Blog

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೃಷಿಕ ರಂಗಯ್ಯ ಸತತವಾಗಿ ಸಾವಯವ ಕೃಷಿಯನ್ನೇ  ಮಾಡುತ್ತಾ ಬಂದಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೆ, ಕೊಟ್ಟಿಗೆ ಗೊಬ್ಬರ ಮಾತ್ರ ತೋಟಕ್ಕೆ ಬಳಸುತ್ತಾ ಬಂದಿದ್ದರೂ ಸಹಿತ, ಗಿಡಗಳು ಮಾತ್ರ ಹಳದಿಯಾಗಿ ಸೊರಗುತ್ತಿದ್ದವು. ಹಾಗಾಗಿ ಕೃಷಿಕ ಕೊಟ್ಟಿಗೆ ಗೊಬ್ಬರದ ಜತೆ ಈಗ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ.

ಬದುವಿನಲ್ಲಿ ತೆಂಗು, ಬಾಳೆ ಬೆಳೆ ಮುಖ್ಯ ಬೆಳೆಯಾಗಿ ಅಡಿಕೆ ಬೆಳೆಯನ್ನು ಬೆಳೆಯುತ್ತಿರುವ ರಂಗಯ್ಯ ಅವರು, ಈಗ ಸತತ 2 ವರ್ಷದಿಂದ ಕೊಟ್ಟಿಗೆ ಗೊಬ್ಬರದ ಜತೆ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸೋಕೆ ಶುರುಮಾಡಿದ ಮೇಲೆ, ಅಡಿಕೆ ಗಿಡಗಳು ಹಸಿರಾಗಿ ಬೆಳೆಯುತ್ತಾ ಮೂರೂವರೆ ವರ್ಷದ ಗಿಡಗಳು ಸಹ ಹೊಂಬಾಳೆ ಬಿಡುತ್ತಿವೆ. ತೆಂಗು ಬೆಳೆ ಸಮೃದ್ಧವಾಗಿದ್ದು ತೋಟದಲ್ಲಿದ್ದ ರೋಗಗಳು ಮಾಯವಾಗಿವೆ. ಜತೆಗೆ ಅಡಿಕೆ ಬೆಳೆಯ ಮಧ್ಯ ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾ ಬಂದಿರುವ ಕೃಷಿಕ,ಬಾರಿ ಹುರುಳಿ ಕಾಳನ್ನು ಬೆಳೆದಿದ್ದು, ಅದರಲ್ಲಿ ಲಾಭದ ಜತೆಗೆ ಅಲ್ಲಿ ಬಂದಂತಹ ತ್ಯಾಜ್ಯವನ್ನು ತೋಟದಲ್ಲಿ ಮಲ್ಚೀಂಗ್ ಮಾಡಿ, ಹಸಿರೆಲೆ ಗೊಬ್ಬರವನ್ನು ನೀಡುತ್ತಿದ್ದಾರೆ. ಹೀಗಾಗಿ ಇವರ ತೋಟದಲ್ಲಿ ಯಾವುದೆ ರೋಗ, ಕೀಟದ ಬಾಧೆಯಿಲ್ಲದೆ, ಹಸಿರೆಲೆ ಗೊಬ್ಬರ ಹಾಗೂ ಡಾ.ಸಾಯಿಲ್ ಜೈವಿಕ ಗೊಬ್ಬರದಿಂದ ಅಡಿಕೆ ಗಿಡಗಳು ಮೂರೂವರೆ ವರ್ಷಕ್ಕೆ ಇಳುವರಿ ನೀಡಲು ಸಜ್ಜಾಗುತ್ತಿವೆ.

ಇನ್ನು ಕೃಷಿ ಹೊಂಡದಲ್ಲಿ ಮೀನುಗಳ ಸಾಕಾಣಿಕೆಯನ್ನು ಮಾಡಿರುವ ಕೃಷಿಕ, ಅಲ್ಲಿಯೂ ಲಾಭ ಪಡೆಯುತ್ತಿದ್ದಾರೆ. ನೀವು ಕೂಡ ರಂಗಯ್ಯ ಅವರಂತೆ ಕೃಷಿ ಮಾಡಿ, ಅಡಿಕೆಯಲ್ಲಿ ಮೂರೂವರೆ ವರ್ಷಕ್ಕೆ ಇಳುವರಿ ಪಡೆಯುವುದು ಹೇಗೆಂದು ತಿಳಿಯಲು  ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=X2jcpCAJ11o

 

ವರದಿ: ವನಿತಾ ಪರಸನ್ನವರ

ಸಾವಯವಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿಧಾತು ಆಪ್ ಡೌನ್ ಲೋಡ್ಗೆ ಕೆಳಕಂಡ ಲಿಂಕ್ ಕ್ಲಿಕ್ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies