Blog

ಸಮಗ್ರ ಬೆಳೆ ಪದ್ಧತಿ ಅನುಸರಿಸುವುದರಿಂದ ರೈತರಿಗೆ ಸಾಕಷ್ಟು ಅನಕೂಲಗಳಿವೆ. ಅದು ಹೇಗೆಂದರೆ ಹಲವು ಬೆಳೆ ಬೆಳೆದಾಗ ಒಂದೊಂದು ಬೆಳೆಯಿಂದಲೂ, ಒಂದೊಂದು ರೀತಿಯ ಆದಾಯ ಸಿಗುತ್ತದೆ. ಅದಷ್ಟೆ ಅಲ್ಲದೆ ವಾತಾವರಣದ ವೈಪರೀತ್ಯದಿಂದಾಗಿ ಒಂದು ಬೆಳೆ ಹಾಳಾದರೂ ಸಹಿತ, ರೈತರಿಗೆ ಒಂದಲ್ಲಾ ಒಂದು ಬೆಳೆಯಿಂದ ಲಾಭ ಸಿಗುವುದು ಕಟ್ಟಿಟ್ಟ ಬುತ್ತಿ.

 

ಇನ್ನು ರೈತರು ಕಡಿಮೆ ಭೂಮಿ ಇದೆ, ಇದರಲ್ಲಿ ವಿವಿಧ ಬೆಳೆ ಬೆಳೆಯುವುದರಿಂದ ಅಧಿಕ ಇಳುವರಿ ಕೈಗೆಟಕವುದಿಲ್ಲ ಎಂಬ ಮಾತಿದೆ. ಆದ್ರೆ ಅಂತರ ಬೆಳೆ ಬೆಳೆದಾಗಲೇ ಹೆಚ್ಚು ಇಳುವರಿಹಾಗೂ ಆದಾಯ  ಪಡೆಯಬಹುದು. ಅದು ಹೇಗೆಂದರೆ ಒಂದು ಬೆಳೆ ಮತ್ತೊಂದು ಬೆಳೆಗೆ ಪೂರಕವಾಗಿರುತ್ತದೆ.

 

ಸಮಗ್ರ ಬೆಳೆ ನಿರ್ವಹಣೆ:

ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮಾಡಿದರೆ, ರೈತರಿಗೆ ಹೆಚ್ಚು ಲಾಭ. ಯಾಕಂದ್ರೆ ಇಲ್ಲಿ ಖರ್ಚು ಕಡಿಮೆಯಾಗುತ್ತೆ.ರೋಗ ಮತ್ತು ಕೀಟ ಬಾಧೆ ನಿಯಂತ್ರಣದಲ್ಲಿರುತ್ತದೆ. ಅಷ್ಟೇ ಅಲ್ಲ ಸಮಗ್ರ ಪೋಷಕಾಂಶಗಳು, ಬೆಳೆಗಳಿಗೆ ಸರಳವಾಗಿ ದೊರೆಯುತ್ತದೆ. ಭೂಮಿ ಮತ್ತಷ್ಟು ಫಲವತ್ತಾಗುತ್ತದೆ.

 

ಕೀಟ ಮತ್ತು ರೋಗ ಬಾಧೆ:

ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ಬಾಧೆಯನ್ನ ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಬಹುದು. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುವುದಿಲ್ಲ. ಜತೆಗೆ ಬೆಳೆಗಳ ರೋಗ ನಿರೋಧಕ ಶಕ್ತಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಸರಳವಾಗಿ ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆಗಳನ್ನ ಕಾಪಾಡಿಕೊಳ್ಳಬಹುದು.

ಒಟ್ಟಾರೆಯಾಗಿ ಕೃಷಿಯಲ್ಲಿ ಕೃಷಿಕರು, ಏಕ ಬೆಳೆ ಪದ್ಧತಿ ನಂಬದೆ ಸಾವಯವ ಸಮಗ್ರ ಬೆಳೆಗಳತ್ತ ತಮ್ಮ ಚಿತ್ತ ಹರಿಸಲಿ. ಇದರಿಂದ ಕೃಷಿಕರು ಆರ್ಥಿಕವಾಗಿ ಸುಧಾರಣೆ ಕಾಣಬಹುದು.

 

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=glToEHYtTZA

 




Blog




Home    |   About Us    |   Contact    |   
microbi.tv | Online Marketing with SEO Catalogs in India | Powered by Ocat SEO Catalogs