ಮೂರು ಎಕರೆ ಕಬ್ಬಿಗೆ 3.5 ಅಡಿ ಅಂತರ, ಎರಡು ಸಾಲು ಕಬ್ಬಿಗೆ 6 ಅಡಿ ಅಂತರ. ನಂತರ..?

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಾಬು ರಾಯ್ ಅವರುತಮ್ಮ ಮೂರು ಎಕರೆ ಕೃಷಿ ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ಕಬ್ಬು ಬೆಳೆಯುತ್ತಿದ್ದಾರೆ. ಇಲ್ಲಿ ಕೃಷಿಕ 6 ಅಡಿ ಅಂತರ ಕೊಟ್ಟು, ಬೆಳೆಗೆ ಆಗುವ ಲಾಭದ ಬಗ್ಗೆ ಅನುಭವ ಪಡೆಯುವ ಯತ್ನ ಮಾಡಿದ್ದಾರೆ. 3.5 ಅಡಿ ಅಂತರದಿಂದ ಮೂರು ಎಕರೆ ಕಬ್ಬು ಬೆಳೆದರೆ, ಪರೀಕ್ಷಾರ್ಥ ದೃಷ್ಟಿಯಿಂದ 2 ಸಾಲೂ ಕಬ್ಬಿಗೆ 6 ಅಡಿ ಅಂತರ ನೀಡಿದ್ದಾರೆ.

ಪ್ರಿನ್ಸಿಪಾಲ್ ಸಾಹೇಬರ ಸಾವಯವ ಸವಾರಿ..!

ಇವರು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಪ್ರತಿಷ್ಠಿತ ಸರಸ್ವತಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಆಗಿದ್ದವರು.  ಚುಂಚನಗಿರಿ ಮಠದ ಅಧೀನದಲ್ಲಿ ಬರುವ ತಾಲ್ಲೂಕಿನ ವಿದ್ಯಾಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿದ್ದವರು. ಇವರ ಬಗ್ಗೆ ಇಡೀ ತಾಲ್ಲೂಕಿನಲ್ಲಿ ಗೌರವ ಭಾವವಿದೆ. ಇಂಥ ಉನ್ನತ ವ್ಯಕ್ತಿತ್ವದವರು ತಮ್ಮ ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಕಳೆದ ಒಂದೂವರೆ ವರ್ಷದಿಂದ ಸಾವಯವ ಕೃಷಿಯನ್ನು ಮಾಡುತಿದ್ದಾರೆ.

ಜೇನುನೊಣಗಳು ಬದುಕಿದರಷ್ಟೇ ನಮ್ಮ ಬದುಕು..!

ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಫಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗಸ್ಪರ್ಶದ ಪ್ರಯತ್ನ.

ಶೂನ್ಯ ಬಂಡವಾಳದಲ್ಲಿ ಕಬ್ಬು ಬೆಳೆಯುವ ಸೂತ್ರ..!

ಮೈಸೂರು ಜಿಲ್ಲೆಟಿ.ನರಸೀಪುರ ತಾಲೂಕಿನ ಬಣ್ಣಳ್ಳಿ ಗ್ರಾಮದ ಕೃಷಿಕ ರವಿ ಶಂಕರ್ ಅವರು, ತಮ್ಮ 4 ಎಕರೆ ಕಬ್ಬು ಬೆಳೆಯ ಮಧ್ಯೆ ಸೂಕ್ತವಾದ ಅಂತರ ಕಲ್ಪಿಸಿತಂತ್ರ ಹೂಡಿದ್ದಾರೆ.ಹಿಂದೆ ಕಬ್ಬು ಬೆಳೆಗೆ ಮಾಡಿದ ಖರ್ಚನ್ನ ಹಿಂದಿರುಗಿಸಿಕೊಂಡಿದ್ದಲ್ಲದೆ, ಮುಂದೆ ಆಗುವ ಖರ್ಚನ್ನೂ ನೀಗಿಸಲು ಉತ್ತಮ ಯೋಜನೆ ರೂಪಿಸಿದ್ದಾರೆ.

ಸಾವಯವ ಕೃಷಿಯಿಂದ ಜೇನುಹುಳಗಳು ಬಂದವು, ಎರೆಹುಳುಗಳೂ ಪ್ರತ್ಯಕ್ಷವಾದವು..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕೃಷಿಕ ಜೈ ಕುಮಾರ್ ಅವರು, ಕ್ಯಾಪ್ಸಿಕಮ್ ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿದ್ದಾರೆ. ಇದರಿಂದ ಕೃಷಿ ಭೂಮಿಯಲ್ಲಿ ಎರೆಹುಳುಗಳು ಯಥೇಚ್ಛವಾಗಿ ಅಭಿವೃದ್ಧಿಯಾಗಿವೆ.

ಕೃಷಿ ಯಂತ್ರೋಪಕರಣಗಳ ಪಟ್ಟಿಗೆ ಡ್ರೋನ್ ಇನ್..!

ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಲೇ ಇರುತ್ತದೆ. ಆ ಪೈಕಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಯೋಜನೆಯೂ ಒಂದಾಗಿದೆ. 2014-15 ರಲ್ಲಿ ಆರಂಭವಾದ ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ ಕೃಷಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.

ತಿಪಟೂರಿನ ಪ್ರತಿಷ್ಠಿತ ಕಲ್ಪತರು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರ ತೋಟದಲ್ಲಿ ಡಾ. ಸಾಯಿಲ್ ತಂಡ..!

ಅವರದ್ದು ತಿಪಟೂರು ತಾಲ್ಲೂಕಿನ ಪ್ರತಿಷ್ಠಿತ ಕುಟುಂಬ…! ವ್ಯಾಪಾರ ವಹಿವಾಟಿನಲ್ಲಿ ಹೆಸರುವಾಸಿ ಮನೆತನ ಸಮಾಜ ಸೇವೆ ಮತ್ತು ಸೇವಾ ಕೈಂಕರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರಿವಾರ ಅವರದ್ದು ಬರೋಬ್ಬರಿ 100 ಎಕರೆಯ ತೋಟ ಅವರು ಪ್ರತಿಷ್ಠಿತ ಕಲ್ಪತರು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹೆಸರಾಂತ ಕೊಬ್ಬರಿ ವ್ಯಾಪಾರಿಗಳೂ ಆದ ದೀಪಕ್ ಅವರು, ದಿವಂಗತ ಕರಿಸಿದ್ಧಾರಾಧ್ಯರ ಮೊಮ್ಮಗ.

ಸಾವಯವ ಭಾಗ್ಯ ಯೋಜನೆ ಪ್ರಾಮುಖ್ಯತೆ

ನಾಮ ಹಲವುಸತ್ಯ ಒಂದೇ ಎನ್ನುವ ಮಾತು ಸಾವಯವ ಕೃಷಿಸುಸ್ಥಿರ ಕೃಷಿನೈಸರ್ಗಿಕ ಕೃಷಿ ಹೀಗೆ ಹತ್ತು ಹಲವು ಪದಗಳಿಂದ ಕರೆಯುವ ಬೇಸಾಯ ಪದ್ಧತಿಗೂ ಅನ್ವಯಿಸುತ್ತದೆ. ಸಾವಯವ ಕೃಷಿ ಅನಾದಿ ಕಾಲದಿಂದ   ರೂಡಿಯಲ್ಲಿದ್ದರೂ,  ಪ್ರಸ್ತುತ  ಸಂದರ್ಭದಲ್ಲಿ ಹಲವಾರು ಮಾರ್ಪಾಡುಗಳನ್ನು ಅಳವಡಿಸಿಕೊಂಡಿದೆ. ಅತಿಯಾದ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣುನೀರು, ವಾತಾವರಣ, ಸಸ್ಯ ಮತ್ತು ಪ್ರಾಣಿಸಂಕುಲಗಳಿಗೆ ಕಂಟಕ ಎದುರಾಗಿದೆ.  ಭೂಮಿಯ ಭೌತಿಕರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುವುದಲ್ಲದೆ, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ.

 

ಪ್ರತಿ ವರ್ಷ ಅಡಿಕೆಗೆ ಕೊಳೆ ರೋಗ ಬರ್ತಿತ್ತು, ಈಗ ಅದರ ಚಿಂತೆಯಿಲ್ಲ..!

ಮಳೆಗಾಲದಲ್ಲಿ ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ಮಾದರಿಯಲ್ಲಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈ ವರ್ಷ ಮಾತ್ರ ಕೊಳೆ ರೋಗಕ್ಕೆ ಬ್ರೇಕ್ ಬಿದ್ದಿದೆ.

ದೇಶದ ಕೃಷಿ ಅಭಿವೃದ್ಧಿಗೆ 6 ಸಂಕಲ್ಪಗಳು-ಖ್ಯಾತ ಸಾವಯವ ಕೃಷಿತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರು

ಕೃಷಿಯನ್ನು ಪ್ರಯೋಗಾಲಯಗಳಿಂದ ಹೊರಗೆ ತರಬೇಕಿದೆ. ಪ್ರಕೃತಿಯ ಜೊತೆ ಮರುಜೋಡಿಸುವ ಕೆಲಸ ಆಗಬೇಕಿದೆ. ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ- ಪ್ರಧಾನಿ ಶ್ರೀ ನರೇಂದ್ರ ಮೋದಿ

|< ... 25 26 27 28 29 30 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd