Blog

ಮಂಗನಿಂದ ಮಾನವ ಎನ್ನುವುದಕ್ಕಿಂತ, ಮಣ್ಣಿನಿಂದ ಮಾನವ ಎನ್ನುವುದೇ ಹೆಚ್ಚು ಸೂಕ್ತ. ಪಂಚಭೂತಗಳಲ್ಲಿ ಒಂದಾದ ಈ ಮಣ್ಣು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ರಾಸಾಯನಿಕ ಗೊಬ್ಬರಗಳ ಯಥೇಚ್ಚ ಬಳಕೆಯಿಂದ ಜೀವ ಕಳೆದುಕೊಳ್ಳುತ್ತಿರುವ ಮಣ್ಣಿಗೆ ಮರುಜೀವ ಕೊಡಲು ಪ್ರಯತ್ನಿಸುತ್ತಿದೆ ಮೈಕ್ರೋಬಿ ಫೌಂಡೇಶನ್ ನ ಮಣ್ಣು ಜೀವಿಸಲಿ ಅಭಿಯಾನ.

       ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು, ಮೈಕ್ರೋಬಿ ಫೌಂಡೇಶನ್ ಸಂಸ್ಥಾಪಕರೂ ಆದ ಡಾ.ಕೆ ಆರ್ ಹುಲ್ಲುನಾಚೆಗೌಡರ ಸಾರಥ್ಯದಲ್ಲಿ ಮಣ್ಣು ಜೀವಿಸಲಿ ಅಭಿಯಾನವು ಹೊಸ ಕ್ರಾಂತಿಯಾಗಿ ಸಾಗುತ್ತಿದೆ. ಮುಂದಿನ ಪೀಳಿಗೆಗೆ ನಾವು ಕೊಡುವ ಅತ್ಯುತ್ತಮ ಆಸ್ತಿ ಉತ್ತಮ ಪರಿಸರ. ಇದರ ಮೂಲವೇ ಮಣ್ಣು. ಮಣ್ಣು ಫಲವತ್ತಾದರೆ, ವಿಷಮುಕ್ತವಾದರೆ ಮಾತ್ರ ವಿಷಮುಕ್ತ ಆಹಾರ ಬೆಳೆಯಲು ಸಾಧ್ಯ. ಮಣ್ಣು ಜೀವಂತವಾದರೆ ಮಾತ್ರ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಡಲು ಸಾಧ್ಯ.

9 ತಿಂಗಳ ನಿರಂತರ ಅಭಿಯಾನವನ್ನು ಕೈಗೊಂಡು, ಗ್ರಾಮ ಮಟ್ಟದಲ್ಲಿ ಮಣ್ಣಿನ ಮಹತ್ವ, ಮಣ್ಣಿನ ಸಂರಕ್ಷಣೆ ಬಗ್ಗೆ ಅನ್ನದಾತರಿಗೆ ಅರಿವು ಮೂಡಿಸಲು ಹೊರಟಿದೆ ಮೈಕ್ರೋಬಿ ಫೌಂಡೇಶನ್. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಪೂಜಾರಿಪಾಳ್ಯ ಗ್ರಾಮದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮಣ್ಣು ಜೀವಿಸಲಿ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಪೂಜಾರಿ ಪಾಳ್ಯ ಗ್ರಾಮದಲ್ಲಿ ಮಣ್ಣು ಜೀವಿಸಲಿ ಫಲಕಗಳನ್ನು ಹಿಡಿದು, ಘೋಷವಾಕ್ಯಗಳನ್ನು ಕೂಗುತ್ತಾ ರೈತರಿಗೆ ಮಣ್ಣು ಮತ್ತು ಸಾವಯವ ಕೃಷಿಯ ಮಹತ್ವ ಸಾರಲಾಯಿತು.

ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್ ಹುಲ್ಲುನಾಚೆಗೌಡರು ಮಾತನಾಡಿ, ಇಂದು ಜಗತ್ತನ್ನು ಕಾಡುತ್ತಿರುವ ಜಾಗತಿಕ ತಾಪಮಾನ, ಅತಿವೃಷ್ಟಿ-ಅನಾವೃಷ್ಟಿ, ಹದಗೆಡುತ್ತಿರುವ ಆರೋಗ್ಯ, ಇವೆಲ್ಲದರ ಮೂಲ ಕಾರಣ ಮಣ್ಣು ಹಾಳಾಗಿರುವುದು. ಮಣ್ಣು ಜೀವಂತವಾದರೆ, ಫಲವತ್ತಾದರೆ ಇವೆಲ್ಲವನ್ನು ಕಡಿಮೆ ಮಾಡಬಹುದು ಎಂದರು. ಮಣ್ಣು ಫಲವತ್ತತೆ ಹೆಚ್ಚಿಸಲು ಮತ್ತು ಡಿಜಿಟಲ್ ಮಾಧ್ಯಮದ ಮುಖಾಂತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು, ರೈತ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರ Save Soil ಅಭಿಯಾನಕ್ಕೆ ಬೆಂಬಲವಾಗಿ ಮಣ್ಣು ಜೀವಿಸಲಿ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಧನಂಜಯ, ಊರಿನ ಪ್ರಮುಖರು, ಮೈಕ್ರೋಬಿ ಫೌಂಡೇಶನ್ ನ ಪದಾಧಿಕಾರಿಗಳು, ಸಂಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೈಕ್ರೋಬಿ ಫೌಂಡೇಶನ್ ವತಿಯಿಂದ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವುದಲ್ಲದೆ, ಸಾಧಕ ಸಾವಯವ ಕೃಷಿಕರನ್ನು ಗುರ್ತಿಸಿ, ಸನ್ಮಾನಿಸುವ ಕಾರ್ಯವನ್ನು ನಾಡಿನಾದ್ಯಂತ ಮಾಡಲಾಗುತ್ತಿದೆ.  ರೈತರಿಗೆ 1 ದಿನದ ಉಚಿತ ತರಬೇತಿ ಕಾರ್ಯಾಗಾರ ನಡೆಸಿ, ರೈತರ ಬದುಕು ಹಸನಾಗಿಸಲು ಅಮೂಲ್ಯ ಜ್ಞಾನ ನೀಡುತ್ತಿದೆ.

 

 

#microbifoundation  #savesoil  #mannujeevisali  #drsoil  #microbiagrotech  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies