Blog

ಬೆಳೆಗಳಿಗೆ ಮಾರಕವಾಗಿರುವ ಬೇರುಹುಳುಗಳು ಅಡಿಕೆ, ತಾಳೆ, ತೆಂಗು , ಕಬ್ಬು, ಬಾಳೆ, ನೆಲಗಡಲೆ, ಭತ್ತ, ಗೋಧಿ, ಗೆಣಸು, ತೇಗದ ಮರ, ಕಬ್ಬು ಇತ್ಯಾದಿ ಬೆಳೆಗಳನ್ನು ನಾಶಮಾಡಿಬಿಡುತ್ತವೆ. ನಮ್ಮ ಕೃಷಿ ಭೂಮಿಯಲ್ಲಿ ಮೂರು ರೀತಿಯ ಬೇರುಹುಳುಗಳನ್ನು ನೋಡಬಹುದು. ಬೇರೆ ಬೇರೆ ಋತುಮಾನಗಳಲ್ಲಿ ಕಾಣಿಸಿಕೊಳ್ಳುವ ಇವುಗಳು ಹೆಚ್ಚಾಗಿ ಮಳೆಗಾಲದಲ್ಲಿ ಸಂತಾನ ಅಭಿವೃದ್ಧಿ ಹೆಚ್ಚಿಸಿಕೊಳ್ಳುತ್ತವೆ.   

 

ಒಂದು ಬೇರುಹುಳು ಪ್ರತಿ ಚದರ ಮೀಟರಿಗೆ 80 ರಿಂದ 100 ಪ್ರತಿಶತ ಬೆಳೆ ಹಾನಿಮಾಡಬಲ್ಲದು. ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ ಇವುಗಳಿಂದಾಗುವ ಹಾನಿಯ ತೀವ್ರತೆ ಹೆಚ್ಚು. ಯಾಕೆಂದರೆ 2ನೇ ಮತ್ತು 3ನೇ ಹಂತದ ಬೇರುಹುಳುಗಳಿಗೆ ಆಹಾರ ಹೆಚ್ಚಾಗಿ ಬೇಕಿರುತ್ತದೆ. ಅಂತಹ ಸಂದರ್ಭದಲ್ಲಿ ಅವು ಬೇರುಗಳನ್ನು ತಿನ್ನುವುದು ಜಾಸ್ತಿ. ಹೀಗಾಗಿ ಇವುಗಳನ್ನು ನಾಶಮಾಡುವ ಉದ್ದೇಶದಿಂದ ಕೃಷಿಕರು ರಾಸಾಯನಿಕ ಸ್ಪ್ರೇಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲಿ ಮತ್ತಷ್ಟು ಭೂಮಿ, ಬೆಳೆಯನ್ನು ಹಾಳುಮಾಡಿಕೊಳ್ಳುತ್ತಾರೆ. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ಉದ್ಧೇಶದಿಂದ ಸಾವಯವ ಕೃಷಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ.

 

ಮಣ್ಣಿನಲ್ಲಿ 3 ರಿಂದ 5 ಇಂಚು ಕೊರೆದು, ಮೊಟ್ಟೆಗಳನ್ನು ಇಡುವ ಬೇರುಹುಳುಗಳು, ಒಂದು ರಾತ್ರಿಗೆ 3 ರಿಂದ 5 ಮೊಟ್ಟೆ ಇಡುತ್ತವೆ. ಸಾಮಾನ್ಯವಾಗಿ ಬೇರುಹುಳುಗಳು ಮಣ್ಣಿನಲ್ಲಿ 1 ವರ್ಷದವರೆಗೂ ನೆಲೆಯೂರಿರುತ್ತವೆ. ಆದ್ದರಿಂದ ಬೆಳೆಗಳಿಗೆ ಇವುಗಳಿಂದಾಗುವ ತೊಂದರೆಗಳು ಹೆಚ್ಚು. ಬೆಳೆಗೆ ಮುಖ್ಯವಾಗಿ ಪೋಷಕಾಂಶಗಳು ದೊರೆಯುವುದು ಬೇರುಗಳಿಂದ. ಈ ಬೇರುಹುಳುಗಳು ಅವುಗಳನ್ನು ತಿನ್ನುವುದರಿಂದ ಬೆಳೆ ಒಣಗುವುದು, ಹಳದಿಯಾಗುವುದು. ಹೀಗೆಲ್ಲಾ ಲಕ್ಷಣಗಳು ಕಾಣಿಸಿ ಕೊನೆಗೆ ಬೆಳೆ ಹಾಳಾಗುವುದು ಖಂಡಿತ. ಆದ್ದರಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಇವುಗಳ ನಿರ್ವಹಣೆ ತುಂಬಾ ಮುಖ್ಯ, ಇವುಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ತಡೆಗಟ್ಟಲು ಸಾಧ್ಯ.

 

ಬೇರುಹುಳುಗಳು ನಮ್ಮ ಕೃಷಿ ಭೂಮಿಯಲ್ಲಿ ಬಾರದಿರಲು ಮುಂಜಾಗ್ರತವಾಗಿ ಏನೆಲ್ಲಾ ಕ್ರಮ ವಹಿಸಬೇಕು? ಯಾವೆಲ್ಲಾ ಸಾವಯವ ಔಷಧಿ ಬಳಸಬೇಕೆಂಬುದರ ಕುರಿತು ಮೈಕ್ರೋಬಿ ಟಿವಿಯ ಸಾಯಿಲ್ ಡಾಕ್ಟರ್ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಜಮೀನಿನಲ್ಲಿ ಬೇರುಹುಳು ಬರುವಿಕೆಗೆ ಪೂರ್ಣ ವಿರಾಮ ಹೇಳಿರಿ.

https://www.youtube.com/watch?v=tVnN2u67Vug

 

ವರದಿ: ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies