ಬಿತ್ತನೆಗೂ ಮುನ್ನ ವೈಜ್ಞಾನಿಕ ಭೂಮಿ ಸಿದ್ಧತೆ ಹೇಗಿರಬೇಕು..?
ಭೂಮಿ ಸಿದ್ಧತೆ ಎಂದಾಗ ಥಟ್ ಅಂತಾ ತಲೆಗೆ ಬರೋದು ಉಳುಮೆ.ಉಳುಮೆಯೊಂದು ಮಾಡಿ ಬಿಟ್ಟರೆ ಸಾಕು, ಬಿತ್ತನೆ ಮಾಡುವುದಕ್ಕೆ ಭೂಮಿ ಸಿದ್ಧವಾಗಿರುತ್ತೆ ಎಂದುಕೊಂಡಿರುತ್ತಾರೆಬಹುತೇಕ ಕೃಷಿಕರು. ಆದರೆ ಈ ವಿಚಾರ ತಪ್ಪು, ಉಳುಮೆ ಮಾತ್ರ ಮಾಡುವುದಲ್ಲ ಜತೆಗೆ ಸಾವಯವ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವುದು ಅತ್ಯವಶ್ಯಕವಾಗಿರುತ್ತೆ.
|
ವೈಜ್ಞಾನಿಕವಾಗಿ ತಿಪ್ಪೆ ಎಲ್ಲಿರಬೇಕು, ಹೇಗಿರಬೇಕು..?
ಕೃಷಿ ಭೂಮಿಯಲ್ಲಿ ತಿಪ್ಪೆ ಇದ್ದರೆ, ಅದರಲ್ಲಿ ಎರೆಹುಳು ಗೊಬ್ಬರದ ಕಾರ್ಖಾನೆಯನ್ನೇ ಸೃಷ್ಟಿ ಮಾಡಬಹುದು. ಆದರೆ ತಿಪ್ಪೆಯನ್ನು ನಿರ್ಮಾಣ ಮಾಡುವ ಹಂತದಲ್ಲಿ ಕೃಷಿಕರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕಾಗುತ್ತೆ.
|
ಸಾವಯವ ಕೃಷಿಕರಿಗೆ 50 ಸಾವಿರ ಸಬ್ಸಿಡಿ & ಸಾವಯವ ಪ್ರಮಾಣ ಪತ್ರ
ರಾಸಾಯನಿಕ ಕೃಷಿಯ ಮೂಲಕ ಕೇವಲ ವಿಷಯುಕ್ತ ಆಹಾರವನ್ನಷ್ಟೆ ಜನರಿಗೆ ಕೊಡಬಹುದೆ ಹೊರತು, ಆರೋಗ್ಯಕರ ಆಹಾರವನ್ನಲ್ಲ. ದೇಶದಾದ್ಯಂತ ಸಾವಯವ ಉತ್ಪನ್ನಗಳ ಮಹತ್ವ ಮತ್ತು ಬೇಡಿಕೆ ಹೆಚ್ಚುತ್ತಿದೆ. ರಾಸಾಯನಿಕ ಬಳಕೆಯಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಕಂಡ ಸರ್ಕಾರ, ರೈತರು ಸಾವಯವ ಕೃಷಿಗೆ ಬರುವಂತೆ ಪ್ರೇರೇಪಿಸಲು 2015ರಲ್ಲಿ ಈ ಯೋಜನೆ ಜಾರಿಗೆ ತಂದಿದೆ. "ಪರಂಪರಾಗತ್ ಕೃಷಿ ವಿಕಾಸ್ ಯೋಜನೆ" (PKVY) ಎಂಬ ಯೋಜನೆಯ ಮುಖಾಂತರ ರೈತರಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದೆ.
|
ಗುಲಾಬಿ ತೋಟಕ್ಕೆ ಚುಕ್ಕೆ ರೋಗ ಬರಲು ರೈತನೇ ಕಾರಣ..!
ಮಾರ್ಕೆಟ್ ನಲ್ಲಿ ಸದಾ ಬೇಡಿಕೆಯಲ್ಲಿರುವ ಹೂಗಳನ್ನು ಬೆಳೆಯುವ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತೆ. ಸಾಮಾನ್ಯವಾಗಿ ಹೂಬೆಳೆ ಅಂದ್ರೆ ಕೀಟಗಳ ಹಾವಳಿ ಹೆಚ್ಚು, ಹೀಗಿರುವಾಗ ರೈತರು ಬೇಸಾಯ ಕ್ರಮಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು , ಅದರಲ್ಲೂ ಎಲ್ಲಾ ಸೀಸನ್ ಗಳಲ್ಲಿಯೂ ಪೂಜೆ, ಹಬ್ಬ ಹರಿದಿನ, ಮದುವೆ ಶುಭಕಾರ್ಯಗಳಲ್ಲಿ ಮುಂದೆ ಇರುವ ಗುಲಾಬಿ ಹೂವನ್ನು ಬೆಳೆಯುವಾಗ ಬೆಳೆಗಾರರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕು. ಹೂ ಬೆಳೆಯಲ್ಲಿ ಕೀಟಬಾಧೆ, ರೋಗಬಾಧೆ, ಬೆಳೆ ಒಣಗುವಿಕೆ ಹೀಗೆ ಇನ್ನಿತರ ಸಮಸ್ಯೆಗಳನ್ನು ತಡೆಗಟ್ಟಬೇಕು ಎಂದರೆ ಸಾವಯವ ಕೃಷಿ ಅತ್ಯವಶ್ಯಕ.
|
ಧಾತು ಆಪ್ ನಿಂದ ರೈತರ ಕಲ್ಯಾಣ – ODP ಮೆಚ್ಚುಗೆ
ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ Organisation for the Development of People (ODP) ಸಂಸ್ಥೆಯು. ಈ ಬಾರಿ ಪರಿಸರ ದಿನಾಚರಣೆಯ ಅಂಗವಾಗಿ ಮಣ್ಣಿನ ಉಳಿವಿಗಾಗಿ ಕಾರ್ಯಕ್ರಮ ಆಯೋಜಿಸಿತ್ತು.
|
ಮಣ್ಣು ಮತ್ತು ಮಾನವನ ಉಳಿವಿಗಾಗಿ ಮಣ್ಣು ಜೀವಿಸಲಿ ಕ್ರಾಂತಿ..!
ಅನ್ನದಾತರಿಗೆ ಮಣ್ಣಿನ ಮಹತ್ವ ತಿಳಿಸಲು ಮೈಕ್ರೋಬಿ ಫೌಂಡೇಶನ್ 9 ತಿಂಗಳ ನಿರಂತರ ಅಭಿಯಾನ ನಡೆಸುತ್ತಿದೆ. ಇದರ ಅಂಗವಾಗಿ ನಾಡಿನಾದ್ಯಂತ ವಿವಿಧ ಹಳ್ಳಿಗಳಿಗೆ ಸಂಚರಿಸಿ ಅಭಿಯಾನ ನಡೆಸುತ್ತಿದೆ.
|
ಮಣ್ಣಿನ ಆರೋಗ್ಯ ಸರಿಯಾದರೆ ಮಾತ್ರ ಮನುಷ್ಯನ ಆರೋಗ್ಯ ಸರಿಯಾಗುತ್ತೆ-ಡಾ.ಕೆ.ಆರ್.ಹೆಚ್
ಮಣ್ಣು ಜೀವಿಸಲಿ ಘೋಷವಾಕ್ಯದೊಂದಿಗೆ ನಾಡಿನ ಉದ್ದಗಲಕ್ಕೂ ಜಾಗೃತಿ ಜಾಥಾ ನಡೆಸುತ್ತಿರುವ ಮೈಕ್ರೋಬಿ ಫೌಂಡೇಶನ್ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಣ್ಣು ಜೀವಿಸಲಿ ಅಭಿಯಾನದಲ್ಲಿ ಜೋನಲ್ ಹೆಡ್ ಗಳು, ದಾಸ್ತಾನುಗಾರರು, ವಿತರಕರು ಮತ್ತು ಮೈಕ್ರೋಬಿ ಆಗ್ರೋಟೆಕ್ ನ ಸಿಬ್ಬಂದಿ ಹಾಜರಿದ್ದರು.
|
ಮಣ್ಣು ಜೀವಿಸಲಿ-ಮೈಕ್ರೋಬಿ ಫೌಂಡೇಶನ್ ವತಿಯಿಂದ ನಿರಂತರ ಅಭಿಯಾನ
ಮಂಗನಿಂದ ಮಾನವ ಎನ್ನುವುದಕ್ಕಿಂತ, ಮಣ್ಣಿನಿಂದ ಮಾನವ ಎನ್ನುವುದೇ ಹೆಚ್ಚು ಸೂಕ್ತ. ಪಂಚಭೂತಗಳಲ್ಲಿ ಒಂದಾದ ಈ ಮಣ್ಣು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ರಾಸಾಯನಿಕ ಗೊಬ್ಬರಗಳ ಯಥೇಚ್ಚ ಬಳಕೆಯಿಂದ ಜೀವ ಕಳೆದುಕೊಳ್ಳುತ್ತಿರುವ ಮಣ್ಣಿಗೆ ಮರುಜೀವ ಕೊಡಲು ಪ್ರಯತ್ನಿಸುತ್ತಿದೆ ಮೈಕ್ರೋಬಿ ಫೌಂಡೇಶನ್ ನ ಮಣ್ಣು ಜೀವಿಸಲಿ ಅಭಿಯಾನ.
|
ಕೃಷಿ ತ್ಯಾಜ್ಯ ಹೆಚ್ಚಾದರೆ ಭೂಮಿಯ ಫಲವತ್ತತೆ ಹೆಚ್ಚುತ್ತೆ-ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರ ಅಭಿಮತ
“ಮಣ್ಣು ಜೀವಿಸಲಿ” ಅಭಿಯಾನದಡಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡು ಜಿಲ್ಲೆಗಳ ರೈತರಿಗೆ ಸಮಗ್ರ ಸುಸ್ಥಿರ ಸಾವಯವ ಕೃಷಿ ಕುರಿತು ಮೈಕ್ರೋಬಿ ಫೌಂಡೇಶನ್ ವತಿಯಿಂದ 1 ದಿನದ ಉಚಿತ ಕಾರ್ಯಾಗಾರವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
|
ಗ್ರಾಮೀಣ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಮೈಕ್ರೋಬಿ ಫೌಂಡೇಶನ್ ಮುನ್ನುಡಿ
ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಹೆಮ್ಮೆಯ ಕೊಡುಗೆ ಡಾ.ಸಾಯಿಲ್ ನ ಯಶೋಗಾಥೆ ಹಳ್ಳಿ ಹಳ್ಳಿಯನ್ನೂ ತಲುಪಿದೆ. ರೈತರ ಬಾಳಿನ ಸಂಜೀವಿನಿಯಾಗಿ ಸಮಾಜವನ್ನು ಬೆಳಗುತ್ತಿದೆ. “ಹಳ್ಳಿಗಳ ಉದ್ಧಾರವೇ ದೇಶದ ಅಭಿವೃದ್ಧಿ…!” ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಸಾಕಾರಗೊಳಿಸಲು ಈಗ “ಮೈಕ್ರೋಬಿ ಫೌಂಡೇಶನ್” ಮುನ್ನುಡಿ ಬರೆದಿದೆ.
|