Blog

       ಅಡಿಕೆ ಇಂದು ಅತಿ ಹೆಚ್ಚು ಬೇಡಿಕೆಯಲ್ಲಿರುವ ಬೆಳೆ. ಇದರ ಅನೇಕ ಉಪಯೋಗಗಳಿಂದ ರೈತರಿಗೆ ಒಳ್ಳೆ ಲಾಭ ಸಿಗುತ್ತಿದೆ. ಆದರೆ ರೈತರು ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಸಣ್ಣ ತಪ್ಪುಗಳಿಂದ, ಅಡಿಕೆ ತೋಟವನ್ನು ರೋಗ-ರುಜಿನಗಳಿಗೆ ತುತ್ತಾಗುವಂತೆ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ರೈತರು ತಮ್ಮ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ರೋಗಕ್ಕೆ ಮೈಕ್ರೋಬಿ ತಂಡದಿಂದ ಪರಿಹಾರ ಪಡೆದಿದ್ದಾರೆ.

 

       ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ರೈತರಾದ ಚಂದ್ರಶೇಖರ್ ತಮ್ಮ ಅಡಿಕೆ ತೋಟದ ಸಮಸ್ಯೆ ಹೇಳಿಕೊಂಡಿದ್ದಾರೆ. ಇವರ ತೋಟದಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ ಮತ್ತು spindle bug ಕೀಟ ಕೂಡ ಕಾಣಿಸಿಕೊಂಡಿದೆ. ಇಲ್ಲಿಗೆ ಭೇಟಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಶಿವಶಂಕರ್ ಮತ್ತು ನಾಗರಾಜು ಅವರು, ರೈತರಿಗೆ ಪರಿಹಾರ ತಿಳಿಸಿದ್ದಾರೆ.

 

ಶಿವಶಂಕರ್ ಅವರು ತೋಟದ ತಪಾಸಣೆ ನಡೆಸಿ, ಸಣ್ಣ ಸಣ್ಣ ವಿಷಯಗಳು ಹೇಗೆ ತೋಟವನ್ನು ಹಾಳುಮಾಡುತ್ತದೆ ಎಂದು ತೋರಿಸಿಕೊಟ್ಟರು. ಚಂದ್ರಶೇಖರ್ ಅವರು ಮಾಡಿರುವ ತಪ್ಪೆಂದರೆ ಅತೀ ಹೆಚ್ಚು ನೀರು ಕೊಟ್ಟಿರುವುದು ಮತ್ತು ರಾಸಾಯನಿಕಗಳ ಬಳಕೆ. ನೀರು ಹೆಚ್ಚು ಕೊಟ್ಟಿದ್ದರ ಕಾರಣ ಇವರ ತೋಟದಲ್ಲಿ ಮಣ್ಣು ಗಟ್ಟಿಯಾಗಿ, ನೀರು ಹೀರಿಕೊಳ್ಳುವ ಸಾಮರ್ಥ್ಯ ಕೂಡ ಕಡಿಮೆಯಾಗಿದೆ. ಮಣ್ಣು ಗಟ್ಟಿಯಾಗಿರುವ ಕಾರಣ ಗಾಳಿಯಾಡದೆ, ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ಇಲ್ಲವಾಗಿವೆ. ಇವೆಲ್ಲದರ ಪರಿಣಾಮವಾಗಿ ಅಡಿಕೆ ಮರಗಳಿಗೆ ರೋಗ ದಾಳಿಯಿಟ್ಟಿದೆ. ಕೀಟ, ರೋಗಗಳ ಕಾಟದಿಂದ ತತ್ತರಿಸುತ್ತಿದೆ.

ಅಡಿಕೆ ತೋಟ ಆರೋಗ್ಯವಾಗಿರಲು ನೀರಿನ ನಿರ್ವಹಣೆ ಹೇಗೆ ಮಾಡಬೇಕು ಮತ್ತು ತೋಟ ಪರಿಶೀಲನೆ ಮಾಡುವುದನ್ನು ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ಪೂರ್ತಿ ವಿಡೀಯೋ ನೋಡಿ

https://www.youtube.com/watch?v=yGaNFIMLUiw&t=2s

 

ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies