಳು, ಕೀಟಗಳ ಬಾಧೆ .ಇದರಿಂದ ಬೆಳೆ ನಾಶವಾಗಿ ರೈತನನ್ನು ಕಷ್ಟಕ್ಕೆ ತಳ್ಳಿಬಿಡುತ್ತೆ. ಅದೇ ರೀತಿ ಇಲ್ಲೊಬ್ಬ ಕೃಷಿಕನ ತೋಟದಲ್ಲಿ 25 ವರ್ಷದಿಂದ ಯಾವ ಬೆಳೆ ಬೆಳೆದರೂ, ಉತ್ತಮ ಇಳುವರಿ ಸಿಗುತ್ತಿರಲಿಲ್ಲವಂತೆ. ಆದರೀಗ..!

20 ಗುಂಟೆಯಲ್ಲಿ 35 ಟನ್, 2 ಎಕರೆಯಲ್ಲಿ 60 ಟನ್ ಯಾಕೆ..?

ಇಲ್ಲಿ ರಾಸಾಯನಿಕ ಕೃಷಿಯ ಕಬ್ಬು, ಸಾವಯವ ಕೃಷಿಯ ಕಬ್ಬು, ಎರಡು ತರಹದ ಕಬ್ಬು ಬೆಳೆ ಇದೆ. ಮೂಡಲಗಿ ತಾಲೂಕು, ಹಳ್ಳೂರು ಗ್ರಾಮದ ಕೃಷಿಕ ಪರಶುರಾಮ್ ಅವರು  2.2 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. 20 ಗುಂಟೆಯಲ್ಲಿ ಸಾವಯವ ಕೃಷಿ ಅನುಸರಿಸಿ ಕಬ್ಬು , 2 ಎಕರೆಯಲ್ಲಿ ರಾಸಾಯನಿಕ ಕೃಷಿ ಅನುಸರಿಸಿ ಕಬ್ಬು ಬೆಳೆದಿದ್ದಾರೆ. ಸಾವಯವ ಕಬ್ಬು ಹಚ್ಚ ಹಸಿರಿನಿಂದ ಆರೋಗ್ಯವಾಗಿದ್ದು 20 ಗುಂಟೆಯಲ್ಲಿ 35 ಟನ್ ಇಳುವರಿ ನಿರೀಕ್ಷೆ ಹುಟ್ಟಿಸಿದರೆ, ರಾಸಾಯನಿಕ ಕಬ್ಬು ಒಣಗಿ ಹೋಗಿ ಸಾವು ಬದುಕಿನ ಮಧ್ಯ ನರಳುತ್ತಿದೆ. 2 ಎಕರೆಯಲ್ಲಿ ಕೇವಲ 60 ಟನ್ ಇಳುವರಿಯ ನಿರೀಕ್ಷೆ ಹುಟ್ಟಿಸಿದೆ.

ಅತ್ಯುತ್ತಮ ಆರೋಗ್ಯಕ್ಕೆ ತಪ್ಪದೆ ‘ಕಿವಿ’ ಕೊಡಿ

       ಕಿವಿ ಒಂದು ವಿದೇಶಿ ಹಣ್ಣು. ಪೌಷ್ಟಿಕ ಹಣ್ಣು. ನ್ಯೂಜಿಲ್ಯಾಂಡ್ ದೇಶದ ಹಣ್ಣಾದ್ದರಿಂದ ಇದನ್ನು ಕಿವಿ ಹಣ್ಣೆಂದು ಕರೆಯುತ್ತಾರೆ. ಕೊರೋನ ಕಾರ್ಮೋಡ ನಂತರ ಜನರು ಆರೋಗ್ಯದ ಬಗ್ಗೆ ಜಾಗೃತರಾಗಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಉತ್ಪನ್ನಗಳು ತಲೆ ಎತ್ತಿವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಆಯ್ಕೆಗಳಲ್ಲಿ ಕಿವಿ ಹಣ್ಣು ಮುಂಚೂಣಿ ಎಂದರೆ ತಪ್ಪಾಗಲಾರದು. ರುಚಿ, ಬೇಡಿಕೆ ಮತ್ತು ಆರೊಗ್ಯದ ಪ್ರಯೋಜನಗಳಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ತುಸು ಹೆಚ್ಚೇ ಎನ್ನಬಹುದು.

5 ವರ್ಷದ ಅಡಿಕೆ ತೋಟ 8 ಲಕ್ಷಕ್ಕೆ ಖೇಣಿ..!

ಅಡಿಕೆಗೆ ಬಂಗಾರದ ಬೆಲೆ ಇದೆ ನಿಜ. ಆದರೆ ಆ ಬಂಗಾರದ ಬೆಲೆಯನ್ನು ತೆಗೆದುಕೊಳ್ಳುವುದರಲ್ಲಿ ಕೃಷಿಕರು ವಿಫಲವಾಗುತ್ತಿದ್ದಾರೆ. ಕಾರಣ, ರೈತ ಮಾಡುತ್ತಿರುವಂತಹ ರಾಸಾಯನಿಕ ಕೃಷಿ.ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಅಡಿಕೆ ಬೆಳೆಗೆ ಇಲ್ಲಸಲ್ಲದ ರೋಗಗಳು ಅಂಟಿಕೊಂಡು ಲಾಭದ ಬದಲು ನಷ್ಟವನ್ನು ತಂದೊಡ್ಡುತ್ತಿದೆ. ಆದರೆ ಕೃಷಿಕ ನಾಗರಾಜ್ ಅವರ ತೋಟದಲ್ಲಿ, ಈ ತರಹದ ಯಾವುದೇ ಸಮಸ್ಯೆಇಲ್ಲ. ಕಾರಣ ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ಅರೇಕಾ ಜೈವಿಕ ಗೊಬ್ಬರ ಬಳಸುತ್ತಿದ್ದಾರೆ.   

ಕಬ್ಬು ಬೆಳೆಯಲ್ಲಿ ಎಕರೆಗೆ 100 ಟನ್ ಪಡೆಯುವ ಸೂತ್ರ

ವಾರ್ಷಿಕ ಬೆಳೆಯಾದ ಕಬ್ಬು ಬೆಳೆಯಲ್ಲಿ ಮರಿಸಂಖ್ಯೆ ಕಡಿಮೆಯಾಯ್ತು, ಗಣಿಕೆಗಳು ಹೆಚ್ಚಾಗಲಿಲ್ಲ. ಗೊಣ್ಣೆ ಹುಳುಗಳ ಕಾಟ ಹೆಚ್ಚಾಯ್ತು. ಕಬ್ಬು ಬೆಳೆದಂತೆಲ್ಲ ಮರಿಸಂಖ್ಯೆಗಳು ನಶಿಸಿಹೋಗುತ್ತವೆ ಎಂಬುದು ಬಹುತೇಕ ಕಬ್ಬು ಬೆಳೆಗಾರರ ಸಮಸ್ಯೆಗಳು. ಇವುಗಳಿಂದ ಕೃಷಿಕನಿಗೆ ಸಿಗಬೇಕಾದ ಇಳುವರಿ ಕೈಗೆಟುಕುವುದಿಲ್ಲ

ಬಿತ್ತುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ಮಾಡಿ ಬೀಜಗಳ ಪರೀಕ್ಷೆ..!

ಇದು ಎಲ್ಲಾ ರೈತರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರ. ಕೃಷಿ  ಭೂಮಿ ಉಳುಮೆ ಮಾಡಿದ್ದೆ, ಕೆ.ಜಿ ಕೆ.ಜಿ ಗೊಬ್ಬರ ಹಾಕಿದ್ದೆ, ಸರಿಯಾದ ಸಮಯದಲ್ಲಿ ಬಿತ್ತನೆ ಮಾಡಿದರೂ ಕೂಡ, ಇಳುವರಿ ಮಾತ್ರ ಬರಲೇ ಲ್ಲ ಎಂದು ತಲೆ ಮೇಲೆ ಕೈಹೊತ್ತು  ಕುಳಿತುಕೊಳ್ಳಬಾರದು. ಬದಲಿಗೆ, ಬಿತ್ತನೆಗೂ ಮುನ್ನ ರೈತರು ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡು ನಂತರ ಬಿತ್ತನೆ ಮಾಡುವುದು ಸೂಕ್ತ. ಬೆಳೆಯಲ್ಲಿ ಮುಂದೆ ಆಗುವ ನಷ್ಟಗಳನ್ನು ತಡೆಯಬಹುದು.

|< ... 22 23 24 25 26 27 ...>|
Home    |   About Us    |   Contact    |   
microbi.tv | Powered by Ocat Online Advertising Service in India