Blog

ಇವರು ಜನಮೆಚ್ಚಿದ ವಿಶ್ರಾಂತ ಪೋಸ್ಟ್ ಮನ್, ಈಗ ಹೆಮ್ಮೆಯ ಸಾವಯವ ಕೃಷಿಕರು. ಯಾರು ಎಷ್ಟೇ ಒತ್ತಡ ತಂದರೂ ತಮ್ಮ ಭೂಮಿಯನ್ನು ಉಳುಮೆ ಮಾಡಿಸಿಲ್ಲ! ಭೂಮಿಗೆ ಹಿಡಿ ರಾಸಾಯನಿಕ ಗೊಬ್ಬರ ತೋರಿಸಿಲ್ಲ. ಕೊನೆಗೆ ಇದರಿಂದ ಮಗ ಮುನಿಸಿಕೊಂಡರೂ, ಇವರ ಸಾವಯವ ಪ್ರೀತಿ ಕಡಿಮೆಯಾಗಿಲ್ಲ. ಭೂಮಿಯನ್ನು ವಿಷಮುಕ್ತ ಮಾಡುವ ಸಂಕಲ್ಪದೊಂದಿಗೆ ಹಲವಾರು ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.


ಇವರ ಹೆಸರು ಗಂಗಾಧರಯ್ಯ. ತಾಲ್ಲೂಕಿನ ಸಾವಯವ ಕೃಷಿಕರ ಸಂಘದ ಅಧ್ಯಕ್ಷರು. ನಾಗರಘಟ್ಟ ಗ್ರಾಮದವರು. ಇವರ ತೋಟಕ್ಕೆ ರೈತರ ಸಂಜೀವಿನಿಯಾದ ಡಾ. ಸಾಯಿಲ್ ನ ಪ್ರತಿನಿಧಿ ಶ್ರೀನಿವಾಸ್ ಭೇಟಿ ನೀಡಿ, ತೋಟವನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಭೂಮಿ ಎರೆಭೂಮಿ; ಜತೆಗೆ ಕೆರೆ ದಡದಲ್ಲಿರುವ ತೋಟ! ಮಳೆಗಾಲದಲ್ಲಿ 2-3 ತಿಂಗಳು ಕೆರೆ ನೀರು ಇವರ ತೋಟದ ತುಂಬಾ ತುಂಬಿರುತ್ತದೆ. ಈ ಅಂಶಗಳು ಕೃಷಿಗೆ ವಿರುದ್ಧವಾಗಿವೆ.! ಭೂಮಿಯನ್ನು ಉಳುಮೆ ಮಾಡಿಸದೆ ಹುಲ್ಲು ಬೆಳೆಸಿರುವುದರಿಂದ ನಿಧಾನವಾಗಿ ಮಣ್ಣಿನ ಭೌತಿಕ ರಚನೆ ಬದಲಾವಣೆಯಾಗುತ್ತಿದೆ. ಜೊತೆಗೆ ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಹುರುಳಿ, ಅಲಸಂದೆ, ಯಂ, ಅಪ್ಸೆಣಬು ಮುಂತಾದ ದ್ವಿದಳ ಧಾನ್ಯಗಳನ್ನು ಹಾಕಿಕೊಂಡು ಮಣ್ಣಿನ ರಚನೆಯನ್ನು ಬದಲಾಯಿಸಲು ಸಲಹೆ ನೀಡಲಾಯಿತು.

 

ಇವರ ತೆಂಗು ತೋಟದಲ್ಲಿಯೇ ಅಡಿಕೆಯನ್ನು ಬೆಳೆಸಿದ್ದಾರೆ. ಅಂತರ ಬೆಳೆಗಳಾಗಿ ಬಾಳೆ, ಕೊಕೊ, ಮೆಣಸು, ಹಲಸು, ನಿಂಬೆ, ಚಕೋತ, ಮಾವು ಮುಂತಾದ ಹಣ್ಣಿನ ಮರಗಳು; ತೇಗ, ಸಿಲ್ವರ್, ಅರ್ಕುಲಸ್, ಬೇವು ಮುಂತಾದ ಕೃಷಿ ಅರಣ್ಯ ಮರಗಳನ್ನು ಬೆಳೆಸಿದ್ದಾರೆ. ಜೊತೆಗೆ ಹೈನುಗಾರಿಕೆಗಾಗಿ ಮಲನಾಡು ಗಿಡ್ಡ, ನಾಟಿ ಹಸುಗಳನ್ನು ಸಾಕಿದ್ದಾರೆ. ಕೃಷಿ ಹೊಂಡವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಕೃಷಿಯ ಬಗ್ಗೆ ವಿಶೇಷವಾದ ಕಾಳಜಿ ಹಾಗೂ ಜ್ಞಾನವನ್ನು ಹೊಂದಿರುವ ಗಂಗಾಧರಯ್ಯ ರವರು ಸಾವಯವ ಸಂಜೀವಿನಿಯಾದ ಡಾ. ಸಾಯಿಲ್ ನ್ನು ಮೊದಲಬಾರಿಗೆ ಉಪಯೋಗಿಸಿದ್ದಾರೆ ಮತ್ತು ಇದರ ಸತ್ಫಲಿತಾಂಶದ ಬಗ್ಗೆ ಅಪಾರವಾದ ನಂಬಿಕೆಯಿದೆ. ಡಾ. ಸಾಯಿಲ್ ಉಪಯೋಗಿಸುವುದರಿಂದ ಜೈವಿಕ ಸಂಪತ್ತು ವೃದ್ಧಿಯಾಗಿ ಮಣ್ಣಿನ ಭೌತಿಕ, ರಾಸಾಯನಿಕ ಗುಣಗಳು ಉತ್ತಮವಾಗುತ್ತವೆ. ತೆಂಗಿನ ಮರಗಳಿಂದ ಬೀಳುವ ಗರಿ, ಕುರಂಬಳೆ, ಎಡೆಮೊಟ್ಟೆ ಮುಂತಾದ ತ್ಯಾಜ್ಯಗಳನ್ನು ಸಣ್ಣಸಣ್ಣದ್ದಾಗಿ ಕತ್ತರಿಸಿ, ನಾಲ್ಕು ಮರಗಳ ಮಧ್ಯೆ ಹಾಕಿದ್ದಾರೆ.

 

ಪ್ರಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಹುಲ್ಲುನಾಚೆಗೌಡರ ಸಲಹೆಯಂತೆ ಪ್ರತಿಯೊಂದು ಮರಗಳ ಸುತ್ತಲೂ ಒಂದೊಂದು ತಿಪ್ಪೆಯನ್ನು ಮಾಡಲು ಸಲಹೆ ನೀಡಲಾಯಿತು.

 

ವರದಿ: ಶ್ರೀನಿವಾಸ್ ರೈತ

ಉನ್ನತಿ ಎಂಟರ್ಪ್ರೈಸಸ್, ಡಾ.ಸಾಯಿಲ್ ನ ಅಧಿಕೃತ ಮಾರಾಟಗಾರರು

ತುರುವೇಕೆರೆ ಮತ್ತು ತಿಪಟೂರು.  ಫೋನ್ – 8197443132

 

ಸಾವಯವ ಕೃಷಿಯಿಂದ ಉತೃಷ್ಟ ಅಡಿಕೆ ಫಸಲು | Way to get high yield of areca nut in Organic Farming

https://www.youtube.com/watch?v=bhNpqvfSRGs

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Online Advertising Service in India