Blog

ದಾವಣಗೆರೆ: ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ರೈತ ಚಕ್ಷು ಬಿರುದು ಪ್ರದಾನ ಮಾಡಲಾಯಿತು. ರೈತ ಸೇವೆಯನ್ನು ದೈವ ಸೇವೆ ಎಂದು ಬಗೆದು ಸೇವೆ ಸಲ್ಲಿಸುತ್ತಿರುವ ಡಾ.ಕೆ.ಆರ್.ಹುಲ್ಲುನಾಚೆಗೌಡರಿಗೆ ನಾಡಿನ ಪ್ರಸಿದ್ಧ ವೈಚಾರಿಕ ಸಾಹಿತಿಗಳು ಮತ್ತು ರಂಗಜಂಗಮ ಖ್ಯಾತಿಯ ಶ್ರೀಮಠ ಸಾಣೆಹಳ್ಳಿಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ರೈತ ಚಕ್ಷು ಬಿರುದನ್ನು ಪ್ರದಾನ ಮಾಡಿ, ಸನ್ಮಾನಿಸಲಾಯಿತು.

ಪ್ರಗತಿ ಪರ ರೈತ, ಕೃಷಿ ರತ್ನ, ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ, ನಡೆದಾಡುವ ಕೃಷಿ ವಿಶ್ವಕೋಶ, ಮಣ್ಣಿನ ಮಗ ಸೇರಿದಂತೆ ಹಲವು ಪ್ರಶಸ್ತಿಗಳು, ಬಿರುದುಗಳು ಈಗಾಗಲೇ ಡಾ.ಕೆ.ಆರ್.ಹುಲ್ಲುನಾಚೆಗೌಡರನ್ನು ಅರಸಿ ಬಂದಿವೆ.

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies