Blog

ಮಳೆಗಾಲದಲ್ಲಿ ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ಮಾದರಿಯಲ್ಲಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈ ವರ್ಷ ಮಾತ್ರ ಕೊಳೆ ರೋಗಕ್ಕೆ ಬ್ರೇಕ್ ಬಿದ್ದಿದೆ.

 

ಕೊಳೆರೋಗ ಕೊನೆಯಾಗಿದ್ದು ಹೇಗೆ?


ಪ್ರತಿ ವರ್ಷ ಕೃಷಿಕ ಅಣ್ಣಪ್ಪ ಅವರು, ತಮ್ಮ ಅಡಿಕೆಗೆ ರಾಸಾಯನಿಕ ಗೊಬ್ಬರ ಬಳಸಿ ಬೆಳೆ ನಿರ್ವಹಣೆ ಮಾಡ್ತಿದ್ರು. ಹೀಗಾಗಿ ಕೊಳೆ ರೋಗ ಸಮಸ್ಯೆ ಕಾಡ್ತಾಯಿತ್ತು. ಆದ್ರೆ ಈ ವರ್ಷ ಸಾವಯವ ಕೃಷಿ ಹಾದಿ ತುಳಿದಿದ್ದರಿಂದ ಕೊಳೆ ರೋಗದ ತಲೆ ನೋವು ಇಲ್ಲ ಅಂತಾರೆ ಕೃಷಿಕ.

 

ಸಾವಯವ ಕೃಷಿಯಿಂದ ನಿಯಂತ್ರಣ ಹೇಗೆ?


ಮಣ್ಣಿನಲ್ಲಿ ಎರಡು ರಂಧ್ರಗಳಿರುತ್ತವೆ. ಒಂದು ಸಣ್ಣ ರಂಧ್ರ (ಮೈಕ್ರೋ ಪೋರ್ಸ್), ಮತ್ತೊಂದು ದೊಡ್ಡ ರಂಧ್ರ (ಮ್ಯಾಕ್ರೋ ಪೋರ್ಸ್). ಸಣ್ಣ ರಂಧ್ರ ನೀರು ಹಿಡಿದಿಟ್ಟುಕೊಳ್ಳುತ್ತೆ, ದೊಡ್ಡ ರಂಧ್ರ ಗಾಳಿ ಹಿಡಿದಿಟ್ಟುಕೊಳ್ಳುತ್ತೆ. ಮಳೆ ಹೆಚ್ಚಾಗಿ ತೇವಾಂಶ ಹೆಚ್ಚಾದರೆ, ಮಣ್ಣಿನಲ್ಲಿದ್ದ ಈ ಎರಡೂ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಆಗ ಅಡಿಕೆ ಬೆಳೆಯ ಬೇರಿಗೆ ಸಿಗಬೇಕಾದ ಪ್ರಾಣವಾಯು(ಆಮ್ಲಜನಕ) ಸಿಗುವುದಿಲ್ಲ. ಆಮ್ಲಜನಕರಹಿತ ವಾತಾವರಣ ನಿರ್ಮಾಣವಾಗಿ ಅನುಪಕಾರಿ ಸೂಕ್ಷ್ಮ ಜೀವಿಗಳ(ರೋಗಾಣು) ಅಭಿವೃದ್ಧಿಯಾಗುತ್ತದೆ.


ಕೃಷಿಕ ಅಣ್ಣಪ್ಪ ಅವರು ರಾಸಾಯನಿಕ ಬಿಟ್ಟು ಸಾವಯವ ಕೃಷಿ ಅಳವಡಿಸಿಕೊಂಡಿದ್ದರಿಂದ, ಮಣ್ಣು ಸಡಿಲವಾಯಿತು, ಮಣ್ಣಿನಲ್ಲಿ ಸರಾಗವಾಗಿ ಗಾಳಿ ಪ್ರವೇಶವಾಗುತ್ತಿದೆ. ಹೀಗಾಗಿ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಯಿತು, ಅಂದ್ರೆ ಬೇರನ್ನ ರಕ್ಷಿಸಿ ಅಡಿಕೆ ಬೆಳೆಯನ್ನ ಉಳಿಸುವ ಮೈಕೋರೈಸಾ ಎಂಬ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾದವು. ಇದರಿಂದ ಈ ತೋಟಕ್ಕೆ ಈ ವರ್ಷ ಕೊಳೆ ರೋಗ ಲಗ್ಗೆ ಇಡಲು ಸಾಧ್ಯವಾಗಲಿಲ್ಲ..


ರೈತಬಾಂಧವರೆ ರಾಸಾಯನಿಕ ಕೃಷಿ ಕೈ ಬಿಟ್ಟರೆ ನಿಮ್ಮ ತೋಟದಲ್ಲೆ ನಿಮ್ಮ ಬೆಳೆ ರಕ್ಷಣೆಗೆ ನಿಲ್ಲಲು, ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗುತ್ತೆ. ಇದರಿಂದ ನೀವು ಎಂದೆಂದಿಗೂ ಕೊಳೆ ರೋಗಗಳ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ.


ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/watch?v=gSC1ZzUSzSY&t=5s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India