Blog

ಇಲ್ಲಿ ರಾಸಾಯನಿಕ ಕೃಷಿಯ ಕಬ್ಬು, ಸಾವಯವ ಕೃಷಿಯ ಕಬ್ಬು, ಎರಡು ತರಹದ ಕಬ್ಬು ಬೆಳೆ ಇದೆ. ಮೂಡಲಗಿ ತಾಲೂಕು, ಹಳ್ಳೂರು ಗ್ರಾಮದ ಕೃಷಿಕ ಪರಶುರಾಮ್ ಅವರು  2.2 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. 20 ಗುಂಟೆಯಲ್ಲಿ ಸಾವಯವ ಕೃಷಿ ಅನುಸರಿಸಿ ಕಬ್ಬು , 2 ಎಕರೆಯಲ್ಲಿ ರಾಸಾಯನಿಕ ಕೃಷಿ ಅನುಸರಿಸಿ ಕಬ್ಬು ಬೆಳೆದಿದ್ದಾರೆ. ಸಾವಯವ ಕಬ್ಬು ಹಚ್ಚ ಹಸಿರಿನಿಂದ ಆರೋಗ್ಯವಾಗಿದ್ದು 20 ಗುಂಟೆಯಲ್ಲಿ 35 ಟನ್ ಇಳುವರಿ ನಿರೀಕ್ಷೆ ಹುಟ್ಟಿಸಿದರೆ, ರಾಸಾಯನಿಕ ಕಬ್ಬು ಒಣಗಿ ಹೋಗಿ ಸಾವು ಬದುಕಿನ ಮಧ್ಯ ನರಳುತ್ತಿದೆ. 2 ಎಕರೆಯಲ್ಲಿ ಕೇವಲ 60 ಟನ್ ಇಳುವರಿಯ ನಿರೀಕ್ಷೆ ಹುಟ್ಟಿಸಿದೆ.

 

ಸಾವಯವ ಕೃಷಿಯ ಕಬ್ಬು:

20 ಗುಂಟೆಯ ಸಾವಯವ ಕಬ್ಬು ಬೆಳೆಗೆ ಕೃಷಿಕ ಡಾ.ಸಾಯಿಲ್ ಶುಗರ್ ಕೇನ್ ಜೈವಿಕ ಗೊಬ್ಬರ ಬಳಸುತ್ತಿದ್ದಾರೆ. ಈ ಒಂದು ಜೈವಿಕ ಗೊಬ್ಬರದಿಂದ ಭೂಮಿಯಲ್ಲಿ ಸಮಗ್ರ ಪೋಷಕಾಂಶಗಳು ಸೃಷ್ಠಿಯಾಗಿ ಮಣ್ಣು ಮೃದುವಾಗಿ, ಎರೆಹುಳುಗಳು ಸೃಷ್ಟಿಯಾಗಿವೆ. ಮರಿಸಂಖ್ಯೆಗಳು,ಕಬ್ಬಿನ ಗಣಿಕೆಗಳು ಹೆಚ್ಚಾಗಿ, ಹಚ್ಚ ಹಸಿರಿನಿಂದ ಬೆಳೆದು 20 ಗುಂಟೆಯಲ್ಲಿ 35 ಟನ್ ಇಳುವರಿಯ ನಿರೀಕ್ಷೆಯನ್ನು ಹುಟ್ಟಿಸಿದೆ. ಇಂತಹ ಕಬ್ಬು ಬೆಳೆಗೆ ರೈತ ಮಾಡಿದ ಖರ್ಚು ಕೇವಲ 5 ಸಾವಿರ ರೂ ಮಾತ್ರ.

 

ರಾಸಾಯನಿಕ ಕೃಷಿಯ ಕಬ್ಬು:

ಉಳಿದ 2 ಎಕರೆಯಲ್ಲಿ ಕಬ್ಬು ಬೆಳೆ ಬೆಳೆದಿರುವ ಕೃಷಿಕ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಭೂಮಿಯನ್ನು ಬಂಡೆಯ ಹಾಗೆ ಗಟ್ಟಿ ಮಾಡಿಕೊಂಡಿದ್ದಾರೆ. ಮಣ್ಣಿನಲ್ಲಿ ಗಾಳಿ ಡದ ಹಾಗೆ ಬಿರುಸಾಗಿ, ಎರೆಹುಳುಗಳಾಗಲಿ, ಪೋಷಕಾಂಶಗಳಾಗಲಿ ಕೃಷಿ ಭೂಮಿಯಲ್ಲಿ ಇಲ್ಲ. ನೀರು ಸಹ ಇಂಗದ ರೀತಿಯಲ್ಲಿ ಭೂಮಿ ಹಾಳಾಗಿದೆ. ಬೆಳೆ ಪೂರ್ತಿಯಾಗಿ ಒಣಗಿ ಹೋಗಿದ್ದು, 2 ಎಕರೆಯಲ್ಲಿ ಕೇವಲ 60 ಟನ್ ಇಳುವರಿಯ ನಿರೀಕ್ಷೆ ಇದೆ. ಈ ಬೆಳೆಗೆ ರೈತ ಮಾಡಿದ ಖರ್ಚು 30 ಸಾವಿರ ರೂ.

ರಾಸಾಯನಿಕ ಕೃಷಿಯ ಕಬ್ಬು, ಸಾವಯವ ಕೃಷಿಯ ಕಬ್ಬು ತೋಟವನ್ನು ವೀಕ್ಷಣೆ ಮಾಡಲು ಬಯಸಿದ್ರೆ, ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ದೊರೆಯುತ್ತಿದೆ.

https://www.youtube.com/watch?v=fCHLXKw_fi8&t=97s

      

ವರದಿ: ವನಿತಾ ಪರಸಣ್ಣವರ್

 

#sugarcanefarming  #sugarcane  #sugarcanefarminginindia  #farming  #sugarcanefarm  #sugarcanefarming  #sugarcanecultivation  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies