Blog

       ಪರಂಗಿಹಣ್ಣು ರೈತರಿಗೆ ಹೆಚ್ಚು ಲಾಭ ತಂದುಕೊಡುವ ಒಂದು ಹಣ್ಣಿನ ಬೆಳೆ. ಪಪ್ಪಾಯ ಬೆಳೆಯುವುದು ಸುಲಭ ಮತ್ತು ನಿರ್ವಹಣೆ ಕಡಿಮೆ. ಆರೋಗ್ಯಕಾರಿ ಪ್ರಯೋಜನ ಮತ್ತು ವಾಣಿಜ್ಯ ಮೌಲ್ಯದಿಂದಾಗಿ ಮಾರುಕಟ್ಟೆಯಲ್ಲಿ ಪರಂಗಿ ಹಣ್ಣಿಗೆ ತುಂಬಾ ಬೇಡಿಕೆ ಇದೆ. ನಿರ್ವಹಣೆ ಮತ್ತು ಸಸಿಯ ಆಯ್ಕೆಯಲ್ಲಿ ಎಡವುತ್ತಿರುವ ರೈತರು ಪರಂಗಿ ಬೆಳೆಯುವಾಗ ಹೆಚ್ಚು ನಷ್ಟಕ್ಕೊಳಗಾಗುತ್ತಿದ್ದಾರೆ. ಹಾಗಾದರೆ ಪರಂಗಿಯಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ಏನು ಮಾಡಬೇಕು? ರೋಗಗಳನ್ನು ಗುರುತಿಸುವುದು ಹೇಗೆ? ನಿರ್ವಹಣೆಗೆ ಏನು ಮಾಡಬೇಕು?

       ಪರಂಗಿ ಬೆಳೆಯನ್ನು ಕಾಡುವ ಒಂದು ದೊಡ್ಡ ಸಮಸ್ಯೆಯೆಂದರೆ Papaya ringspot virus. ಇದೊಂದು ವೈರಾಣು ಆಗಿದ್ದು, ಅಫಿಡ್(ಸಸ್ಯ ಹೇನು) ಎಂಬ ಕೀಟದ ಮುಖಾಂತರ ಹರಡುತ್ತದೆ. ಶೀತದ ವಾತಾವರಣದಲ್ಲಿ ಅಥವಾ ಹೆಚ್ಚು ನೀರು ಕೊಡುವುದರಿಂದ ಇದರ ಸಮಸ್ಯೆ ಹೆಚ್ಚಾಗುತ್ತದೆ. ಈ ರೋಗ ಬಂದರೆ ಮರಗಳ ಬೆಳವಣಿಗೆ ಕುಂಠಿತವಾಗಿ ಹಣ್ಣುಗಳ ಸಂಖ್ಯೆ ಮತ್ತು ಗಾತ್ರ ಕುಂಠಿತವಾಗುತ್ತದೆ. ಹಾಗಾದರೆ Ringspot ರೋಗ ಬಂದರೆ ಅದನ್ನು ಕಂಡುಹಿಡಿಯುವುದು ಹೇಗೆ?

 

ರೋಗದ ಗುಣಲಕ್ಷಣಗಳು:

- ಎಲೆಗಳಲ್ಲಿ ರಿಂಗ್ ಗಳಂತಹ ಸ್ಪಾಟ್ ಗಳು ಕಾಣಿಸಿಕೊಳ್ಳುವುದು.

- ಕಾಂಡ, ರೆಂಬೆ-ಕೊಂಬೆಗಳಲ್ಲಿ ರಿಂಗ್ ಸ್ಪಾಟ್ ಕಾಣಿಸಿಕೊಳ್ಳುವುದು.

- ಪೂರ್ತಿ ಹಣ್ಣಾಗದ ಹಣ್ಣುಗಳಲ್ಲಿ ಚುಕ್ಕೆ ಕಾಣಿಸಿಕೊಳ್ಳುವುದು.

ಹೀಗೆ ನಾನಾ ತರಹದ ಗುಣಲಕ್ಷಣಗಳಿಂದ ಈ ರೋಗವನ್ನು ಗುರುತಿಸಬಹುದು. ಈ ರೋಗಕ್ಕೆ ತುತ್ತಾದ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಹಣ್ಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಈ ರೋಗವನ್ನು ಪ್ರಾಥಮಿಕ ಹಂತದಲ್ಲೇ ಹತೋಟಿ ಮಾಡುವುದು ಮುಖ್ಯ.

       ಈ ರೋಗ ಒಮ್ಮೆ ಬಂದರೆ ಹತೋಟಿಗೆ ತರುವುದು ಕಷ್ಟ. ಈ ರೋಗವನ್ನು ತಡೆಗಟ್ಟಲು ಸಸಿ ನಾಟಿ ಮಾಡುವ ಸಮಯದಲ್ಲೇ ಎಚ್ಚರವಹಿಸಬೇಕು. ಹಾಗಾದರೆ ಈ ರೋಗದ ಬಾಧೆಯನ್ನು ತಡೆಯುವುದು ಹೇಗೆ? ಈ ರೋಗದ ಗುಣಲಕ್ಷಣಗಳು ಮತ್ತು ಹತೋಟಿ ವಿಧಾನಗಳನ್ನು ವಿವರವಾಗಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಪೂರ್ತಿ ವಿಡೀಯೋ ನೋಡಿ.

 

https://www.youtube.com/watch?v=0IjnOnYFk90&t=308s

 

ಬರಹ: ರವಿಕುಮಾರ್

 

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #papayafarming  #papayablog  #papayaringspotvirus  #prsv  #diseasecontrol  #highyield  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies