Blog

       “ಮಣ್ಣು ಜೀವಿಸಲಿ” ಅಭಿಯಾನದಡಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡು ಜಿಲ್ಲೆಗಳ ರೈತರಿಗೆ ಸಮಗ್ರ ಸುಸ್ಥಿರ ಸಾವಯವ ಕೃಷಿ ಕುರಿತು ಮೈಕ್ರೋಬಿ ಫೌಂಡೇಶನ್ ವತಿಯಿಂದ 1 ದಿನದ ಉಚಿತ ಕಾರ್ಯಾಗಾರವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ ಆರ್ ಹುಲ್ಲುನಾಚೆಗೌಡರು, ಕಬ್ಬು, ಬಾಳೆ ಮತ್ತು ಒಣ ಬೇಸಾಯ ಕೃಷಿಯಲ್ಲಿ ಉತ್ತಮ ಇಳುವರಿ ಹೇಗೆ ಪಡೆಯಬೇಕೆಂಬುದನ್ನು ತಿಳಿಸಿಕೊಟ್ಟರು. ಮಣ್ಣು ಸಕಲ ಸಂಪತ್ತುಗಳ ಆಗರ, ಮಣ್ಣು ಜೀವಂತವಿದ್ದರೆ ಎಲ್ಲಾ ಬೆಳೆಗಳು ಉತ್ಕೃಷ್ಟವಾಗಿ ಬೆಳೆಯುತ್ತವೆ. ಕಸದಿಂದ ರಸ ಎನ್ನುವಂತೆ, ತ್ಯಾಜ್ಯ ಹೆಚ್ಚು ಇದ್ದಷ್ಟು ಭೂಮಿ ಫಲವತ್ತತೆ ಹೆಚ್ಚುತ್ತದೆ. ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಬಲಿಷ್ಠರಾಗಬಹುದು. ಮಣ್ಣು, ಸೂಕ್ಷ್ಮಾಣು ಜೀವಿಗಳು ಮತ್ತು ಕೃಷಿಯ ನಂಟಿನ ವಿಸ್ತೃತವಾಗಿ ತಿಳಿಸಿದರು. ಇದೇ ವೇಳೆ ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ ಮತ್ತು ಕೃಷಿ ಶಿಕ್ಷಣ ನೀಡುವ ಧಾತು ಆ್ಯಪ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

       ರೈತ ಉತ್ಪಾದಕರ ಸಂಸ್ಥೆಗಳ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕರಾದ ಡಾ. ನವೀನ್ ಕುಮಾರ್ ಮಾತನಾಡಿ, ಮಣ್ಣಿನ ಜತೆ ಕೆಲಸ ಮಾಡಿದರೆ ಮಾತ್ರ ರೈತನ ಉಳಿವು, ನಾವು ಹಳೇ ಕೃಷಿ ವಿಧಾನಕ್ಕೆ ವಾಪಸ್ ಬರಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಾಧಕ ಸಾವಯವ ರೈತರಿಗೆ “ಸಾವಯವ ಕೃಷಿ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

   ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ರಾಚಪ್ಪ, ಮೈಕ್ರೋಬಿ  ಆಗ್ರೋಟೆಕ್ ನ ಮಾರುಕಟ್ಟೆ ನಿರ್ದೇಶಕರಾದ ಡಾ.ವಿಕ್ರಮ್ ಗೌಡ, ಜೋನಲ್ ಹೆಡ್ ಮಂಜುನಾಥ್, ದಾಸ್ತಾನುದಾರರಾದ ಜೋಗಿಗೌಡ, ರಾಜೇಶ್, ಮಹದೇವಸ್ವಾಮಿ ಮತ್ತು ಎಲ್ಲಾ ತಾಲೂಕಿನ ವಿತರಕರು, ಮೈಕ್ರೋಬಿ ಫೌಂಡೇಶನ್ ನ ಸಿಇಒ ಶ್ರೀನಿವಾಸ್ ರೈ ಹಾಜರಿದ್ದರು.

 ಬರಹ: ರವಿಕುಮಾರ್

https://www.youtube.com/watch?v=QQ-wTo5sXNk&t=1974s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India