Blog

ಮಾರ್ಕೆಟ್ ನಲ್ಲಿ  ಸದಾ ಬೇಡಿಕೆಯಲ್ಲಿರುವ ಹೂಗಳನ್ನು ಬೆಳೆಯುವ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತೆ. ಸಾಮಾನ್ಯವಾಗಿ ಹೂಬೆಳೆ ಅಂದ್ರೆ ಕೀಟಗಳ ಹಾವಳಿ ಹೆಚ್ಚು, ಹೀಗಿರುವಾಗ ರೈತರು ಬೇಸಾಯ ಕ್ರಮಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು ,  ಅದರಲ್ಲೂ ಎಲ್ಲಾ ಸೀಸನ್ ಗಳಲ್ಲಿಯೂ ಪೂಜೆ, ಹಬ್ಬ ಹರಿದಿನ, ಮದುವೆ ಶುಭಕಾರ್ಯಗಳಲ್ಲಿ ಮುಂದೆ ಇರುವ ಗುಲಾಬಿ ಹೂವನ್ನು ಬೆಳೆಯುವಾಗ ಬೆಳೆಗಾರರು ಕೆಲವೊಂದು ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕು. ಹೂ ಬೆಳೆಯಲ್ಲಿ ಕೀಟಬಾಧೆ, ರೋಗಬಾಧೆ, ಬೆಳೆ ಒಣಗುವಿಕೆ ಹೀಗೆ ಇನ್ನಿತರ ಸಮಸ್ಯೆಗಳನ್ನು ತಡೆಗಟ್ಟಬೇಕು ಎಂದರೆ ಸಾವಯವ ಕೃಷಿ ಅತ್ಯವಶ್ಯಕ.

 

ಅದೇ ರೀತಿ ಇವೆಲ್ಲಾ ಸಮಸ್ಯೆಗಳು ತೋಟದಲ್ಲಿ ಕಂಡಿವೆ ಎಂದರೆ, ಅದಕ್ಕೆ ಕೃಷಿಕರೇ ಕಾರಣಕರ್ತರು ಆಗಿರ್ತಾರೆ. ಕೃಷಿಕ ತಾನು ಮಾಡುವಂತಹ ಬೇಸಾಯ ಪದ್ಧತಿ, ಕೃಷಿಯಲ್ಲಿ ಬಳಸುವಂತಹ ಕಳೆನಾಶಕ, ಕೀಟನಾಶಕ, ರಸಗೊಬ್ಬರಗಳು ರೈತ ಬೆಳೆದ ಬೆಳೆಯನ್ನು ಸಂಪೂರ್ಣ ನಾಶಮಾಡಿ ಬಿಡುತ್ತವೆ. ಹಾಗಾಗಿ ಕೃಷಿಯಲ್ಲಿ ಕೃಷಿಕನ ಆದಾಯ, ಅವರ ಕೃಷಿ ಪದ್ಧತಿಯ ಮೇಲೆ ಅವಲಂಬಿತವಾಗಿದೆ. ರೈತರ ಆದಾಯ ದ್ವಿಗುಣವಾಗಬೇಕು, ಖರ್ಚು ಕಡಿಮೆ, ಲಾಭ ಹೆಚ್ಚು ಸಿಗಬೇಕು ಎಂದರೆ ಸಾವಯವ ಪದ್ಧತಿ ಅಳವಡಿಕೆಯಾಗಬೇಕು.

ಸಾವಯವ ಕೃಷಿಕರಾದ  ಮುರುಳಿಧರ್ ಅವರು ತಮ್ಮ ಗುಲಾಬಿ ತೊಟವನ್ನು ಸಾವಯವ ಕೃಷಿಯಲ್ಲಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕೃಷಿಕ ಮಾಡಿದ ಒಂದೆರಡು ತಪ್ಪುಗಳಿಂದ ಗುಲಾಬಿ ತೋಟದಲ್ಲಿ ಚುಕ್ಕೆ ರೋಗ ಆವರಿಸಿಕೊಂಡು, ಮಣ್ಣು ಗಟ್ಟಿಯಾಗಿ ಪೋಷಕಾಂಶದ ಕೊರತೆ ಕಂಡು ಬಂದಿತ್ತು.

 

ಈ ಬಗ್ಗೆ ಸ್ವತಃ ಸಾವಯವ ಕೃಷಿ ತಜ್ಞರಾದ ಡಾ.ಕೆ ಆರ್ ಹುಲ್ಲುನಾಚೇಗೌಡರು ಕೃಷಿಕರ ತೋಟಕ್ಕೆ ಭೇಟಿ ನೀಡಿ, ಅಲ್ಲಿ ರೈತ ಮಾಡಿದ ತಪ್ಪುಗಳ ಬಗ್ಗೆ ತಿಳಿಹೇಳಿದ್ದಾರೆ.  ಹಾಗಾದ್ರೆ ಅಲ್ಲಿ ರೈತ ಮಾಡಿದ ತಪ್ಪುಗಳಾದರೂ ಏನು ಎಂದು ನೀವೇ ನೋಡಿ.

 

https://www.youtube.com/watch?v=VaWUbl9FDS8&t=2s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details...

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ : ವನಿತಾ

 

#rose  #rosefarming  #flowerfarming  #rosefarminginindia  #rosefarmingingreenhouse  #roseharvesting  



Blog




Home    |   About Us    |   Contact    |   
microbi.tv | Powered by Ocat Online Advertising Service in India