Blog

ಅವರದ್ದು ತಿಪಟೂರು ತಾಲ್ಲೂಕಿನ ಪ್ರತಿಷ್ಠಿತ ಕುಟುಂಬ…! ವ್ಯಾಪಾರ ವಹಿವಾಟಿನಲ್ಲಿ ಹೆಸರುವಾಸಿ ಮನೆತನ ಸಮಾಜ ಸೇವೆ ಮತ್ತು ಸೇವಾ ಕೈಂಕರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರಿವಾರ ಅವರದ್ದು ಬರೋಬ್ಬರಿ 100 ಎಕರೆಯ ತೋಟ ಅವರು ಪ್ರತಿಷ್ಠಿತ ಕಲ್ಪತರು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹೆಸರಾಂತ ಕೊಬ್ಬರಿ ವ್ಯಾಪಾರಿಗಳೂ ಆದ ದೀಪಕ್ ಅವರು, ದಿವಂಗತ ಕರಿದ್ಧಾರಾಧ್ಯರ ಮೊಮ್ಮಗ.

ಆವರ ತೋಟಕ್ಕೆ ರೈತ ಸಂಜೀವಿನಿಯಾದ ಡಾ. ಸಾಯಿಲ್ ತಂಡ ಭೇಟಿ ನೀಡಿತು. ತುಮಕೂರು ಜಿಲ್ಲೆಯ ಸಾಯಿಲ್ ಡಾಕ್ಟರಾದ ಶಿಲ್ಪ ಹಾಗೂ ತಿಪಟೂರಿನ ಪ್ರತಿನಿಧಿ ಶ್ರೀನಿವಾಸ್ ಅವರು ತೋಟವನ್ನು ಕೂಲಂಕಷವಾಗಿ ಪರಿಶೀಲಿಸಿದರು.

 

ಕೃಷಿಯ ಬಗ್ಗೆ ವಿಶೇಷವಾದ ಕಾಳಜಿ ಹಾಗೂ ಜ್ಞಾನವನ್ನು ಹೊಂದಿರುವ ದೀಪಕ್ ರವರಿಗೆ ಏನಾದರೂ ಮಾಡಿ ತಮ್ಮ ತೋಟವನ್ನು ಮೊದಲಿನ ವೈಭವಕ್ಕೆ ತರಬೇಕೆಂಬ ತವಕ. ಮೊದಲಾದರೆ ತಮ್ಮ ತೋಟದ ಸುತ್ತೂ ಇರುವ ಕೆರೆಕಟ್ಟೆ ಮೈದುಂಬಿ ತೋಟಕ್ಕೆ ಆಸರೆಯಾಗಿದ್ದವು. ಅವು ಬರಡಾಗಿ ದಶಕಗಳೇ ಕಳೆದು ಹೋಗಿವೆ. ಅಲ್ಲಿಂದೀಚೆಗೆ ತೋಟವು ಕಳೆಗುಂದಿದೆ. ಹತ್ತಾರು ಕೊಳವೆಬಾವಿಗಳನ್ನು ಕೊರೆಸಿದರೂ ನೀರಿಗೆ ತತ್ವಾರ..! ಸುಮಾರು 3000 ತೆಂಗಿನ ಮರಗಳ ಇಳುವರಿ ತೀರಾ ಕಡಿಮೆಯಾಗಿದೆ. ಜೊತೆಗೆ ಕಾಂಡ ಸೋರುವ ರೋಗ ಹೆಮ್ಮಾರಿಯಂತೆ ಹರಡುತ್ತಿದೆ..! ಮರಗಳನ್ನು ಆಹುತಿ ತೆಗೆದುಕೊಳ್ಳುತ್ತಿದೆ..!

 

ಇದು ದೀಪಕ್ ರವರಿಗೆ ತುಂಬಾ ನೋವಿನ ಸಂಗತಿ. ಇದರ ಪರಿಹಾರಕ್ಕಾಗಿ ಸಾವಯವ ಬಂಗಾರವಾದ ಡಾ. ಸಾಯಿಲ್ ತಂಡವನ್ನು ಸಂಪರ್ಕಿಸಿದರು.

 

ತುಂಬಾ ವಿಸ್ತಾರವಾದ ತೋಟ. ನೀರಿಲ್ಲದೆ ಗರಿಗಳನ್ನು ಇಳಿಬಿಟ್ಟಿರುವ ತೆಂಗಿನ ಮರಗಳು. ಒಂದೆರಡು ತೆಂಗಿನ ಕಾಯಿ ಗೊಂಚಲನ್ನು ಸಿಗಿಸಿಕೊಂಡು ದೈನೇಶಿಯಂತೆ ನಿಂತಿರುವ ಕಲ್ಪವೃಕ್ಷಗಳು. ಈ ದೃಶ್ಯ ಮನಕಲಕುವಂತಿತ್ತು..! ತುರುವೇಕೆರೆ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿನ ತೆಂಗಿನ ಮರಗಳು ಕಾಂಡಸೋರುವ ರೋಗಕ್ಕೆ ಅತಿಯಾಗಿ ತುತ್ತಾಗಿವೆ. ಮುಖ್ಯವಾಗಿ ಆ ರೋಗದ ಗುಣಲಕ್ಷಣ, ಹರಡುವಿಕೆ, ಪರಿಣಾಮ ಮತ್ತು ಪರಿಹಾರವನ್ನು ಸಾಯಿಲ್ ಡಾಕ್ಟರ್ ಶಿಲ್ಪ ಸವಿವರವಾಗಿ ವಿವರಿಸಿದರು. ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಾಂಚ, ಹುರುಳಿ ಮುಂತಾದವನ್ನು ಹಾಕಿಕೊಂಡು ಅದನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಸಂಪತ್ತು ವೃದ್ಧಿಸಿ ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಶಕ್ತಿ ಹೆಚ್ಚಾಗುತ್ತದೆ.

 

ಡಾ. ಸಾಯಿಲ್ ಜೈವಿಕ ಗೊಬ್ಬರ ಉಪಯೋಗಿಸುವುದರಿಂದ ಜೈವಿಕ ಸಂಪತ್ತು ವೃದ್ಧಿಯಾಗಿ ಮಣ್ಣಿನ ಭೌತಿಕ, ರಾಸಾಯನಿಕ ಗುಣಗಳು ಉತ್ತಮವಾಗುತ್ತವೆ. ಪರಿಣಾಮವಾಗಿ ಮಣ್ಣು ಫಲವತ್ತಾಗುತ್ತದೆ. ನಂತರ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಯಿತು. ದೀಪಕ್ ರವರು ತಮ್ಮ ತೋಟಕ್ಕೆ ಹನಿ ನೀರಾವರಿಯನ್ನು ಹಲವಾರು ಬಾರಿ ಅಳವಡಿಸಿದ್ದಾರೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿದೆ. ತೋಟದ ತುಂಬೆಲ್ಲ ಬೇವು, ಹೆಬ್ಬೇವು ಮುಂತಾದ ಅರಣ್ಯ ಕೃಷಿ ಮರಗಳನ್ನು ಬೆಳೆಸಿದ್ದಾರೆ. ಅವೆಲ್ಲವೂ ನೀರಿಲ್ಲದೆ ಸೊರಗಿವೆ. ಮಳೆಗಾಲ ಬಂದಾಗ ತೆಂಗಿನಮರಕ್ಕೆರಡು ಗ್ಲಿರಿಸಿಡಿಯ (ಗೊಬ್ಬರದ ಗಿಡ) ಹಾಕಲು ಸಲಹೆ ನೀಡಲಾಯಿತು.

 

ತೆಂಗಿನ ಮರಗಳಿಂದ ಬೀಳುವ ಗರಿ, ಕುರಂಬಳೆ, ಎಡೆಮೊಟ್ಟೆ ಮುಂತಾದ ತ್ಯಾಜ್ಯಗಳನ್ನು ಸಣ್ಣಸಣ್ಣದ್ದಾಗಿ ಕತ್ತರಿಸಿ ಆ ಮರದ ಬುಡದಲ್ಲಿಯೇ ಹೊದಿಕೆಯಾಗಿ ಮಾಡಲು ಸಲಹೆ ನೀಡಲಾಯಿತು. ಜೊತೆಗೆ ತೋಟವನ್ನು ಅತಿಯಾಗಿ ಉಳುಮೆ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಲಾಯಿತು.

 

ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರ ಸಲಹೆಯಂತೆ ಪ್ರತಿಯೊಂದು ಮರಗಳ ಸುತ್ತಲೂ ಒಂದೊಂದು ತಿಪ್ಪೆಯನ್ನು ಮಾಡಲು ಸಲಹೆ ನೀಡಲಾಯಿತು.

 

ಸಮಗ್ರ-ಸುಸ್ಥಿರ-ಸಾವಯವ ಕೃಷಿಗಾಗಿ ಸಂಪರ್ಕಿಸಿ: ಉನ್ನತಿ ಎಂಟರ್ಪ್ರೈಸಸ್, ತುರುವೇಕೆರೆ ಮತ್ತು ತಿಪಟೂರಿನ ಡಾ. ಸಾಯಿಲ್  ಅಧಿಕೃತ ಮಾರಾಟಗಾರರುಫೋನ್ – 8197443132

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies