25 ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಬಳಸಿದ್ದು 1 ತಂತ್ರಜ್ಞಾನ..!
ಟೊಮ್ಯಾಟೋಗೆ ಪ್ರಸಿದ್ಧಿಯಾಗಿರುವುದು ಕೋಲಾರ ಜಿಲ್ಲೆ. ಬಹುತೇಕ ಜಮೀನುಗಳಲ್ಲಿ ಟೊಮ್ಯಾಟೋ ಬೆಳೆಯನ್ನು ನೋಡಬಹುದು. ಇದೇ ಜಿಲ್ಲೆಯ ಯುವಕರೊಬ್ಬರು ಉದ್ಯೋಗದ ಜೊತೆ ಟೊಮ್ಯಾಟೋ ಬೆಳೆ ಬೆಳೆದು ಕೃಷಿ ಮಾಡುತ್ತಿದ್ದಾರೆ. ಇವರು ಸಾವಯವ ಪದ್ಧತಿ ಅನುಸರಿಸಿ ತಮ್ಮ 1 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ.
|
ಎರೆಹುಳಗಳ ಸಾಮ್ರಾಜ್ಯ ಸೃಷ್ಟಿಯಾಗಬೇಕೆ?
ಎರೆಹುಳು ರೈತನ ಮಿತ್ರ. ಕೃಷಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಎರೆಹುಳು ಇದ್ದರೆ ಮಣ್ಣು ಫಲವತ್ತಾಗುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚುತ್ತವೆ. ಕೃಷಿಭೂಮಿಯಲ್ಲಿ ಯಥೇಚ್ಛವಾಗಿ ಇರಬೇಕಾಗಿದ್ದ ಎರೆಹುಳು ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ಕಾರಣ ರಾಸಾಯನಿಕ ಗೊಬ್ಬರಗಳ ಬಳಕೆ. ಎರೆಹುಳುಗಳು ಕಡಿಮೆ ಇವೆ ಎಂದರೆ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ ಎಂದು ತಿಳಿಸುತ್ತದೆ. ಅಂದರೆ ಫಲವತ್ತತೆ ಇಲ್ಲದ ಮಣ್ಣು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.
|
ಬೆಟ್ಟದ ನೆಲ್ಲಿಯನ್ನು ಮುಖ್ಯಬೆಳೆಯಲ್ಲಿ ಹೀಗೆ ಬೆಳೆಯಿರಿ..!
ಬೆಟ್ಟದ ನೆಲ್ಲಿ ಎಂದ ತಕ್ಷಣ ಬಾಯಿ ನೀರೂರಲು ಶುರುವಾಗುತ್ತೆ. ನೆಲ್ಲಿಕಾಯಿಯಲ್ಲಿ ನಾವು ಎರಡು ವಿಧವಾದ ನೆಲ್ಲಿಯನ್ನು ನೋಡುತ್ತೆವೆ. ಒಂದು ನಾಡಿನ ನೆಲ್ಲಿಕಾಯಿ, ಮತ್ತೊಂದು ಹೆಚ್ಚಾಗಿ ಗುಡ್ಡ ಗಾಡುಗಳಲ್ಲಿ ಬೆಳೆದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಬೆಟ್ಟದ ನೆಲ್ಲಿ.ಚಿಕ್ಕವಯಸ್ಸಿನಲ್ಲಿ ನೆಲ್ಲಿಕಾಯಿಯ ರುಚಿಯನ್ನು ಉಪ್ಪು, ಖಾರದೊಂದಿಗೆ ಸ್ನೇಹಿತರ ಜತೆ ಚಪ್ಪರಿಸಿ ತಿಂದಿರುವ ನೆನಪುಗಳು ನಮಗುಂಟು. ಮನೆಯ ಹಿತ್ತಲ್ಲಿನಲ್ಲಿ, ಹೊಲಗಳಲ್ಲಿ ಬೆಳೆದಾಗ ಅವುಗಳನ್ನು ಕಿತ್ತು ತಿನ್ನುವುದೇ ಖುಷಿ. ಆದರೆ ಈಗಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದಂತೆ ಮರ ಗಿಡಗಳನ್ನು ನೋಡುವುದು ಸಹಿತ ಕಡಿಮೆಯಾಗುತ್ತಿರುವುದು ದುಃಖದ ಸಂಗತಿ. ಹಾಗಾದ್ರೆ ಬೆಟ್ಟದ ನೆಲ್ಲಿಯನ್ನು ಕೃಷಿಯಲ್ಲಿ ಬಳಸಿಕೊಂಡಾಗ ರೈತರಿಗೆ ಸಿಗುವ ಲಾಭಗಳೇನು, ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ಬನ್ನಿ ತಿಳಿಯೋಣ. ಬಾಯಿಗೆ ಒಗರು ಒಗರಾಗಿ ರುಚಿ ಉಣಿಸುವ ಬೆಟ್ಟದ ನೆಲ್ಲಿಕಾಯಿಯು ದೇಹದ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೆ.
|
ಒಂದೊಂದು ಕಾಳು ಮೆಣಸು 7 ಇಂಚು..!
ಕಾಳು ಮೆಣಸು ಸಾಂಬಾರು ಪದಾರ್ಥಗಳಲ್ಲಿ ಒಂದು. ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಲ್ಲಿರುವ ಕಾಳು ಮೆಣಸು ಬೆಳೆಯುವ ಹಂತದಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕಾಗುತ್ತೆ. ವಾಣಿಜ್ಯ ಬೆಳೆಯಾಗಿ ಬೆಳೆಯಲ್ಪಡುವ ಕಾಳು ಮೆಣಸು, ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಎಷ್ಟೋ ಕಾಯಿಲೆಗಳಿಗೆ ಔಷಧಿಯಾಗಿ ಸೇವಿಸಲಾಗುತ್ತದೆ.
|
20 ಲೀಟರ್ ಗೆ ಅಬ್ಬಾ..! ಎಂತಹ ಟೊಮೇಟೊ
ಕೋಲಾರ ಜಿಲ್ಲೆ ಚಿನ್ನದ ಗಣಿಗೆ ಫೇಮಸ್ ಆದ್ರೆ, ಮತ್ತೊಂದು ಕಡೆ ತರಕಾರಿ ಬೆಳೆಗಳ ರಾಜ ಟೊಮೇಟೊ ಬೆಳೆಯುವುದಕ್ಕೂ ಸಹ ಅಷ್ಟೇ ಫೇಮಸ್.ಹೆಚ್ಚಾಗಿ ಟೊಮೇಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಸತತ ಮೂರು ವರ್ಷದಿಂದ ಟೊಮೇಟೊ ಬೆಳೆಯುತ್ತಿರುವ ಈ ಕೃಷಿಕರು ಪ್ರತಿ ಬಾರಿಯೂ ಲಾಭಗಳನ್ನು ಪಡೆಯುತ್ತಾ ಬಂದಿದ್ದಾರೆ.
|
ರಾಸಾಯನಿಕ ಗೊಬ್ಬರದ ಹಂಗಿಲ್ಲದೆ ಸದ್ದು ಮಾಡುತ್ತಿದೆ ಅಡಿಕೆ ತೋಟ
ರಾಸಾಯನಿಕ ಬಳಸದೆ ಕೃಷಿ ಮಾಡಲಾಗುವುದಿಲ್ಲ ಎನ್ನುವ ಜನರ ಮಧ್ಯೆ, ಇವರು ಮೊದಲಿನಿಂದಲೂ ನೈಸರ್ಗಿಕ ಮತ್ತು ಸಾವಯವ ಕೃಷಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ವಿಷಮುಕ್ತ ಆಹಾರ ಬೆಳೆಯುತ್ತಿದ್ದಾರೆ. 20 ವರ್ಷದ ಅಡಿಕೆ ತೋಟದ ಮಾಲೀಕರು ಇವರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ರೈತರಾದ ಪರಮೇಶಪ್ಪ ಮುದ್ದಿಯವರು 1964 ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸಾವಯವ ಕೃಷಿ ಮೂಲಕ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
|
ಬೆಳೆಗಳ ಆರೋಗ್ಯಕ್ಕೆ ಮದ್ದು ಈ Bordeaux ಮಿಶ್ರಣ
ಮಳೆಗಾಲದಲ್ಲಿ ಕೇವಲ ಮನುಷ್ಯರಿಗಷ್ಟೇ ಅಲ್ಲ, ಬೆಳೆಗಳಿಗೂ ರೋಗ-ರುಜಿನಗಳು ಹೆಚ್ಚಾಗುತ್ತವೆ. ಶೀತದಿಂದಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಅಡಿಕೆಯಲ್ಲಿ ಕೊಳೆರೋಗದಂತಹ ರೋಗಗಳು ಲಗ್ಗೆಯಿಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಮಳೆ ಹೆಚ್ಚಾದಾಗ ತೋಟದಲ್ಲಿನ ಬೆಳೆಗಳನ್ನು ಶೀತದಿಂದ ಬರುವ ರೋಗಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
|
ನೂರು ಎಕರೆಗೆ ಸೆಡ್ಡು ಹೊಡೆಯಿತು, ಮೂರು ಎಕರೆ ಬೆಳೆ..!
ಸಮಗ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ರೈತರಿಗೆ ಸಾಕಷ್ಟು ಅನಕೂಲಗಳಿವೆ. ಅದು ಹೇಗೆಂದರೆ ಹಲವು ಬೆಳೆ ಬೆಳೆದಾಗ ಒಂದೊಂದು ಬೆಳೆಯಿಂದಲೂ, ಒಂದೊಂದು ರೀತಿಯ ಆದಾಯ ಸಿಗುತ್ತದೆ. ಅದಷ್ಟೆ ಅಲ್ಲದೆ ವಾತಾವರಣದ ವೈಪರೀತ್ಯದಿಂದಾಗಿ ಒಂದು ಬೆಳೆ ಹಾಳಾದರೂ ಸಹಿತ, ರೈತರಿಗೆ ಒಂದಲ್ಲಾ ಒಂದು ಬೆಳೆಯಿಂದ ಲಾಭ ಸಿಗುವುದು ಕಟ್ಟಿಟ್ಟ ಬುತ್ತಿ.
|
ಹೆಚ್ಚು ಜಮೀನಿಗೆ ಕಡಿಮೆ ನೀರು ಬಳಕೆ, ಕಡಿಮೆ ಖರ್ಚು..!
ಕೃಷಿಯಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕಾದ ವಿಷಯಗಳ ಪೈಕಿ ನೀರು ನಿರ್ವಹಣೆ ಕೂಡ ಒಂದು, ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚಾದರೂ ಸಮಸ್ಯೆ, ಅತಿ ಕಡಿಮೆಯಾದರೂ ಸಮಸ್ಯೆ. ಹೀಗಿರುವಾಗ ನೀರಿನ ನಿರ್ವಹಣೆಗೆ ಕೃಷಿಕರು ಹನಿ ನೀರಾವರಿ ಪದ್ಧತಿ ಬಳಕೆ ಮಾಡುವುದು ಉತ್ತಮ.
|
ಬದನೆಯ ಕಾಯಿಕೊರಕಕ್ಕೆ ರಾಸಾಯನಿಕ ಸ್ಪ್ರೇ ಬೇಡ, ಸಾವಯವದಲ್ಲಿದೆ ನಿಯಂತ್ರಣ..!
ನಮ್ಮ ಭಾರತ ದೇಶ ಬದನೆ ಬೆಳೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ಆದರೆ ಬದನೆಯಲ್ಲಿ ಹೆಚ್ಚಾಗಿ ಕಾಡುವ ಕಾಯಿಕೊರಕ ಹುಳುವಿನಿಂದ ಬದನೆ ಬೆಳೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಕೃಷಿಕರು ಹೈರಾಣಾಗಿ ಹೋಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ರೈತರು ಬಳಸುತ್ತಿರುವ ರಾಸಾಯನಿಕ ಸ್ಪ್ರೇಗಳಿಂದ ಹುಳುಗಳ ತಡೆಗಟ್ಟುವಿಕೆಯ ಬದಲು ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಭೂಮಿಯನ್ನು ದಿನೇದಿನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಸ್ಪ್ರೇಗಳು, ಮಣ್ಣಿನ ಆರೋಗ್ಯ, ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿರುವುದು ನಿಮ್ಮಗೆಲ್ಲಾ ತಿಳಿದಿರುವ ವಿಚಾರ.
|