Blog

ಭೂಮಿ ಸಿದ್ಧತೆ ಎಂದಾಗ ಟ್ ಅಂತಾ ತಲೆಗೆ ಬರೋದು ಉಳುಮೆ. ಉಳುಮೆಯೊಂದು ಮಾಡಿ ಬಿಟ್ಟರೆ ಸಾಕು, ಬಿತ್ತನೆ ಮಾಡುವುದಕ್ಕೆ ಭೂಮಿ ಸಿದ್ಧವಾಗಿರುತ್ತೆ ಎಂದುಕೊಂಡಿರುತ್ತಾರೆ ಬಹುತೇಕ ಕೃಷಿಕರು. ಆದರೆ ಈ ವಿಚಾರ ತಪ್ಪು, ಉಳುಮೆ ಮಾತ್ರ ಮಾಡುವುದಲ್ಲ ಜತೆಗೆ ಸಾವಯವ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವುದು ಅತ್ಯಶ್ಯಕವಾಗಿರುತ್ತೆ.

 

ಭೂಮಿ ಸಿದ್ಧತೆಯ ಪ್ರಾಥಮಿಕ ಹಂತದಲ್ಲಿ ಸಾವಯವ ವಸ್ತುಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಅಂದರೆ ಪ್ರಾಥಮಿಕ ಉಳುಮೆಯನ್ನು ಮಾಡಬೇಕಾಗುತ್ತದೆ. ಪ್ರಾಥಮಿಕ ಉಳುಮೆಯಲ್ಲಿ ಮೊದಲು ನಾವು ಬಿತ್ತನೆಗೆ ಯಾವ ಬೆಳೆಯನ್ನು ಆಯ್ಕೆಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಲ್ಪಾವಧಿ ಬೆಳೆಯಾದ್ರೆ, ಆಳವಾದ ಉಳುಮೆ ಮಾಡುವ ಅವಶ್ಯಕತೆ ಇರುವುದಿಲ್ಲ, ಧೀರ್ಘಾವಧಿ ಬೆಳೆಯಾದ್ರೆ ಆಳವಾ ಉಳುಮೆ ಮಾಡಿಕೊಳ್ಳಬೇಕು. ನಂತರ ಸಾವಯವ ತ್ಯಾಜ್ಯಗಳಾದ ಸೆಣಬು, ಡಯಂಚಾ, ಗ್ಲಿರಿಸಿಡಿಯಾ, ಹಸಿರೆಲೆ ಗೊಬ್ಬರ ಗಿಡಗಳು. ದ್ವಿದಳ ಧಾನ್ಯಗಳಾದ ಉದ್ದು, ಹುರುಳಿಅಲಸಂದೆ ಬೆಳೆಗಳನ್ನು ಬೆಳೆದು, ಹೂ ಬಿಡುವ ಹಂತದಲ್ಲಿಯೇ ಮಲ್ಚಿಂಗ್ ಮಾಡಬೇಕು.

 

ಇನ್ನು ದ್ವಿತೀಯ ಹಂತದಲ್ಲಿ ಮಲ್ಚಿಂಗ್ ಮಾಡಿದ ಕನಿಷ್ಠ 15 ದಿನಗಳ ವರೆಗೆ ಗೊಬ್ಬರ ಕಳಿಯಲು ಬಿಡಬೇಕು. ನಂತರ ಬೆಡ್ ಸಿದ್ಧತೆ ಮಾಡಿಕೊಳ್ಳುವಾಗ ಕಳೆ, ರೋಗಗ್ರಸ್ತ ತ್ಯಾಜ್ಯಗಳು, ಕೃಷಿಭೂಮಿಯಲ್ಲಿ ಕಲ್ಲುಗಳು ಇದ್ದರೆ ಅವುಗಳನ್ನು ಹೊರಗಡೆ ಎತ್ತಿಹಾಕಬೇಕು. ಕೊಟ್ಟಿಗೆ ಗೊಬ್ಬರ ಭೂಮಿಗೆ ಸೇರಿಸುವಾಗ ಎಚ್ಚರಿಕೆಯಿಂದ ಚೆನ್ನಾಗಿ ಕಳಿತಿರುವ ಗೊಬ್ಬರ ನೀಡಬೇಕಾಗುತ್ತೆ. ಇಲ್ಲವಾದರೆ ಗೊಣ್ಣೆ ಹುಳು ಸೇರಿದಂತೆ ಅಪಕಾರಿ ಹುಳುವಿನ ತೊಂದರೆ ಹೆಚ್ಚಾಗುತ್ತದೆ. ಭೂಮಿಗೆ ಬೇವಿನ ಹಿಂಡಿಯನ್ನು ಸೇರಿಸುವುದು ಕೂಡ ಮುಖ್ಯವಾಗಿರುತ್ತೆ. ಬಹುವಾರ್ಷಿಕ ಬೆಳೆಗಳಾದ ಕಬ್ಬು, ತೆಂಗು, ಅಡಿಕೆ ನಾಟಿ ಮಾಡುತ್ತಿದ್ದರೆ, ಬಸಿಗಾಲುವೆ ಮಾಡಿಕೊಳ್ಳಬೇಕು. ಕೃಷಿ ಭೂಮಿಯಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೆಕಾಗುತ್ತದೆ. ಇವೆಲ್ಲಾ ಸಿದ್ಧತೆಗಳನ್ನು ಮಾಡಿ ನಂತರ ಬಿತ್ತನೆಯನ್ನು ಶುರುಮಾಡಬೇಕು.

 

ಹಸಿರೆಲೆ ಗೊಬ್ಬರದ ಪ್ರಾಮುಖ್ಯತೆ ಏನು ಎಂಬುದರ ಕುರಿತು ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ತಿಳಿಸಿಕೊಟ್ಟಿದ್ದಾರೆ.

https://www.youtube.com/watch?v=zuBU6GDoEbs&t=29s

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿhttps://play.google.com/store/apps/de... 

► Microbi Agrotech Website: http://www.microbiagro.com 

► Subscribe to Microbi Agrotech: https://youtube.com/c/MICROBIAGROTECH... 

► Like us on Facebook: https://www.facebook.com/microbiagrot...

 

 

ಬರಹ: ವನಿತಾ

 

#landpreparation  #soilpreparation  #preparationofsoil  #landpreparationforfarming  #landpreparationforagriculture  #whylandpreparation  #landpreparationforplanting  #basiclandpreparationtechniques  #landpreparationtechniques  #agriculturelandpreparation  #landpreparationmachinery  #landpreperation  #landpreparationforcucumber  #soilpreparationforplanting  #landpreparationforvegetables  #landpreparationfororganicfarming  #agriculturelandpreparationtechnology  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies