Blog

       ಇವರು ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್. ಹಾಲಿ ವೃತ್ತಿಯಲ್ಲಿ ಫಾರ್ಮರ್, ಉಪ ಕಸುಬು ಮೇಕೆ ಸಾಕಾಣಿಕೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆಲಸಕ್ಕೆ ರಾಜೀನಾಮೆ ನೀಡಿ, ಈಗ ಪೂರ್ತಿ ಕೃಷಿ, ಮೇಕೆ ಸಾಕಾಣಿಕೆಗೆ ಸಮಯ ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು, ಈಗ ತಮ್ಮ ಸಮಯದ ಸ್ವಾತಂತ್ರ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮೇಕೆ ಸಾಕಾಣಿಕೆಯಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ನೋಡೋಣ ಬನ್ನಿ

 

       ಖಾಸಗಿ ಕಂಪನಿಯ ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿರುವ ಇವರು, ಕೃಷಿಯಲ್ಲಿ ಆದಾಯ ಇಲ್ಲ ಎಂದು ಪಟ್ಟಣಗಳಿಗೆ ವಲಸೆ ಹೋಗುತ್ತಿರುವ ಯುವಜನೆತೆಗೆ ಸ್ಫೂರ್ತಿ. ಕೃಷಿಯಲ್ಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಬೋಯರ್ ತಳಿಯನ್ನು ದೇಸಿ ತಳಿಯ ಜೊತೆ ಕ್ರಾಸ್ ಮಾಡಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಕಡಿಮೆ ಅವಧಿಯಲ್ಲಿ ಅಧಿಕ ತೂಕವಿರುವ ಮೇಕೆಗಳನ್ನು ಪಡೆಯುತ್ತಿದ್ದಾರೆ. ಅಧಿಕ ತೂಕದ ಜೊತೆಗೆ ಇವುಗಳು, ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ ಮತ್ತು ಎಲ್ಲಾ ರೀತಿಯ ಸೊಪ್ಪನ್ನು ತಿನ್ನುತ್ತವೆ ಎಂದು ಇವರು ಹೇಳುತ್ತಾರೆ. ಮೊದ ಮೊದಲು ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದ ಇವರು, ಈಗ ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಕಾರಣ, ಮೇಕೆಗಳಲ್ಲಿ ರೋಗಗಳು ಕಡಿಮೆ ಮತ್ತು ನಿರ್ವಹಣೆ ಸುಲಭ. ಅಡಿಕೆ ತೋಟ ಹೊಂದಿರುವ ಇವರು, ಮೇಕೆ ಸಾಕಾಣಿಕೆ ಜೊತೆ ಎಮ್ಮೆಗಳನ್ನೂ ಸಾಕಿದ್ದಾರೆ. ಕೇವಲ ಒಂದು ಆದಾಯದ ಮೇಲೆ ಅವಲಂಬಿತರಾಗದೇ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿರುವ ಈ ಎಂಜಿನಿಯರ್ ಮಾದರಿ ಕೃಷಿಕ ಎಂದರೆ ತಪ್ಪಾಗಲಾರದು. ಇವರು ಹೇಗೆ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಮತ್ತು ಇತರ ವಿಷಯಗಳ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಪೂರ್ತಿ ವಿಡೀಯೋ ನೋಡಿ.

https://microbi.tv/pages/Content-cntid-104080.aspx


ಬರಹ: ರವಿಕುಮಾರ್

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies