ದಾವಣಗೆರೆಯಲ್ಲಿ ಮಣ್ಣಿನ ಮಕ್ಕಳ ಕಣ್ಣು ತೆರೆಸಿದ ಮಣ್ಣಿನ ಮಗ ಡಾ.ಕೆ.ಆರ್.ಹುಲ್ಲುನಾಚೆಗೌಡರು

ದಾವಣಗೆರೆಮೈಕ್ರೋಬಿ ಫೌಂಡೇಶನ್ ವತಿಯಿಂದ ಮಣ್ಣು ಜೀವಿಸಲಿ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ಸಾವಯವ ಕೃಷಿಕರ ಸಮಾವೇಶದಲ್ಲಿ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು ಕೃಷಿಕ ವರ್ಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ತೋರಿದರು.


ಖ್ಯಾತ ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ರೈತ ಚಕ್ಷು ಬಿರುದು ಪ್ರದಾನ

ದಾವಣಗೆರೆ: ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ರೈತ ಚಕ್ಷು ಬಿರುದು ಪ್ರದಾನ ಮಾಡಲಾಯಿತು.

ತಮಿಳುನಾಡಿನ ಸತ್ಯಮಂಗಲಂನಲ್ಲಿ ಡಾ.ಸಾಯಿಲ್ ಪ್ರಾಂತೀಯ ಕಚೇರಿ ಆರಂಭ

ತಮಿಳುನಾಡಿನ ಸತ್ಯಮಂಗಲಂನಲ್ಲಿ ಡಾ.ಸಾಯಿಲ್ ಪ್ರಾಂತೀಯ ಕಚೇರಿ ವಿಧ್ಯುಕ್ತವಾಗಿ ಆರಂಭಗೊಂಡಿತು. 

ಮಂಡ್ಯದಲ್ಲಿ ಮೇ 24ರಂದು ಉಚಿತ ತರಬೇತಿ ಕಾರ್ಯಾಗಾರ

ಮೈಕ್ರೋಬಿ ಫೌಂಡೇಶನ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಣ್ಣು ಜೀವಿಸಲಿ ಅಭಿಯಾನದ ಬಗ್ಗೆ ಸಂಚಾಲಕರು, ಡಾ.ಸಾಯಿಲ್ ದಾಸ್ತಾನುದಾರರಾದ ಜೋಗಿಗೌಡ ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ವಿಜಯಪುರ ಕೃಷಿ ಸಮಾವೇಶದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಡಾ.ಸಾಯಿಲ್ ಮಳಿಗೆ

ವಿಜಯಪುರದಲ್ಲಿ ನಡೆಯುತ್ತಿರುವ 5 ದಿನಗಳ ಕೃಷಿ ಸಮಾವೇಶದಲ್ಲಿ ಡಾ.ಸಾಯಿಲ್ ಮಳಿಗೆ ಅನ್ನದಾತರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

ಮೈಕ್ರೋಬಿ ಫೌಂಡೇಶನ್ ಕಾರ್ಯಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೆಚ್ಚುಗೆ

ಮೈಕ್ರೋಬಿ ಫೌಂಡೇಷನ್ ನ ಅಧ್ಯಕ್ಷರು, ನಾಡಿನ ಖ್ಯಾತ ಸಾವಯವ ಕೃಷಿತಜ್ಞರಾದ ಡಾ. ಕೆ ಆರ್.ಹುಲ್ಲುನಾಚೆಗೌಡರು ಶ್ರೀನಿವಾಸಪುರದ ಶಾಸಕರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ರವರನ್ನು ಭೇಟಿಯಾದರು.

ನಾಟಿಗೂ ಮುನ್ನ ಶುಂಠಿಗೆ ವೈಜ್ಞಾನಿಕ ಬೀಜೋಪಚಾರ..!

ಯಾವುದೇ ಬೆಳೆಯನ್ನು ನಾಟಿ ಅಥವಾ ಬಿತ್ತನೆ ಮಾಡುವ ಮುನ್ನ ಬೀಜೋಪಚರಿಸಿ ಬಿತ್ತಬೇಕು. ಇದರಿಂದಬೆಳೆ ಉತ್ತಮವಾಗಿ ಮೊಳಕೆಯೊಡೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ಕಬ್ಬಿನ ತೋಟಕ್ಕೆ ಬೆಂಕಿ ಇಡುವುದನ್ನ ನಿಲ್ಲಿಸಿ… ಕಡಿಮೆ ಖರ್ಚಿನ ಗೊಬ್ಬರ ತಯಾರಿಸಿ..!

ವಿಜಯಪುರ ಜಿಲ್ಲೆ, ಇಂಡಿ ತಾಲೂಕಿನ ಕೃಷಿಕ ಸುಧಾಕರ್ ಅವರುಸಾವಯವ ಕೃಷಿಯ ಮೂಲಕ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಇವರು ತಮ್ಮ ಕಬ್ಬು ಬೆಳೆಗೆ ಡಾ.ಸಾಯಿಲ್ ಶುಗರ್ ಕೇನ್ ಸ್ಪೆಷಲ್ ಬಳಸಿದ್ದರಿಂದ, ಇಂದು ಕಬ್ಬು ಬೆಳೆ ಎಕರೆಗೆ 60 ಕ್ವಿಂಟಾಲ್ ಇಳುವರಿ ನೀಡಲು ಶಕ್ತವಾಗಿದೆ. ಹೌದು.. ಕಬ್ಬು ಬೆಳೆ ಸಾವಯವ ಕೃಪೆಯಿಂದ ಎಕರೆಗೆ 60 ಕ್ವಿಂಟಾಲ್ ಇಳುವರಿ ನಿಡ್ತಾಯಿರುವುದು ಸತ್ಯ. ಆದ್ರೆ ಕೃಷಿಕ ಮಾಡ್ತಾಯಿರುವ ಆ ಒಂದು ತಪ್ಪಿನಿಂದ ಇನ್ನೂ ಹೆಚ್ಚಿನ ಇಳುವರಿ ಕೈತಪ್ಪಿದೆ.

30 ಬೆಳೆಗಳು, ಕೃಷಿಕನಿಗೆ ವಾರ್ಷಿಕ 30 ಲಕ್ಷ ಆದಾಯ ..!

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಪಟ್ಟಿಕೊಪ್ಳು ಗ್ರಾಮದ ಕೃಷಿಕ ಚಿಕ್ಕಣ್ಣ ಅವರು, ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ 30ಕ್ಕೂ ಹೆಚ್ಚು ಬೆಳೆ ಬೆಳೆದುಕೊಂಡು ತೋಟಕ್ಕೆ ಅರಣ್ಯದ ಳೆ ನೀಡಿದ್ದಾರೆ. ಕೃಷಿಕ ಚಿಕ್ಕಣ್ಣ ಅವರದ್ದು, ಒಟ್ಟಾರೆ 20 ಎಕರೆ ಕೃಷಿ ಭೂಮಿ. ಇವರು 5 ಎಕರೆ ಕೃಷಿ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳು, ದನಕರುಗಳಿಗೆ ಮೇವು ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಮಿಕ್ಕ 15 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಟೀಕ್, ಕಿತ್ತಳೆ, ಪಪ್ಪಾಯ, ಪೇರಲ, ನುಗ್ಗೆ, ಕಾಡು ಬೇವು, ಕಾಫಿ( ಅರೇಬಿಕಾ ಮತ್ತು ರೋಬೊಸ್ಟಾ) ಹೀಗೆ 30ಕ್ಕೂ ಹೆಚ್ಚು ಬೆಳೆಗಳನ್ನ ಬೆಳೆದು ತೋಟವನ್ನ ಅರಣ್ಯದಂತೆ ಮಾಡಿದ್ದಾರೆ.

ತಿಪಟೂರು ತಾಲ್ಲೂಕಿನಲ್ಲೊಬ್ಬರು ಹಿರಿಯ ಸಾವಯವ ರಾಯಭಾರಿ..!

ಇವರು ಜನಮೆಚ್ಚಿದ ವಿಶ್ರಾಂತ ಪೋಸ್ಟ್ ಮನ್, ಈಗ ಹೆಮ್ಮೆಯ ಸಾವಯವ ಕೃಷಿಕರು. ಯಾರು ಎಷ್ಟೇ ಒತ್ತಡ ತಂದರೂ ತಮ್ಮ ಭೂಮಿಯನ್ನು ಉಳುಮೆ ಮಾಡಿಸಿಲ್ಲ! ಭೂಮಿಗೆ ಹಿಡಿ ರಾಸಾಯನಿಕ ಗೊಬ್ಬರ ತೋರಿಸಿಲ್ಲ. ಕೊನೆಗೆ ಇದರಿಂದ ಮಗ ಮುನಿಸಿಕೊಂಡರೂ, ಇವರ ಸಾವಯವ ಪ್ರೀತಿ ಕಡಿಮೆಯಾಗಿಲ್ಲ. ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಹಲವಾರು ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.

|< ... 24 25 26 27 28 29 ...>|
Home    |   About Us    |   Contact    |   
microbi.tv | Ocat Online Catalog Marketing Service in India | Powered by Ocat Digital Pvt.Ltd