Blog

ನಾಮ ಹಲವುಸತ್ಯ ಒಂದೇ ಎನ್ನುವ ಮಾತು ಸಾವಯವ ಕೃಷಿಸುಸ್ಥಿರ ಕೃಷಿನೈಸರ್ಗಿಕ ಕೃಷಿ ಹೀಗೆ ಹತ್ತು ಹಲವು ಪದಗಳಿಂದ ಕರೆಯುವ ಬೇಸಾಯ ಪದ್ಧತಿಗೂ ಅನ್ವಯಿಸುತ್ತದೆ. ಸಾವಯವ ಕೃಷಿ ಅನಾದಿ ಕಾಲದಿಂದ ರೂಡಿಯಲ್ಲಿದ್ದರೂ, ಪ್ರಸ್ತುತ ಸಂದರ್ಭದಲ್ಲಿ ಹಲವಾರು ಮಾರ್ಪಾಡುಗಳನ್ನು ಅಳವಡಿಸಿಕೊಂಡಿದೆ. ಅತಿಯಾದ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣುನೀರು, ವಾತಾವರಣ, ಸಸ್ಯ ಮತ್ತು ಪ್ರಾಣಿಸಂಕುಲಗಳಿಗೆ ಕಂಟಕ ಎದುರಾಗಿದೆ.  ಭೂಮಿಯ ಭೌತಿಕರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುವುದಲ್ಲದೆ, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಂಡಿದೆ.

 

ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಸಾವಯವ ಕೃಷಿ ಪದ್ಧತಿ ಅಗತ್ಯ ಮತ್ತು ಅನಿವಾರ್ಯ. ಸಾವಯವ ಕೃಷಿ ಒಂದು ಸಮಗ್ರ ಬೆಳೆ ತ್ಪಾದನಾನಿರ್ವಹಣಾ ಪದ್ಧತಿಯಾಗಿದ್ದುಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಪರಿಸರಸ್ನೇಹಿ ಜೈವಿಕ ವಿಧಾನಗಳನ್ನು ಬಳಸಿ, ಗುಣಮಟ್ಟದ ಆಹಾರ ಉತ್ಪಾದನೆ ಮಾಡುವ ಸುಸ್ಥಿರ ಬೇಸಾಯ ಪದ್ಧತಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ  ಸಾವಯವ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ಅನುಕೂಲ ಕಲ್ಪಿಸಿ ಕೊಟ್ಟು ಮಣ್ಣಿನ ಆರೋಗ್ಯ ಮತ್ತು ಉತ್ಪಾದಕತೆಯನ್ನು ಜೈವಿಕ ಗೊಬ್ಬರಗಳ ಬಳಕೆಯಿಂದ ಅಭಿವೃದ್ಧಿಪಡಿಸಲಾಗಿದೆ.

 

ಸಾವಯವ ಕೃಷಿ ನೀತಿಯಡಿ ಅನುಷ್ಠಾನದಲ್ಲಿದ್ದ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಕೆಲವು ಪರಿಷ್ಕರಣೆಯೊಂದಿಗೆ 

2013-14 ನೇ ಸಾಲಿನಲ್ಲಿ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗಿದೆ.  ಹಿಂದೆ ಸಾವಯವ ಗ್ರಾಮ/ಸ್ಥಳ ವಿಸ್ತರಣೆ ಯೋಜನೆ ಚಾಲ್ತಿಯಲ್ಲಿದ್ದ 176 ಹೋಬಳಿಗಳನ್ನು ಹೊರತುಪಡಿಸಿರಾಜ್ಯದ ಉಳಿದ 571 ಹೋಬಳಿಗಳಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರೇತರ ಸಂಸ್ಥೆಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿರುತ್ತದೆ. ಹಾಗೆಯೇ ಸಾವಯವಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯಕ್ರಮಗಳನ್ನು ಸಹ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ  ಕೆಳಕಂಡ ಕಾರ್ಯಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಕ್ರಮ ಕೈಗಳ್ಳಲಾಗಿದೆ.

 

  • ತಾಲ್ಲೂಕಿನ ಪ್ರತಿ ಹೋಬಳಿಯಲ್ಲಿ 100 ಹೆಕ್ಟೇರ್ ಪ್ರದೇಶ ಆಯ್ಕೆ:ಮಾನದಂಡಗಳನ್ವಯ ಸರ್ಕಾರೇತರ ಸಂಸ್ಥೆ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಜಂಟಿಯಾಗಿ ಗುರುತಿಸುವುದು.
  • ಆಯ್ಕೆಯಾದ  ಸ್ಥಳಕ್ಕೆ ಜಂಟಿ ಕೃಷಿ ನಿರ್ದೇಶಕರ ಅಧ್ಯತೆಯ ಜಿಲ್ಲಾ ಚಾಲಾನಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯುವುದು.
  • ಸರ್ಕಾರೇತರ ಸಂಸ್ಥೆಗಳು ಯೋಜನಾ ಅನುಷ್ಠಾನ ಸ್ಥಳದ ಪ್ರಾಥಮಿಕ ಸಮೀಕ್ಷೆಯನ್ನು ನಿಗದಿ ನಮೂನೆಯನ್ವಯ 
    ಕೈಗೊಳ್ಳುವುದು.
  • ಯೋಜನಾ ಪ್ರದೇಶದ ಫಲಾನುಭವಿ ರೈತರನ್ನು ಸಂಘಟನೆಗೊಳಿಸಿಗುಂಪು ರಚಿಸಿ ಕರ್ನಾಟಕ ಸೊಸೈಟೀಸ್
    ರಿಜಿಸ್ಟ್ರೇಷನ್ ಆಕ್ಟ್ 1960 ರಡಿಯಲ್ಲಿ ನೋಂದಾಯಿಸುವುದು.
  • ಕ್ರಿಯಾಯೋಜನೆ ಅನುಷ್ಠಾನಕ್ಕಾಗಿ ಸದರಿ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆದುಸದರಿ
    ಖಾತೆಯನ್ನು ನೋಂದಾಯಿಸಲಾದ ರೈತರ ಗುಂಪಿನ ಅಧ್ಯಕ್ಷರುಸರ್ಕಾರೇತರ ಸಂಸ್ಥೆಯ ಕ್ಷೇತ್ರಾಧಿಕಾರಿ ಹಾಗೂ
     ಇಲಾಖೆಯ ಸ್ಥಳಾಧಿಕಾರಿ ಜಂಟಿಯಾಗಿ ನಿರ್ವಹಿಸುವುದು.
  • ಯೋಜನಾ ಅನುಷ್ಠಾನ ಪ್ರದೇಶದ ಸಾವಯವ ಕೃಷಿಕರ ಸಂಘದ (ನೋಂದಾಯಿತ ಗುಂಪಿನಪ್ರತಿನಿಧಿಗಳುಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಹಾಗೂ ಇಲಾಖಾ ಸ್ಥಳಾಧಿಕಾರಿಗಳನ್ನೊಳಗೊಂಡ ಸ್ಥಳ ಸಮಿತಿಯನ್ನು ರಚಿಸುವುದು.
  •  ಸ್ಥಳ ಸಮಿತಿಯು ಯೋಜನಾ ಅನುಷ್ಠಾನ ಪ್ರದೇಶದ ಪ್ರಾಥಮಿಕ ಸಮೀಕ್ಷೆ ಹಾಗೂ ಅಲ್ಲಿನ ಫಲಾನುಭವಿ ರೈತರ ಬೇಡಿಕೆಯನ್ನಾಧರಿಸಿ ಯೋಜನಾ ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಪರಿವರ್ತಿಸಲು ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸುವುದು.
  • ಪ್ರತಿ ಹೋಬಳಿಯಿಂದ ಕ್ರಿಯಾ ಯೋಜನೆ ಪಡೆದುಕೊಂಡು ಜಿಲ್ಲಾ ಚಾಲನಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವುದು.

    ಸಾವಯವ ಭಾಗ್ಯ ಯೋಜನೆಯಡಿ (ಪ್ರತಿ ಹೋಬಳಿಯಲ್ಲಿ) ಅನುಷ್ಠಾನಗೊಂಡಿರುವ ಕ್ರಮಗಳ ಬಗ್ಗೆ ಸಾವಯವ ಕೃಷಿಕರು ತಿಳಿದುಕೊಳ್ಳುವುದು ಅವಶ್ಯವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ.

 

ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India